Home ಕರ್ನಾಟಕ ಸಚಿವರ ನೇತೃತ್ವದಲ್ಲಿ ಮೃತಪಟ್ಟವರಿಗೆ ಶ್ರದ್ಧಾಪೂರ್ವಕ ವಿದಾಯ

ಸಚಿವರ ನೇತೃತ್ವದಲ್ಲಿ ಮೃತಪಟ್ಟವರಿಗೆ ಶ್ರದ್ಧಾಪೂರ್ವಕ ವಿದಾಯ

32
0

ಕಂದಾಯ ಸಚಿವ ಆರ್.ಅಶೋಕ್‍ರವರು ಬೆಂಗಳೂರಿನ 18 ಚಿತಾಗಾರದಲ್ಲಿ ಶವಸಂಸ್ಕಾರ ಮಾಡಿದ ತರುವಾಯ ಮೃತರ ಬಂಧು ಬಾಂಧವರು ಪಡೆಯದಿದ್ದ್ದ 1,200 ಜನರ ಚಿತಾಭಸ್ಮವನ್ನು. ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳನ್ನು ಅನುಸರಿಸಿ ಕಾವೇರಿ ತೀರದಲ್ಲಿ.

ಗೌರವಾದರಗಳೊಂದಿಗೆ ಅವುಗಳ ಅಸ್ಥಿ ಸಂಚಯನ ನೇರವೇರಿಸಿದರು.

Prakash Sesharaghavachar
Prakash Sesharaghavachar

ಕಳೆದ ಅನೇಕ ದಿನಗಳಿಂದ ನಗರ ವಿವಿಧ ಚಿತಾಗಾರದಲ್ಲಿ ಇಟ್ಟಿದ್ದ ಚಿತಾಭಸ್ಮಗಳಿಗೆ ಅಂತಿಮವಾಗಿ ಪವಿತ್ರ ನದಿಯಲ್ಲಿ ವಿರ್ಸಜಿಸಿ ಅವರೆಲ್ಲರಿಗೂ ಸದ್ಗತಿಯನ್ನು ಕರುಣ ಸುವ ಸುತ್ತಾಹ್ರ್ಯ ಕಾರ್ಯವನ್ನು ಅಶೋಕರವರು ಕೈಗೊಂಡು ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಪರಿಚಿತ ಶವಗಳ ಅಂತ್ಯ ಸಂಸ್ಕಾರವನ್ನು ಸಂಬಂಧ ಪಡೆದ ವ್ಯಕ್ತಿಗಳು ಮಾಡಬಹುದಾ ಎಂಬ ಧರ್ಮದ ಜಿಜ್ಞಾಸೆಯ ಪ್ರಶ್ನೆಗೆ ಗರುಡ ಪುರಾಣದಲ್ಲಿ, ರಾಜ ಬಭ್ರುವಾಹನ ಪ್ರೇತಾತ್ಮವೊಂದರ ಕೋರಿಕೆಯಂತೆ ಅನಾಥ ಶವದ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮೋಕ್ಷ ಕೊಡಿಸುತ್ತಾನೆ. ರಾಜಾ ಪ್ರಜೆಗಳಿಗೆ ಪಿತೃ ಸಮಾನನಾದವನು ಅವನಿಗೆ ಅಂತ್ಯೇಷ್ಟಿ ಮಾಡಲು ಎಲ್ಲ ಹಕ್ಕು ಇರುವುದು ಎಂದು ನಾರಾಯಣನು ಗರುಡನಿಗೆ ಹೇಳುತ್ತಾನೆ.

ಅಸ್ಥಿ ವಿರ್ಸಜನೆಯು ಅಂತ್ಯಸಂಸ್ಕಾರದ ಭಾಗವೇ ಕಾರಣ ದೇಹದ ಭಾಗವಾದ ಮೂಳೆಗಳು ಅಸ್ಥಿಯಲ್ಲಿ ಇರುತ್ತದೆ ಅದು ಮನ್ಯಷ್ಯ ರೂಪದ ಪ್ರತಿನಿಧಿಯಾಗಿರುವುದರಿಂದ ಶಾಸ್ತ್ರಬದ್ಧವಾಗಿ ನದಿಯಲ್ಲಿ ವಿರ್ಸಜನೆ ಮಾಡುವುದೂ ಕೂಡಾ ಅಂತ್ಯ ಸಂಸ್ಕಾರದಷ್ಟೇ ಪವಿತ್ರವಾದ್ದು ಮತ್ತು ಸರ್ವಶ್ರೇಷ್ಠವಾದ ಕಾರ್ಯಾವಾಗಿದೆ. ಗರುಡ ಪುರಾಣದನ್ವಯ ಯಾವುದೇ ಶವವೂ ಅನಾಥವಾಗಿ ಬೀಳಬಾರದು ಅಂತಹ ಶವಗಳಿಗೆ ರಾಜನಾದವನು ಅಥವಾ ಇತರ ಯಾರೆ ಅಂತ್ಯ ಸಂಸ್ಕಾರ ಮಾಡಿದರೆ ಅದು ಜಗತ್ತನ್ನು ಗೆದ್ದ ಚಕ್ರವರ್ತಿಯು ಅಶ್ವಮೇಧ ಯಾಗ ಮಾಡಿದ ಪುಣ್ಯಕ್ಕೆ ಸಮ ಎನ್ನುತ್ತದೆ.

ಶ್ರೀ ವೈಷ್ಣವರಲ್ಲಿ ನಲ್ಲಾನ್ ಚಕ್ರವರ್ತಿ ಎಂಬ ಪಂಗಡವೊಂದಿದೆ. ರಾಮಾನುಜಾಚಾರ್ಯರ ಕಾಲದಲ್ಲಿ ಶ್ರೀ ವೈಷ್ಣವನೊಬ್ಬನು ಯಾರೂ ಅಂತ್ಯಸಂಸ್ಕಾರ ಮಾಡಲು ಸಿದ್ದವಿಲ್ಲದ ಅನಾಥ ಶವಕ್ಕೆ ಶಾಸ್ತ್ರಬದ್ಧವಾಗಿ ಶವಸಂಸ್ಕಾರ ಮಾಡಿದನಂತೆ ಇವನ ಕಾರ್ಯಕ್ಕೆ ಮೆಚ್ಚಿ ದೈವ
ಕಾಣ ಸಿಕೊಂಡು ನಿಂದಾನ್ ಚಕ್ರವರ್ತಿ ಅಂದರೆ ನೀನೆ ಚಕ್ರವರ್ತಿ ಎಂದು ಹರಸುತ್ತಾರಂತೆ ಇಂದಿಗೂ ನಲ್ಲಾನ್ ಚಕ್ರವರ್ತಿಗಳ ದೊಡ್ಡ ಪಂಗಡವೇ ಇರುವುದು.

Karnataka Minister led Goodbye farewell to the dead1

ಗರುಡ ಪುರಾಣ, ರಾಮಾಯಣ ಮತ್ತು ಭಾಗವತದಲ್ಲಿ ಅನಾಥ ಶವಗಳಿಗೆ ಸದ್ಗತಿ ಕೊಡಿಸುವವರ ಮೇಲೆ ಭಗವಂತನ ಕೃಪೆ ಇರುತ್ತದೆ ಎಂದು ಅಂತ್ಯಕ್ರಿಯೆ ಮಾಡುವುದಕ್ಕೆ ಪವಿತ್ರವಾದ ಸ್ಥಾನವನ್ನು ನೀಡಿದೆ. ಕೊರೋನಾ ಎರಡನೆಯ ಅಲೆಯು ಬಿರುಗಾಳಿ ವೇಗದಲ್ಲಿ ದೇಶಾದ್ಯಂತ ಹರಡಿತು. ಕಳೆದ ಬಾರಿ ಪ್ರತಿದಿನ ಒಂದು ಲಕ್ಷ ಪ್ರಕರಣಗಳು ದಾಟಿರಲಿಲ್ಲ ಆದರೆ ಈ ಬಾರಿ 15 ದಿನದಲ್ಲಿ ಪ್ರತಿನಿತ್ಯ 4 ಲಕ್ಷ ಪ್ರಕರಣಗಳು ದಾಖಲಾಗಿ ಮೂಲಭೂತ ವ್ಯವಸ್ಥೆಯು ಕುಸಿದು ಜನ ಪರದಾಡುವಂತಾಯಿತು. ಹೊಸ ಪ್ರಕರಣಗಳು ಹೆಚ್ಚಾದ ಹಾಗೆ ಸಾವಿನ ಸಂಖ್ಯೆಯು ಪ್ರತಿದಿನ ದೇಶದಲ್ಲಿ 4 ಸಾವಿರವನ್ನು ತಲುಪಿತು. ಕರ್ನಾಟಕದಲ್ಲಿ 500 ಸಂಖ್ಯೆಯನ್ನು ತಲುಪಿತು. ಅನೇಕ ಕುಟುಂಬಗಳಲ್ಲಿ ಒಂದಕ್ಕಿಂತ ಹೆಚ್ಚು ಮೃತಪಟ್ಟಿದ್ದಾರೆ. ಮತ್ತು ಅನೇಕ ತಂದೆ ತಾಯಿಯರು ತೀರಿಕೊಂಡು ಮಕ್ಕಳು ತಬ್ಬಲಿಯಾಗಿದ್ದಾರೆ. ಇಂತಹ ಘೋರ ಸನ್ನಿವೇಶದಲ್ಲಿ ಜನರು ಹೊರ ಬರಲೇ ಹೆದರಿ ನಡುಗಿ ಹೋಗಿದ್ದರು. ಕೊರೋನಾ ಪೀಡಿತರಾಗಿ ಮೃತಪಟ್ಟವರನ್ನು ಅನೇಕ ಸಂದರ್ಭಗಳಲ್ಲಿ ಅನ್ಯಮಾರ್ಗವಿಲ್ಲದೆ ಬಿ.ಬಿ.ಎಂ.ಪಿ ಸಿಬ್ಬಂದಿಗಳು ಅಂತ್ಯ ಸಂಸ್ಕಾರ ಮಾಡುತ್ತಲಿದ್ದಾರೆ.

ನಗರದ ಸ್ಮಶಾನದಲ್ಲಿ ಮೃತ ಪಟ್ಟವರ ಬಂಧುಗಳು ಚಿತಾಭಸ್ಮಗಳನ್ನು ಪಡೆಯದಿರಲು ನಾಲ್ಕು ಕಾರಣಗಳನ್ನು ಕಂದಾಯ ಸಚಿವ ಆರ್.ಅಶೋಕ್ ಪಟ್ಟಿ ಮಾಡುತ್ತಾರೆ. ಇಡಿ ಕುಟುಂಬವೇ ಕೊರೋನಾಗೆ ಬಲಿಯಾದ ಮನೆಯವರು, ಮನೆಯಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡು ಕೇವಲ ಚಿಕ್ಕ ಮಕ್ಕಳು ಇರುವ ಮನೆಯವರು, ಮನೆಯವರೆಲ್ಲ ಕೊರೋನಾ ಪೀಡಿತರಾಗಿ ಹೊರಗೆ ಬರದಂತಾಗಿರುವುದು, ಮೃತಪಟ್ಟವರ ಕುಟುಂಬದ ಸದಸ್ಯರು ಚಿತಾಭಸ್ಮವನ್ನು ಪಡೆಯಲು ಹೆದರಿಕೊಂಡವರು ಹಾಗೂ ತಂದೆ ತಾಯಿ ಮೃತಪಟ್ಟ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದವರು ಚಿತಾಭಸ್ಮವನ್ನು ಪಡೆಯದೆ ಹಾಗೆ ಬಿಟ್ಟಿರುವರು ಎಂದು ವಿವರಿಸುತ್ತಾರೆ.

ಸ್ಮಶಾನಗಳಲ್ಲಿ ಶೇಖರಣೆಯಾಗಿದ್ದ ಚಿತಾಭಸ್ಮಗಳನ್ನು ಕೊಂಡೊಯ್ಯಲು ಸಂಬಂಧಪಟ್ಟ ಕುಟುಂಬಗಳಿಗೆ ತಿಳಿಸಲು ಸಿಬ್ಬಂದಿಗಳು ಹರಸಾಹಸ ಮಾಡಿದ್ದಾರೆ. ಕೊಟ್ಟಿದ್ದ ಮೊಬೈಲ್ ಸಂಖ್ಯೆಯು ಸ್ವಿಚ್ ಆಫ್ ಆಗಿದ್ದವು ಹಲವು ಮೊಬೈಲ್ ಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಮೃತರ ಬಂಧುಗಳು ಪಡೆಯದಿರುವ ಚಿತಾಭಸ್ಮಗಳು ರಾಜ್ಯಾದ್ಯಂತ್ಯ ಸಾವಿರಾರು ಸಂಖ್ಯೆಯಲ್ಲಿದೆ. ಇವುಗಳ ವಿರ್ಸಜನೆ ಹೇಗೆ? ಇದೊಂದು ಅತ್ಯಂತ ಸೂಕ್ಷ್ಮ ವಿಚಾರವಾದ ಕಾರಣ ಹೇಗೆ ಇವುಗಳಿಗೆ ಅಂತ್ಯ ಕಾಣ ಸಬೇಕು ಎಂದು ಜಿಲ್ಲಾಧಿಕಾರಿಗಳು ಗೊಂದಲದಲ್ಲಿ ಇದ್ದ ವೇಳೆಯಲ್ಲಿ ಸಚಿವ ಅಶೋಕ್‍ರವರು ಇವುಗಳ ಅಂತ್ಯೇಷ್ಟಿಯನ್ನು ನಾನೇ ಮಾಡುತ್ತೇನೆ ಎಂದು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ಇದೊಂದು ಸುಲಭವಾಗಿ ಕೈಗೊಳ್ಳುವ ನಿರ್ಧಾರವಾಗಿರಲ್ಲಿಲ್ಲ ಇದಕ್ಕೆ ಕುಟುಂಬದವರ ಬೆಂಬಲ ಅತ್ಯಾವಶ್ಯಕವಾಗಿತ್ತು ಮತ್ತು ಇದನ್ನು ಮಾಡಲು ಗಟ್ಟಿ ಗುಂಡಿಗೆಯು ಬೇಕಾಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಇದು ಧರ್ಮಸಮ್ಮತವಾ ಎಂಬ ಸಂದೇಹಕ್ಕೆ ಪರಿಹಾರವೂ ಅಗತ್ಯವಿತ್ತು. ಚಂದ್ರ ಗುಪ್ತನ ಮೌರ್ಯನ ಪುತ್ರ ಬಿಂದೂಸಾರನಿಗೆ ಇದೇ ರೀತಿಯ ಸಮಸ್ಯೆಯು ಎದುರಾದ ವೇಳೆ ರಾಜನಾದವನು ಪ್ರಜೆಗಳಿಗೆ ತಂದೆಯ ಸಮನಾದ ಕಾರಣ ಅಪರಿಚಿತರ ಅಂತ್ಯಕ್ರಿಯೆ ಮಾಡುವುದು ಕರ್ತವ್ಯ ಎಂದು ಚಾಣಕ್ಯ ಸಲಹೆ ನೀಡಿದನೆಂದು ಇತಿಹಾಸದ ಪುಟಗಳು ಹೇಳುತ್ತದೆ. ಈ ಸಲಹೆಯೇ ಚಿತಾಭಸ್ಮಕ್ಕೆ ಮುಕ್ತಿ ನೀಡಲು ಪ್ರೇರಣೆಯಾಯಿತು ಎಂದು ಸಚಿವ ಅಶೋಕ್ ತಿಳಿಸುತ್ತಾರೆ.

ಕೊರೋನಾ ಪೀಡಿತ ಶವಗಳನ್ನು ನದಿಗೆ ಎಸೆದಿರುವ ಚಿತ್ರಗಳನ್ನು ನೋಡುತ್ತಿರುವ ವೇಳೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಚಿವರೆ ನಿಂತು ಸಾವಿರಾರು ಜನರ ಅಸ್ಥಿಯನ್ನು ಗೌರವಪೂರ್ವಕವಾಗಿ ವಿರ್ಸಜನೆ ಮಾಡುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಕಿಂಚಿತ್ತು ಅಪಚಾರವಾಗದ ಹಾಗೆ ಅವುಗಳಿಗೆ ಸದ್ಗತಿ ಕೊಡಿಸುವ ಪುಣ್ಯ ಕೆಲಸಕ್ಕೆ ಅಶೋಕ್ ಮುಂದಾಗಿ ರಾಜ್ಯದ ಜನರ ಮೆಚ್ಚುಗೆಗೆ ಪಾತ್ರರಾದರು.

ಸರ್ಕಾರ ಈಗಾಗಲೇ ಸುತ್ತೊಲೆಯನ್ನು ಹೊರಡಿಸಿ ರಾಜ್ಯದಲ್ಲಿ ಯಾರು ಪಡೆಯದಿರುವ ಚಿತಾಭಸ್ಮಗಳನ್ನು ಜಿಲ್ಲಾಧಿಕಾರಿಗಳು ಸಕಲ ಗೌರವ ಮತ್ತು ಶ್ರದ್ದೆಯಿಂದ ಅವುಗಳನ್ನು ನದಿಯಲ್ಲಿ ವಿರ್ಸಜಿಸಬೇಕು ಎಂದು ತಿಳಿಸಲಾಗಿದೆ.

Karnataka Minister led Goodbye farewell to the dead

ಈ ಮೃತಪಟ್ಟವರ ಬಂಧುಗಳು ಮರಣ ಪ್ರಮಾಣ ಪತ್ರ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ಸೂಕ್ತ ದಾಖಲೆಗಳನ್ನು ಮೃತರ ಬಂಧುಗಳು ನೀಡಿದರೆ ಅವರಿಗೆ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶಿಸಲಾಗಿದೆ.

ಕೊರೋನಾ ಕೇವಲ ಜೀವನವನ್ನು ನಲುಗಿಸಿಲ್ಲ ನಮ್ಮ ಅತಃಸತ್ವವನ್ನೇ ಉಡುಗಿಸಿ ಬಿಟ್ಟಿದೆ ಎಂದರೆ ತಪ್ಪಲ್ಲಾ. ದುರಂತದ ಮತ್ತು ದುಃಖದ ಈ ಗಳಿಗೆಯಲ್ಲಿ ಸಚಿವರ ಈ ಕೆಲಸವು ನಿಶ್ಚಿತವಾಗಿ ಭಯದಿಂದ ಕಮರಿ ಹೋಗುತ್ತಿರುವ ಮಾನವೀಯತೆಯು ಜಾಗೃತವಾಗಿ ಚಿತಾಭಸ್ಮ ಪಡೆಯದವರು ಧೈರ್ಯವಾಗಿ ಪಡೆದು ತಮ್ಮ ಅಂತಿಮ ಕರ್ತವ್ಯ ನೆರವೇರಿಸಲು ಸಾಧ್ಯವಾಗಲಿದೆ.

ಅನಾಥವಾಗಿ ಎಲ್ಲೊ ತಲುಪುತ್ತಿದ್ದ ಚಿತಾಭಸ್ಮ ಗೌರವಪೂರ್ವಕವಾಗಿ ತಾಯಿ ಕಾವೇರಿಯ ಮಡಿಲನ್ನು ಸೇರಿತ್ತಲ್ಲಾ ಎಂದು ಸಮಾಧಾನದ ನಿಟ್ಟುಸಿರು ಬಿಡುವ ಬದಲು ಮೊಸರಲ್ಲಿ ಕಲ್ಲನ್ನು ಹುಡುಕುವ ಹಾಗೆ ಕಾಂಗ್ರೆಸ್ ಪಾರ್ಟಿಯ ವಕ್ತಾರರು ರಾಜಕೀಯ ಮಾಡಲು ಮುಂದಾಗಿರುವುದು ಸೂಕ್ತವಲ್ಲ. ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಜನರ ನಂಬಿಕೆಯನ್ನು ಕಳೆಯುವ ಅಥವಾ ಹೀಗೆಳೆಯುವ ಪ್ರಯತ್ನ ಮಾಡುವುದು ತಪ್ಪಾಗುತ್ತದೆ.

ಪ್ರಪಂಚದಲ್ಲಿ ಕೊರೋನಾ ಸೋಂಕಿನಿಂದ ಸಂಕಟ ಅನುಭವಿಸದಿರುವ ದೇಶವೇ ಇಲ್ಲ ಮತ್ತು ವಿಶ್ವಾದ್ಯಂತ್ಯ ಲಕ್ಷಾಂತರ ಮಂದಿಯ ಬಲಿಯನ್ನೂ ಪಡೆದಿದೆ. ಇಂತಹ ಸಂಕಷ್ಟದಲ್ಲಿ ಕನಿಷ್ಠ ಮೃತಪಟ್ಟವರಿಗೆ ಗೌರವಯುತವಾಗಿ ಕಳುಹಿಸಿಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ ಅದನ್ನು ಸೂಕ್ತವಾಗಿ ನಿರ್ವಹಿಸಿರುವುದು ಮೆಚ್ಚ ಬೇಕಾದ ಸಂಗತಿ. ಮುಂದಿನ ದಿನಗಳಲ್ಲಿ ಸಾವಿನ ಈ ಸರಣಿಯ ಅಂತ್ಯಗೊಂಡು ಸಮಾಜವು ತನ್ನ ಸಹಜ ಸ್ಥಿತಿಗೆ ತಲುಪಲಿ ಎಂಬುವುದೆ ಎಲ್ಲರ ಪ್ರಾರ್ಥನೆ.

ಪ್ರಕಾಶ್ ಶೇಷರಾಘವಾಚಾರ್,
sprakashbjp@gmail.com

Prakash Sesharaghavachar is a Joint Spokesperson of Karnataka BJP

Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

LEAVE A REPLY

Please enter your comment!
Please enter your name here