Home ಬೆಂಗಳೂರು ನಗರ ಲೋಕೋಪಯೋಗಿ ಕಚೇರಿಗಳಿಗೆ ಖುದ್ದಾಗಿ ತೆರಳಿ ತಪಾಸಣೆ ನಡೆಸಿದ ಸಚಿವ ಸಿ.ಸಿ .ಪಾಟೀಲರು

ಲೋಕೋಪಯೋಗಿ ಕಚೇರಿಗಳಿಗೆ ಖುದ್ದಾಗಿ ತೆರಳಿ ತಪಾಸಣೆ ನಡೆಸಿದ ಸಚಿವ ಸಿ.ಸಿ .ಪಾಟೀಲರು

89
0
Karnataka Minister visits PWD offices in Bengaluru
Advertisement
bengaluru

ಬೆಂಗಳೂರು:

ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸಿ.ಸಿ. ಪಾಟೀಲರು ಇಂದು ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆ, ಕೆಷಿಪ್ ಮತ್ತು ರಾಷ್ಟ್ರೀಯ ಹೆದ್ದಾರಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿಯ ಕಚೇರಿ ನಿರ್ವಹಣೆ ಮತ್ತು ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಪರಿಶೀಲನೆ ನಡೆಸಿದರು .

Karnataka Minister visits PWD offices in Bengaluru

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಬಿ. ಎಚ್. ಅನಿಲ್ ಕುಮಾರ್, ಕಾರ್ಯದರ್ಶಿ ಡಾ. ಕೆ.ಎಸ್. ಕೃಷ್ಣಾರೆಡ್ಡಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖೆಯು ಮತ್ತಷ್ಟು ಜನಸ್ನೇಹಿಯಾಗಿ ಕೆಲಸ ಮಾಡುವಂತಾಗಲು ಕೆಲವು ವಿಭಾಗಗಳಲ್ಲಿ ಡಿಜಿಟಲೀಕರಣ ಕೈಗೊಳ್ಳಲು ಹಾಗೂ ಸಾಫ್ಟ್ವೇರ್ ಗಳನ್ನು ಉನ್ನತಿಕರಿಸಿಕೊಳ್ಳಲು ಸಚಿವರು ಈ ಸಂದರ್ಭದಲ್ಲಿ ಸೂಚಿಸಿದರು.

ಕಳೆದ ತಿಂಗಳು ಈ ಕಚೇರಿಗಳಿಗೆ ತಾವು ಭೇಟಿ ನೀಡಿದಾಗ ನೀಡಲಾದ ಸೂಚನೆಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಖುದ್ದಾಗಿ ತಪಾಸಣೆ ಕೈಗೊಂಡ ಸಚಿವರು, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

bengaluru bengaluru

ಇಲಾಖೆಯ ಹಲವು ಸಿಬ್ಬಂದಿಗಳೊಂದಿಗೆ ಸಚಿವರು ಮಾತುಕತೆ ನಡೆಸಿ ಅವರ ಕಷ್ಟ ಸುಖಗಳನ್ನು ವಿಚಾರಿಸಿಕೊಂಡಿದ್ದು ವಿಶೇಷವಾಗಿತ್ತು.


bengaluru

LEAVE A REPLY

Please enter your comment!
Please enter your name here