ಆದಿಚುಂಚನಗಿರಿ:
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಕಾಲಭೈರವೇಶ್ವರ ಸ್ವಾಮಿಯ ದರ್ಶನ ಪಡೆದರು.
ನಾಗಮಂಗಲದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡುವುದು ಬಾಲ್ಯದಿಂದಲೂ ಮೈಗೂಡಿಸಿಕೊಂಡಿರುವ ಪರಿಪಾಠ.
— Dr. Ashwathnarayan C. N. (@drashwathcn) July 9, 2021
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಶ್ರೀ ಕ್ಷೇತ್ರ ಕೋವಿಡ್ ಸಂಕಷ್ಟದಲ್ಲೂ ಅನೇಕ ಮಾದರಿ ಕೆಲಸಗಳನ್ನು ನಡೆಸಿದೆ. ಇಂದು ಮಠದಲ್ಲಿ ಡಾ.ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಹಾಗೂ ಯತಿವರ್ಯರ ಆಶೀರ್ವಾದ ಪಡೆದೆ. pic.twitter.com/FAWEc5tjaM
ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮಿ ಅವರ ಜತೆ ದೇವಾಲಯಕ್ಕೆ ತೆರಳಿದ ಅವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀಮಠದ ಗದ್ದುಗೆಯ ದರ್ಶನ ಪಡೆದರು.