ಬೆಂಗಳೂರು:
ಕರ್ನಾಟಕ ನದಿ ನೀರು ಹಾಗೂ ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷ ಕೆ ಎಲ್ ಮಂಜುನಾಥ್ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
ಕರ್ನಾಟಕ ನದಿ ನೀರು ಹಾಗೂ ಗಡಿ ವಿವಾದ ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ನಿವೃತ್ತ ನ್ಯಾಯಮೂರ್ತಿ ಶ್ರೀ ಕೆ.ಎಲ್.ಮಂಜುನಾಥ್ ಅವರ ನಿಧನಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂತಾಪ ವ್ಯಕ್ತಪಡಿಸುತ್ತದೆ.
— DIPR Karnataka (@KarnatakaVarthe) January 23, 2022
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಬಂಧು, ಬಳಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ. pic.twitter.com/rDZAj3szd9
ಮೃತರ ಪಾರ್ಥಿವ ಶರೀರವನ್ನು ಕಾಮಾಕ್ಷಿ ಪಾಳ್ಯದ ಅವರ ಸ್ವಗೃಹದಲ್ಲಿ ಅಪರಾಹ್ನ 12-00 ಗಂಟೆಯವರೆಗೆ ಇರಿಸಲಾಗುವುದು. ನಂತರ, ನೆಲಮಂಗಲ ತಾಲೂಕಿನ ಕೆಂಪಲಿಂಗನಹಳ್ಳಿ ಬಳಿಯ ಯಲಚಗೆರೆ ಕಾಲೋನಿಯ ಉದ್ಯಾನದಲ್ಲಿ ಇಂದು ಮಧ್ಯಾಹ್ನ 3-00 ಗಂಟೆಗೆ ಮಂಜುನಾಥ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ