Home ಕರ್ನಾಟಕ ಶಾಸಕ ಅರವಿಂದ್​ ಬೆಲ್ಲದ್​ ಫೋನ್ ಕದ್ಧಾಲಿಕೆಯ ಆರೋಪ

ಶಾಸಕ ಅರವಿಂದ್​ ಬೆಲ್ಲದ್​ ಫೋನ್ ಕದ್ಧಾಲಿಕೆಯ ಆರೋಪ

498
0

ಬೆಂಗಳೂರು:

ಶಾಸಕ ಅರವಿಂದ್​ ಬೆಲ್ಲದ್​ ಇದೀಗ ಫೋನ್ ಕದ್ಧಾಲಿಕೆಯ ಆರೋಪ ಮಾಡಿದ್ದಾರೆ. ನನ್ನ ಫೋನ್ ಟ್ಯಾಪ್ ಆಗಿದೆ. ನನ್ನನ್ನ ಫಾಲೋ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.

ಕುಮಾರಕೃಪಾ ಗೆಸ್ಟ್​ಹೌಸ್​ ಬಳಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್, ಕಳೆದ ಒಂದು ತಿಂಗಳಿನಿಂದ ನನ್ನ ಫೋನ್​ ಟ್ಯಾಪ್ ಆಗುತ್ತಿದೆ. ನನಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ಯಾರೆಂದು ಕೇಳಿದಾಗ ಯುವರಾಜ ಸ್ವಾಮಿ ಎಂದು ಹೇಳಿಕೊಂಡರು. ನನಗೇಕೋ ಈ ಕರೆ ಸರಿ ಎನಿಸದ ಕಾರಣ ನಾನು ಕರೆಯನ್ನ ಕಟ್​ ಮಾಡಿದೆ.

Arvind Bellad letter to Karnatakas speaker

ಆದರೆ ಈ ಘಟನೆ ನಡೆದು ಮೂರ್ನಾಲ್ಕು ದಿನಗಳ ಬಳಿಕ ನನ್ನ ಮೊಬೈಲ್ ​ಗೆ ಮತ್ತೊಮ್ಮೆ ಕರೆ ಬಂದಿತ್ತು. ಆಗಲೂ ಸಹ ತಾನು ಯುವರಾಜ ಸ್ವಾಮಿ ಎಂದು ಹೇಳಿಕೊಂಡ ವ್ಯಕ್ತಿ, ನನ್ನನ್ನ ಅನವಶ್ಯಕವಾಗಿ ಜೈಲಿಗೆ ಹಾಕಿದ್ದಾರೆ. ನನಗೆ ಸಹಾಯ ಮಾಡಿ ಎಂದಿದ್ದರು. ಆದರೆ ಈ ಕರೆಯ ಹಿಂದೆ ನನ್ನ ವಿರುದ್ಧ ದೊಡ್ಡ ಪಿತೂರಿಯೇ ಇದೆ. ಈ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದೇನೆ. ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದರು.

LEAVE A REPLY

Please enter your comment!
Please enter your name here