Home ಬೆಂಗಳೂರು ನಗರ ನೈತಿಕ ಪೋಲಿಸನ್ನು ಸಮರ್ಥಿಸಿದ ಕಾರಣಕ್ಕೆ ಕರ್ನಾಟಕ ಸಿಎಂಗೆ ಲೀಗಲ್ ನೋಟಿಸ್

ನೈತಿಕ ಪೋಲಿಸನ್ನು ಸಮರ್ಥಿಸಿದ ಕಾರಣಕ್ಕೆ ಕರ್ನಾಟಕ ಸಿಎಂಗೆ ಲೀಗಲ್ ನೋಟಿಸ್

65
0

ಬೆಂಗಳೂರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ, ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿ ನೀಡಿದ ಹೇಳಿಕೆ ಬಗ್ಗೆ ಆಲ್ ಇಂಡಿಯಾ ಲಾಯಾರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ , ಅವರಿಗೆ ನೋಟೀಸ್ ನೀಡಿದೆ.

ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಅವರು ಮಾಡಿದ‌ ಪ್ರಮಾಣಕ್ಕೆ ವಿರುದ್ದವಾಗಿದೆ, ಇದು ಸಂವಿಧಾನದ ಉಲ್ಲಂಘನೆಯಾಗಿದೆ ಹಾಗು ಸರ್ವೋಚ್ವ ನ್ಯಾಯಲಯ ಅಂತರ್ ಜಾತಿ ಹಾಗು ಅಂತರ್ ಧರ್ಮ ವಿವಾಹಗೊಂಡವರ ರಕ್ಷಣೆ ಬಗ್ಗೆ ನೀಡಿದ ತೀರ್ಪುಗಳ‌ ಸ್ಪಷ್ಟ ‌ಉಲ್ಲಂಘನೆಯಾಗಿದೆ ಹಾಗಾಗಿ ನೋಟೀಸ್ ನೀಡಲಾಗಿದೆ.

Also Read: Karnataka CM gets legal notice for ‘justifying’ moral policing

Notice-to-CM

ನೋಟೀಸ್ ಮೂಲಕ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು, ಅದಕ್ಕೆ ಕ್ಷಮೆಯಾಚಿಸಬೇಕು ಹಾಗು ಸಂವಿಧಾನದ ಮೌಲ್ಯಗಳನ್ನು ಎತ್ತುಹಿಡಿಯಲು ಕೂಡಲೆ‌ ಕ್ರಮ ತೆಗೆದುಕೊಳ್ಲಬೇಕು ಹಾಗು ಸರ್ವೋಚ್ಚ ನ್ಯಾಯಾಲಯವು ಶಕ್ತಿವಾಹಿಣಿ ಹಾಗು ತೆಹ್ಸೀನ್ ಪೂನಾವಾಲ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.

LEAVE A REPLY

Please enter your comment!
Please enter your name here