Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಸುಧಾಕರ್
  • ಆರೋಗ್ಯ
  • ಉತ್ತರ ಕನ್ನಡ
  • ಕರ್ನಾಟಕ
  • ಕೊಡಗು
  • ದಕ್ಷಿಣ ಕನ್ನಡ
  • ಬೆಂಗಳೂರು ನಗರ

ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಸುಧಾಕರ್

The Bengaluru Live January 16, 2021 8:30 PM 1 minute read
ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಸುಧಾಕರ್

ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಸುಧಾಕರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಯಾರಿಗೂ ಗಂಭೀರ ಸಮಸ್ಯೆ, ಅಡ್ಡ ಪರಿಣಾಮ ಕಂಡುಬಂದಿಲ್ಲ

ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ 84% ಮಂದಿಗೆ ಲಸಿಕೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ 37% ಮಂದಿ ಲಸಿಕೆ ಪಡೆದಿದ್ದಾರೆ

ಬೆಂಗಳೂರು:

ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯಲು ನಿಗದಿಪಡಿಸಿದವರಲ್ಲಿ ಶೇ.62 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರೊಂದಿಗೆ ವೀಡಿಯೋ ಸಂವಾದ ನಡೆದ ಬಳಿಕ ಸಚಿವರು ಮಾತನಾಡಿದರು.

ಶೇ.62 ರಷ್ಟು ಮಂದಿ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದು, ಬಹಳ ಆಶಾದಾಯಕವಾಗಿದೆ. ಮೊದಲ ದಿನ 21,658 ಮಂದಿಗೆ ಲಸಿಕೆ ನೀಡಬೇಕೆಂದು ನಿಗದಿಯಾಗಿತ್ತು. ಈ ಪೈಕಿ 13,408 ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾರಿಗೂ ಗಂಭೀರ ಸಮಸ್ಯೆ, ಅಡ್ಡ ಪರಿಣಾಮ ಕಂಡುಬಂದಿಲ್ಲ. ಚುಚ್ಚುಮದ್ದು ನೀಡಿದಾಗ ಕೆಲವರಿಗೆ ಊತ ಬಂದಿರಬಹುದು. ಆದರೆ ಅದು ಕೇವಲ ಅರ್ಧಗಂಟೆಯಲ್ಲಿ ಕಡಿಮೆಯಾಗಿ ಮನೆಗೆ ತೆರಳಿದ್ದಾರೆ ಎಂದರು.

WhatsApp Image 2021 01 16 at 20.15.29

ಸೋಮವಾರದಿಂದ ಮತ್ತೆ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಭಾನುವಾರ ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ನಾನು ನಾನಾ ಭಾಗಗಳಲ್ಲಿ ಸಂಚರಿಸಿ ಲಸಿಕೆ ಪಡೆಯುವಂತೆ ಉತ್ತೇಜಿಸಲಿದ್ದೇನೆ ಎಂದರು.

ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಅಂದರೆ 84% ಮಂದಿ ಲಸಿಕೆ ಪಡೆದಿದ್ದಾರೆ. ಉತ್ತರ ಕನ್ನಡದಲ್ಲಿ 80% ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಅಂದರೆ, 37% ಮಂದಿ ಲಸಿಕೆ ಪಡೆದಿದ್ದಾರೆ. ಈ ಜಿಲ್ಲೆಯಲ್ಲಿ 660 ಮಂದಿಗೆ ಲಸಿಕೆ ನೀಡುವ ಗುರಿ ಇದ್ದು, 223 ಮಂದಿ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದು ವಿದ್ಯಾವಂತರ ಜಿಲ್ಲೆಯಾಗಿದ್ದು, ಹೆಚ್ಚಿನವರು ಲಸಿಕೆ ಪಡೆಯಬೇಕು ಎಂದು ಕೋರಿದರು.

ದೇಶಾದ್ಯಂತ ಇಂದಿನಿಂದ ಕೊರೊನಾ ಲಸಿಕೆ ಅಭಿಯಾನ ಆರಂಭವಾದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರುಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ರಾಜ್ಯದಲ್ಲಿ ಲಸಿಕೆ ವಿತರಣೆಯ ಮೊದಲನೇ ದಿನದ ವಿದ್ಯಮಾನಗಳು ಮತ್ತು ಪ್ರಗತಿ ಕುರಿತು ಕೇಂದ್ರ ಸಚಿವರಿಗೆ ವಿವರಿಸಲಾಯಿತು.@drharshvardhan @DHFWKA pic.twitter.com/3Ud4SOWZ5P

— Dr Sudhakar K (@mla_sudhakar) January 16, 2021

ಬೆಂಗಳೂರು ನಗರದಲ್ಲಿ 53% ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ 65% ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳಲಾಗಿದೆ. ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಡಿಮೆ ಪ್ರಮಾಣದಲ್ಲಿ 28% ಆಗಿದೆ ಎಂದು ತಿಳಿಸಿದರು. ಮೊದಲ ದಿನ ಲಸಿಕೆ ಪಡೆಯದವರು ಮುಂದಿನ ದಿನಗಳಲ್ಲಿ ಲಸಿಕೆ ಪಡೆಯಲಿದ್ದಾರೆ.

ರಾಜ್ಯದಲ್ಲಿ 7.43 ಲಕ್ಷ ಮಂದಿಯನ್ನು ಗುರುತಿಸಿದ್ದು, 8 ಲಕ್ಷ ಲಸಿಕೆ ಬಂದಿದೆ. ಇನ್ನೂ 8 ಲಕ್ಷ ಲಸಿಕೆ ಕಳುಹಿಸಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದರು.

ಪೌರಕಾರ್ಮಿಕರೊಬ್ಬರಿಗೆ‌‌ ಮೊದಲ ಲಸಿಕೆ ನೀಡುವ ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆ ಪ್ರತಿಪಕ್ಷಗಳಿಗೆ ಅರ್ಥವಾಗಿಲ್ಲ.‌ ಆದರೆ ಸಾಮಾನ್ಯ ಜನರಿಗೆ ಅರ್ಥವಾಗಿದೆ ಎಂದರು.

About the Author

The Bengaluru Live

Administrator

Visit Website View All Posts

Post navigation

Previous: ಜನವರಿ 18 ರಿಂದ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿ : ಸಚಿವ ಪ್ರಭು ಚವ್ಹಾಣ್
Next: 92 ತುರ್ತು ಪ್ರತಿಕ್ರಿಯಾ ವಾಹನಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ

Related Stories

ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM
ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

The Bengaluru Live November 22, 2026 11:16 AM

Latest Post

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಕಡತ ಚಿತ್ರ
  • ಶಿಕ್ಷಣ

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ

November 22, 2026 9:22 PM
ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

November 22, 2026 2:01 PM
ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 22, 2026 11:32 AM
ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

November 22, 2026 11:16 AM
ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್ ರೈಲು ನಿಲ್ದಾಣದ ಟಿಕೆಟ್ ಕೌಂಟರ್‌ಗಳ ಮುಂದೆ ಸರತಿ ಸಾಲಿನ ಕಂಬಗಳ ಬಳಿ ನಿಂತಿರುವ ಪ್ರಯಾಣಿಕರು
  • ಕರ್ನಾಟಕ
  • ಬೆಂಗಳೂರು ನಗರ

ಕಾನ್ಪುರ ಸೆಂಟ್ರಲ್–ಎಸ್‌ಎಂವಿಟಿ ಬೆಂಗಳೂರು ನಡುವಿನ ಸಾಪ್ತಾಹಿಕ ವಿಶೇಷ ರೈಲು ಡಿ.30ರವರೆಗೆ ವಿಸ್ತರಣೆ, ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್

November 22, 2026 8:08 AM
ಪಿಜಿ ಆಯುಷ್: ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟ, 887 ಮಂದಿಗೆ ಸೀಟು, ನ.24ರವರೆಗೆ ಆಯ್ಕೆ ಬದಲಾವಣೆಗೆ ಅವಕಾಶ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರಿನ ಫಲಕ ಮತ್ತು ಲಾಂಛನದ ಮುಂದೆ ತಮ್ಮ ಮೇಜಿನ ಬಳಿ ಮಾತನಾಡುತ್ತಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಶಿಕ್ಷಣ

ಪಿಜಿ ಆಯುಷ್: ಮೊದಲ ಸುತ್ತಿನ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟ, 887 ಮಂದಿಗೆ ಸೀಟು, ನ.24ರವರೆಗೆ ಆಯ್ಕೆ ಬದಲಾವಣೆಗೆ ಅವಕಾಶ

November 22, 2026 8:06 AM

ನೀವು ತಪ್ಪಿಸಿಕೊಂಡಿರಬಹುದು

ಕೆಇಎ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರ ಕಡತ ಚಿತ್ರ
  • ಶಿಕ್ಷಣ

ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ

The Bengaluru Live November 22, 2026 9:22 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ

The Bengaluru Live November 22, 2026 2:01 PM
ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

The Bengaluru Live November 22, 2026 11:32 AM
ಸಾಂಪ್ರದಾಯಿಕ ಉಡುಪಿನಲ್ಲಿರುವ ಮಹಿಳೆಯೊಂದಿಗೆ ಮೈಕ್‌ನಲ್ಲಿ ಮಾತನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಸುತ್ತ ಕುಳಿತಿರುವ ಜನರು
  • ಕರ್ನಾಟಕ

ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ

The Bengaluru Live November 22, 2026 11:16 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕೆಇಎ ಪಿಯು ಕಾಲೇಜು ಪ್ರಾಂಶುಪಾಲರ ಪರೀಕ್ಷೆಗೆ ಶೇ 82ರಷ್ಟು ಹಾಜರಾತಿ, 2,349 ಅಭ್ಯರ್ಥಿಗಳು ಭಾಗಿ
  • ಕರ್ನಾಟಕ ಹವಾಮಾನ: ಒಣ ಹವೆ ಮುಂದುವರಿಕೆ, ನವೆಂಬರ್ 24ರಿಂದ 26ರವರೆಗೆ ಕೆಲವೆಡೆ ಮಳೆ ಸಾಧ್ಯತೆ
  • ನವೆಂಬರ್ 23ರಿಂದ ಕರ್ನಾಟಕದ ಕೆಲವೆಡೆ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ
  • ಕಾಂಗೋದಲ್ಲಿ 95 ಹಕ್ಕಿಪಿಕ್ಕಿ ಸಮುದಾಯದವರು ವಶಕ್ಕೆ ಎಂಬ ವರದಿ: ನೆರವಿಗೆ ಮನವಿ
©Copyright 2025 The Bengaluru Live All rights reserved. | MoreNews by AF themes.