ಚಾಯ್ಸ್-4 ಅಭ್ಯರ್ಥಿಗಳಿಗೆ 3ನೇ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್ಗೆ ಷರತ್ತುಬದ್ಧ ಅವಕಾಶ: ಕೆಇಎ
ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆರಂಭಿಸಿದೆ. ಅಭ್ಯರ್ಥಿಗಳು ನವೆಂಬರ್ 2ರ ಸಂಜೆ 4 ಗಂಟೆಯೊಳಗೆ ತಮ್ಮ ಆಯ್ಕೆಗಳನ್ನು ನಮೂದಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಮಾಕ್ ಸೀಟು ಹಂಚಿಕೆ ಫಲಿತಾಂಶವನ್ನು ನವೆಂಬರ್ 3ರ ಸಂಜೆ 4 ಗಂಟೆಗೆ ಪ್ರಕಟಿಸಲಾಗುತ್ತದೆ. ಅದಾದ ಬಳಿಕ ಅಭ್ಯರ್ಥಿಗಳು ನವೆಂಬರ್ 3ರ ಸಂಜೆ 5 ಗಂಟೆಯಿಂದ ನವೆಂಬರ್ 5ರ ಬೆಳಿಗ್ಗೆ 10 ಗಂಟೆಯವರೆಗೆ ಆಯ್ಕೆಗಳನ್ನು ಬದಲಾಯಿಸಬಹುದು, ಸೇರಿಸಬಹುದು ಅಥವಾ ಅಳಿಸಬಹುದು.
ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ನವೆಂಬರ್ 5ರ ರಾತ್ರಿ 8 ಗಂಟೆಗೆ, ಅಂತಿಮ ಫಲಿತಾಂಶವನ್ನು ನವೆಂಬರ್ 6ರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುತ್ತದೆ.
ಮೊದಲ ಸುತ್ತಿನಲ್ಲಿ ನಮೂದಿಸಿದ ಆಯ್ಕೆಗಳು ಎರಡನೇ ಸುತ್ತಿಗೂ ಅನ್ವಯವಾಗುತ್ತವೆ. ಎರಡನೇ ಸುತ್ತಿನಲ್ಲಿ ಹೊಸ ಆಯ್ಕೆಗಳನ್ನು ನಮೂದಿಸಲು ಅವಕಾಶವಿರುವುದಿಲ್ಲವಾದ್ದರಿಂದ ಅಭ್ಯರ್ಥಿಗಳು ಆದ್ಯತೆಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಎಂದು ಕೆಇಎ ತಿಳಿಸಿದೆ.
