ಕಾಂಗ್ರೆಸ್ ಪಾರ್ಟಿ 100 ಕೋಟಿ ಲಸಿಕೆ ರಾಜಕೀಯ

    223
    0
    Prakash Sesharaghavachar

    ಕಾಂಗ್ರೆಸ್ಸ್ ಜನರ ಸಂಕಟ ಆತಂಕದಲ್ಲಿರುವ ಸಮಯದಲ್ಲಿ ಜನರ ಭಾವನೆಯೊಂದಿಗೆ ಚಲ್ಲಾಟವಾಡುವುದು ಅಮಾನವೀಯ ಹಾಗೂ ರಾಜಕೀಯ ಲಾಭಕ್ಕಾಗಿ ಜನರ ನೋವನ್ನು ಬಂಡವಾಳ ಮಾಡಿಕೊಳ್ಳುವುದು ಅತ್ಯಂತ ಹೇಯವಾದ ಕೃತ್ಯ

    ಕಾಂಗ್ರೆಸ್ಸ್ ಜನರ ಸಂಕಟ ಆತಂಕದಲ್ಲಿರುವ ಸಮಯದಲ್ಲಿ ಜನರ ಭಾವನೆಯೊಂದಿಗೆ ಚಲ್ಲಾಟವಾಡುವುದು ಅಮಾನವೀಯ ಹಾಗೂ ರಾಜಕೀಯ ಲಾಭಕ್ಕಾಗಿ ಜನರ ನೋವನ್ನು ಬಂಡವಾಳ ಮಾಡಿಕೊಳ್ಳುವುದು ಅತ್ಯಂತ ಹೇಯವಾದ ಕೃತ್ಯ.

    ಲಸಿಕೆ ಖರೀದಿಸಲು ಕಾಂಗ್ರೆಸ್ ಪಾರ್ಟಿ 100 ಕೋಟಿ ರೂಪಾಯಿ ಕೊಡಲು ನಿರ್ಧರಿಸಿದೆ ಎಂದು ಡಿ.ಕೆ.ಶಿವಕುಮಾರ್ ಘೋಷಿಸಿದ್ಗಾರೆ ಪ್ರತಿಯೊಬ್ಬರು ಇದನ್ನು ಪಕ್ಷಾತೀತವಾಗಿ ಸ್ವಾಗತಿಸಬೇಕು.

    ಅವರು ಮುಂದುವರೆದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ, ಕಾಂಗ್ರೇಸ್ ಪಾರ್ಟಿಗೆ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ

    ರಾಜಕೀಯ ಪಕ್ಷವೊಂದು ಉಚಿತವಾಗಿ ಕೊವಿಡ್ -19 ಲಸಿಕೆ ನೀಡಲು ನೂರು ಕೋಟಿ ಬಂಡವಾಳ ಹಾಕಲು ಮುಂದಾಗಿರುವುದು ಮೆಚ್ಚತಕ್ಕೆ ವಿಚಾರವೇ.

    ಬಹುತೇಕ ಪತ್ರಿಕೆಗಳು ಕಾಂಗ್ರೆಸ್ ಪಕ್ಷದ ಈ ಯೋಜನೆಗೆ ದೊಡ್ಡ ಮಟ್ಟದ ಪ್ರಚಾರವನ್ನು ನೀಡಿದ್ದಾರೆ. ಅದು ಸರಿಯೂ ಕೂಡಾ. ಯಾರಾದರು ನೂರು ಕೋಟಿ ವೆಚ್ಚ ಮಾಡಿ ಉಚಿತ ಲಸಿಕೆಗಾಗಿ ನೀಡಲು ನಿರ್ಧರಿಸಿರುವುದು ಸಾಮಾನ್ಯ ಸುದ್ದಿಯಲ್ಲ.

    ಎರಡು ವಿಚಾರಗಳನ್ನು ಕಾಂಗ್ರೆಸ್ ಪಾರ್ಟಿ ಜನರಿಗೆ ಸ್ಪಷ್ಟನೆ ನೀಡಬೇಕು. ಕಳೆದ ಬಾರಿ ಲಾಕ್ ಡೌನ್ ಆದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಪ್ರಯಾಣ ಭತ್ಯೆಯನ್ನು ಪಕ್ಷವು ಭರಿಸುತ್ತದೆ ಎಂದು ಘೋಷಣೆ ಮಾಡಿದ್ದರು. ಎರಡನೆಯದು ಬೆಂಗಳೂರಿನಿಂದ ತಮ್ಮ ಜಿಲ್ಲೆಗಳಿಗೆ ಹಿಂದಿರುಗುತ್ತಿದ್ದವರಿಗೆ ಉಚಿತವಾಗಿ ಪ್ರಯಾಣಿಸಲು ಒಂದು ಕೋಟಿ ನೀಡುವುದಾಗಿ ಚಕ್ ಕೂಡಾ ಕಳುಹಿಸಿದ್ದರು.

    ವಲಸೆ ಕಾರ್ಮಿಕರ ಸಾರಿಗೆ ವೆಚ್ಚವನ್ನು ಎಷ್ಟು ಜನರಿಗೆ ಭರಿಸಿದರು ಅದಕ್ಕಾಗಿ ಪಕ್ಷ ಮಾಡಿದ ಒಟ್ಟು ವೆಚ್ಚದ ವಿವರ ಹಾಗೂ KSRTC ಗೆ ಸಂದಾಯ ಮಾಡಿದ್ದ ಒಂದು ಕೋಟಿ ಚೆಕ್ ನಗದಾಯಿತಾ? ಇಲ್ಲವಾ? ಆಗಿಲ್ಲದಿದ್ದರೆ ಇದರ ಬಗ್ಗೆ ಪಕ್ಷ ಕೈಗೊಂಡ ಕ್ರಮವಾದರು ಏನು? ಎಂಬುದನ್ನು ಜನರಿಗೆ ಮಾಹಿತಿ ನೀಡುವುದು ಇವರ ಕರ್ತವ್ಯವಾಗಿದೆ.

    Karnataka Congress 100 crore plan
    ಚಿತ್ರ ಮೂಲ: @INC ಕರ್ನಾಟಕ ಟ್ವಿಟರ್

    ಹಿಂದೆ ನೀಡಿದ ಆಶ್ವಾಸನೆಗಳ ಕುರಿತು ಪಾರದರ್ಶಕವಾಗಿ ಜನರೊಂದಿಗೆ ಮಾಹಿತಿ ಹಂಚಿಕೊಂಡರೆ ಇಂದು ಮಾಡಿರುವ ಆಶ್ವಾಸನೆ ಬೆಲೆ ಬರುವುದು ಖಚಿತ.

    ಲಸಿಕೆಗಾಗಿ ನೂರು ಕೋಟಿ ಘೋಷಿಸಿದ ಕಾಂಗ್ರೆಸ್ ಅದನ್ನು ಹೇಗೆ ಸಂಗ್ರಹಿಸಲಾಗುವುದು ಎಂಬ ಸಂಗತಿಯನ್ನು ಸಿದ್ದರಾಮಯ್ಯನವರು ಹಂಚಿಕೆೊಂಡಿದ್ದಾರೆ. ರಾಜ್ಯ ವಿಧಾನ ಸಭೆಯಲ್ಲಿ 68 ಕಾಂಗ್ರೆಸ್ ಸದಸ್ಯರು ಮತ್ತು 29 ವಿಧಾನ ಪರಿಷತ್ ಸದಸ್ಯರು ಮತ್ತು 7 ಸಂಸದರು ಇದ್ದಾರೆ ಇವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ನೀಡುವರು ಮತ್ತು ಪಕ್ಷ ಹತ್ತು ಕೋಟಿ ನೀಡುವುದು ಎಂದು ಉದಾರವಾಗಿ ಘೋಷಿಸಿದ್ದಾರೆ

    ರಾಜ್ಯ ಸರ್ಕಾರ ಪ್ರತಿಯೊಬ್ಬ ಶಾಸಕರಿಗೆ ವಾರ್ಷಿಕ 2ಕೋಟಿ ಕ್ಷೇತ್ರಾಭಿವೃದ್ಧಿ ನಿಧಿಯನ್ನು ನೀಡುತ್ತದೆ. ಈ ಹಣವು ತೆರಿಗೆಯಿಂದ ಸಂಗ್ರಹವಾದ ದುಡ್ಡಿನಲ್ಲಿ ನೀಡುವ ಯೋಜನೆ. ಕಾಲಕಾಲಕ್ಕೆ ಸರ್ಕಾರ ಹಣಕಾಸು ಲಭ್ಯತೆಯ ಆಧಾರದ ಮೇಲೆ ಕಂತಿನಲ್ಲಿ ಈ ನಿಧಿಯನ್ನು ಬಿಡುಗಡೆ ಮಾಡುತ್ತದೆ. ಈ ಹಣವು ಸರ್ಕಾರದ ಹಣ ಶಾಸಕರ ವೈಯಕ್ತಿಕ ಹಣವಲ್ಲ. ತುರ್ತು ಸಂದರ್ಭದಲ್ಲಿ ಈ ಅನುದಾನವನ್ನು ಸರ್ಕಾರ ನೇರವಾಗಿ ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಿರುವ ದೃಷ್ಟ್ಯಾಂತಗಳು ಈ ಹಿಂದೆ ಇರುವುದು.

    ಈ ನಿಧಿಯನ್ನು ಬಳಸಿಕೊಂಡು ಲಸಿಕೆ ಖರೀದಿಸಲಾಗುವುದು ಎಂದು ಘೋಷಿಸಿರುವ ಹಿನ್ನಲೆಯಲ್ಲಿ ರಾಜಕೀಯ ದುರುದ್ಧೇಶವಿಲ್ಲ ಎಂದು ನಂಬಲು ಕಷ್ಟವೆ. ಮುಂಬರುವ ದಿನಗಳಲ್ಲಿ ತನ್ನ ಶಾಸಕರ ನಿಧಿಯನ್ನು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಲು ಆರಂಭಿಸುತ್ತದೆ. ತಡವಾದರೆ ನಾವು ಲಸಿಕೆಗಾಗಿ ನಮ್ಮ ಶಾಸಕರ ನಿಧಿಯನ್ನು ಬಿಡುಗಡೆ ಮಾಡಿ ಎಂದು ವಿನಂತಿಸಿದರೆ ಸರ್ಕಾರ ಲಸಿಕೆಯು ನೀಡುತ್ತಿಲ್ಲ ನಮಗೂ ಲಸಿಕೆ ಖರೀದಿಗೆ ಅವಕಾಶ ನಿರಾಕರಿಸಿ ರಾಜಕೀಯ ಮಾಡುತ್ತಿದೆ ಎಂದು ಹುಯಿಲೆಬ್ಬಿಸುವುದು ಈ ಯೋಜನೆಯ ಹಿಂದಿನ ತಂತ್ರಗಾರಿಕೆ ಇರುವಂತೆ ಕಾಣುತ್ತಿದೆ.

    ಕಾಂಗ್ರೆಸ್ ಪಾರ್ಟಿ ಲಸಿಕೆಯ ನೇರ ಖರೀದಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಯಾವುದೆ ಖಾಸಗಿ ಸಂಸ್ಥೆಗಳಿಗೆ ಈವರೆಗೂ ಲಸಿಕೆ ಖರೀದಿಗೆ ಅನುಮತಿ ನೀಡಿಲ್ಲ. ಹೀಗಾಗಿ ಇವರು ನೇರವಾಗಿ ಹೇಗೆ ಖರೀದಿಸುವರು ಗೊತ್ತಿಲ್ಲ.

    ಕೇಂದ್ರದ ಪ್ರಸಕ್ತ ನೀತಿಗನುಣವಾಗಿ ಇವರ ಕೋರಿಕೆಗೆ ಮನ್ನಣೆ ಸಿಗುವುದು ಸಂಭವವಿಲ್ಲ ಆಗ ಇವರ ವರಸೆಯು ಬದಲಾಗಿ ಕೇಂದ್ರ ಸರ್ಕಾರವನ್ನು ದೂಷಿಸಲು ಅವಕಾಶವನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ವೃಥಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಆರೋಪ ಮಾಡುವ ಮೂಲಕ ಜನರ ದಾರಿ ತಪ್ಪಿಸಲು ಇಂತಹ ಕೆಟ್ಟ ತಂತ್ರಗಾರಿಕೆಯು ಇದರ ಹಿಂದಿರುವ ದುರುದ್ದೇಶ ಇರುವುದನ್ನು ತಳ್ಳಿಹಾಕಲಾಗದು.

    ಲಸಿಕೆಯ ಖರೀದಿಯನ್ನು ಕಾಂಗ್ರೆಸ್ ಪಾರ್ಟಿ ಮಾಡುವುದಕ್ಕೆ ಸರ್ಕಾರ ಹಣ ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಸರ್ಕಾರದ ನಿಧಿ ಪಕ್ಷದ ನಿಧಿಗೆ ಹೇಗೆ ವರ್ಗಾಯಿಸಲು ಸಾಧ್ಯ?

    ಶಾಸಕರ ನಿಧಿಯು ಕಾಂಗ್ರೆಸ್ ಪಾರ್ಟಿ ಸ್ವಂತ ನಿಧಿಯಲ್ಲ ಅಥವಾ ಇವರ ಶಾಸಕರ ಸ್ವಂತ ಹಣವಲ್ಲ ಅದು ತೆರಿಗೆ ಕಟ್ಟುವವರ ಹಣ ಅದನ್ನು ಉಪಯೋಗಿಸಿಕೊಂಡು ಲಸಿಕೆ ನೀಡುತ್ತೇವೆ ಎಂದು ಹೇಳುವುದು ವಂಚನೆಗೆ ಸಮವಲ್ಲವೇ?

    ಕಾಂಗ್ರೆಸ್ ತನ್ನ ಸ್ವಂತ ನಿಧಿಯಿಂದ ಹಣವನ್ನು ನೀಡಿ ಲಸಿಕೆ ಯೋಜನೆಯನ್ನು ಕೈಗೊಳ್ಳಬೇಕು. ನಮ್ಮ ದುಡ್ಡುನಲ್ಲಿ ನೀವು ಉಪಕಾರ ಮಾಡುತ್ತಿರುವ ಹಾಗೆ ಆಡುವ ನಾಟಕ ದ ಅವಶ್ಯಕತೆ ಏನಿದೆ?

    ಕಾಂಗ್ರೆಸ್ಸ್ ಜನರ ಸಂಕಟ ಆತಂಕದಲ್ಲಿರುವ ಸಮಯದಲ್ಲಿ ಜನರ ಭಾವನೆಯೊಂದಿಗೆ ಚಲ್ಲಾಟವಾಡುವುದು ಅಮಾನವೀಯ ಹಾಗೂ ರಾಜಕೀಯ ಲಾಭಕ್ಕಾಗಿ ಜನರ ನೋವನ್ನು ಬಂಡವಾಳ ಮಾಡಿಕೊಳ್ಳುವುದು ಅತ್ಯಂತ ಹೇಯವಾದ ಕೃತ್ಯ ಎಂಬುದನ್ನು ಕಾಂಗ್ರೆಸ್ ಮುಖಂಡರು ಮರೆಯಬಾರದು.

    ಆಶ್ಚರ್ಯವೆಂದರೆ ಯಾವುದೇ ಪತ್ರಿಕೆಗಳು ಈ ನಾಯಕರನ್ನು ಈ ನಿಟ್ಚಿನಲ್ಲಿ ಸ್ಪಷ್ಟನೆ ಕೇಳದಿರುವುದು. ಕೇವಲ ರಾಜಕೀಯ ಕಾರಣಗಳಿಗಾಗಿ ಮಾಡಿರುವ ಈ ಯೋಜನೆಯು ಅನುಷ್ಠಾನಗಳ್ಳಲು ಸಾಧ್ಯವೇ ಇಲ್ಲದಿದೇದರೂ ಹೇಗೆ ಜಾರಿಗೆ ತರುತ್ತೀರಾ ಎಂದು ಪ್ರಶ್ನಿಸಬೇಕಾಗಿದೆ.

    ಯಾವುದೇ ನಿಚ್ಚಳವಾದ ರೂಪುರೇಷು ಸಿದ್ದವಿಲ್ಲ. ಲಸಿಕೆಯ ಅಭಿಯಾನ ಕೈಗೊಳ್ಳಲು ನಂಬಲರ್ಹವಾದ ನೀಲಿ ನಕಾಶೆಯು ಇಲ್ಲ ಆದರೂ ಪುಕ್ಕಟ್ಟೆ ಪ್ರಚಾರಕ್ಕೆ ಈ ಕೈಗೂಡದ ಯೋಜನೆಯನ್ನು ಘೋಷಿಸಿರುವುದು ಇದು ಮತ್ತೊಂದು 1971 ರ “ಗರೀಬಿ ಹಟಾವ್” ಯೋಜನೆಯ ಮುಂದುವರೆದ ಭಾಗ ಎಂಬ ಅನುಮಾನಕ್ಕೆ ಕಾರಣವಾಗಿದೆ

    Prakash Sesharaghavachar is a Joint Spokesperson of Karnataka BJP

    Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

    LEAVE A REPLY

    Please enter your comment!
    Please enter your name here