ಈಗ ವಾಟ್ಸಾಪ್ ಮೂಲಕವೇ ಜಿಯೋ ರೀಚಾರ್ಜ್ ಮಾಡಿ: ಜಿಯೋದಿಂದ ಗ್ರಾಹಕರಿಗೆ ಹೊಸ ಸೇವೆ

    71
    0
    Advertisement
    bengaluru

    ಬೆಂಗಳೂರು:

    ತನ್ನ ಬಳಕೆದಾರರಿಗೆ ಹೊಸ ಸೇವೆಗಳನ್ನು ಒದಗಿಸುತ್ತಾ ಬಂದಿರುವ ಭಾರತದ ಅತಿ ದೊಡ್ಡ ದೂರಸಂಪರ್ಕ ಸಂಸ್ಥೆ ಜಿಯೋ, ಮತ್ತೊಂದು ವಿನೂತನ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಜಿಯೋ ಬಳಕೆದಾರರು ಇನ್ನು ಮುಂದೆ ವಾಟ್ಸಾಪ್ ಮೂಲಕ ಇನ್ನಷ್ಟು ಸುಲಭವಾಗಿ ರೀಚಾರ್ಜ್‌ ಮಾಡಬಹುದು.

    ಜಿಯೋ ಗ್ರಾಹಕರು ಈಗ ರೀಚಾರ್ಜ್, ಹಣ ಪಾವತಿ, ತಮ್ಮ ಅಹವಾಲುಗಳಿಗೆ ಉತ್ತರ, ದೂರು ನೀಡುವುದು ಮತ್ತು ಇನ್ನೂ ಅನೇಕ ಚಟುವಟಿಕೆಗಳನ್ನು ವಾಟ್ಸಾಪ್ ಮೂಲಕವೇ ಮಾಡಬಹುದಾಗಿದೆ. ಹೊಸ ಜಿಯೋ ಸಿಮ್ ಪಡೆಯಲು ಅಥವಾ ಪೋರ್ಟ್ ಮಾಡಲು (ಎಂಎನ್‌ಪಿ), ಜಿಯೋ ಸಿಮ್‌ಗೆ ಇರುವ ಸವಲತ್ತುಗಳನ್ನು ತಿಳಿಯಲು, ಜಿಯೋ ಫೈಬರ್ ಹಾಗೂ ಜಿಯೋ ಮಾರ್ಟ್ ಸೌಲಭ್ಯ ಹಾಗೂ ಅಂತಾರಾಷ್ಟ್ರೀಯ ರೋಮಿಂಗ್ ಸವಲತ್ತುಗಳನ್ನು ವಾಟ್ಸಾಪ್ ಮುಖಾಂತರವೇ ಪಡೆಯಬಹುದಾಗಿದೆ.

    70007 70007 ಸಂಖ್ಯೆಯನ್ನು ಸೇವ್ ಮಾಡಿಕೊಂಡು ‘ಹಾಯ್’ ಎಂದು ವಾಟ್ಸಾಪ್ ಸಂದೇಶ ರವಾನಿಸಿದರೆ –ವ್ಯಾಲೆಟ್, ಯುಪಿಐ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮುಂತಾದ ಎಲ್ಲ ಪಾವತಿ ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಜಿಯೋ ಮಾರ್ಟ್‌ನಿಂದ ನಿಮಗೆ ಬೇಕಾದ ಉತ್ಪನ್ನಗಳನ್ನು ವಾಟ್ಸಾಪ್ ಮೂಲಕವೇ ಆರ್ಡರ್ ಮಾಡಿ ತರಿಸಿಕೊಳ್ಳಲು ಸಹ ಅವಕಾಶವಿದೆ.

    bengaluru bengaluru

    ಆರಂಭದಲ್ಲಿ ಈ ಸೇವೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಿ ಭಾಷೆಗಳೂ ಲಭ್ಯವಾಗಲಿವೆ.

    ವಾಟ್ಸಾಪ್ ಮೂಲಕ ದೊರಕುವ ಜಿಯೋ ಸೌಲಭ್ಯಗಳು:

    1. ಜಿಯೋ ಸಿಮ್ ರೀಚಾರ್ಜ್
    2. ಹೊಸ ಜಿಯೋ ಸಿಮ್ ಪಡೆಯುವುದು ಅಥವಾ ಪೋರ್ಟ್-ಇನ್ (ಎಂಎನ್‌ಪಿ)
    3. ಜಿಯೋ ಸಿಮ್‌ಗೆ ನೆರವು
    4. ಜಿಯೋ ಫೈಬರ್ ನೆರವು
    5. ಅಂತಾರಾಷ್ಟ್ರೀಯ ರೋಮಿಂಗ್ ನೆರವು
    6. ಜಿಯೋ ಮಾರ್ಟ್ ನೆರವು

    bengaluru

    LEAVE A REPLY

    Please enter your comment!
    Please enter your name here