ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯಪಾಲರಾದ ಡಾ. ಸುಧಾ ಯಾದವ್. ಚಿತ್ರ: ಕರ್ನಾಟಕ ಸಿಎಂಒ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ತಾವರೆಕೆರೆ ಮೆಟ್ರೋ ನಿಲ್ದಾಣದಲ್ಲಿ ನಮ್ಮ ಮೆಟ್ರೋ ಪಿಂಕ್ ಲೈನ್‌ಗೆ ಚಾಲನೆ ನೀಡಿದರು.
ರಾಜ್ಯಪಾಲರಾದ ಡಾ. ಸುಧಾ ಯಾದವ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಕೃಷ್ಣ ಬೈರೇಗೌಡ ಅವರು ನಿಲ್ದಾಣದಲ್ಲಿರುವ ಪಿಂಕ್ ಲೈನ್‌ನ ಮಾದರಿ ನಕ್ಷೆಯ ಮೂಲಕ ಪ್ರಧಾನಿಯವರಿಗೆ ಮಾರ್ಗ ಮತ್ತು ಸಂಪರ್ಕ ವ್ಯವಸ್ಥೆಯ ವಿವರಗಳನ್ನು ತಿಳಿಸಿದರು.
ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಮಾದರಿಯ ಅನುಷ್ಠಾನದಿಂದ ಆಗುವ ಅನುಕೂಲಗಳು ಹಾಗೂ ಸಂಚಾರ ದಟ್ಟಣೆ ನಿವಾರಣೆ ಬಗ್ಗೆಯೂ ಮುಖ್ಯಮಂತ್ರಿ ವಿವರಿಸಿದರು.
ಸಂಬಂಧಿತ ಸುದ್ದಿ:
- ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ; ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಿಎಂ ಶಿವಕುಮಾರ್, ರಾಜ್ಯಪಾಲರು
- ಪಿಂಕ್ ಲೈನ್ ಉದ್ಘಾಟನೆಯ ಅಂತಿಮ ಪಟ್ಟಿಯಿಂದ ನನ್ನ ಭಾಷಣ ಕೈಬಿಟ್ಟಿದ್ದಾರೆ: ಕೃಷ್ಣ ಬೈರೇಗೌಡ
- ಪಿಂಕ್ ಲೈನ್ ಮೆಟ್ರೋ ಸೇವೆಗೆ ಮುನ್ನ ಬನ್ನೇರುಘಟ್ಟ ರಸ್ತೆಯ ಪಾದಚಾರಿ ಮಾರ್ಗಗಳ ದುರಸ್ತಿ, ಅಭಿವೃದ್ಧಿ: ಜಿಬಿಎ
- ಮೆಟ್ರೋ ವೆಚ್ಚದಲ್ಲಿ ಕೇಂದ್ರ–ರಾಜ್ಯ ಸಮಾನ ಹೊಣೆಗಾರಿಕೆ ಅಗತ್ಯ: ಪ್ರಧಾನಿ ಮೋದಿಗೆ ಸಿಎಂ ಶಿವಕುಮಾರ್ ಮನವಿ; ಬೆಂಗಳೂರಿಗೆ 500 ಕಿ.ಮೀ. ಮೆಟ್ರೋ ಗುರಿ
- ರೆಡ್ ಲೈನ್ ಅನುಮೋದನೆ, ಡಬಲ್ ಡೆಕ್ಕರ್‌ಗೆ ಅನುಮತಿ, ಪಶ್ಚಿಮ ಘಟ್ಟ ಅಧಿಸೂಚನೆ ಮರುಪರಿಶೀಲನೆ: ಪ್ರಧಾನಿ ಮೋದಿಗೆ ರಾಜ್ಯದ ಮನವಿ ಪತ್ರ
