Home ರಾಜಕೀಯ ಗೋವು ಮಾರಾಟವನ್ನೇ ರಾಜ್ಯ ಸರ್ಕಾರ ನಿಷೇಧ ಮಾಡಲಿ: ಯು.ಟಿ. ಖಾದರ್

ಗೋವು ಮಾರಾಟವನ್ನೇ ರಾಜ್ಯ ಸರ್ಕಾರ ನಿಷೇಧ ಮಾಡಲಿ: ಯು.ಟಿ. ಖಾದರ್

41
0
Advertisement
bengaluru

ಬೆಂಗಳೂರು:

ಗೋವು ಮಾರಾಟವನ್ನೇ ರಾಜ್ಯ ಸರ್ಕಾರ ನಿಷೇಧ ಮಾಡಲಿ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.

ಗೋಹತ್ಯೆ ನಿಷೇಧ ಮಸೂದೆ ಜಾರಿ ಮಾಡುವ ವಿಚಾರ ವಿಧಾನಸೌಧದಲ್ಲಿ ಮಾತನಾಡಿ, ವಿಧಾನಸಭೆಯಲ್ಲಿ ಮೊದಲು ಮಸೂದೆ ಮಂಡನೆ ಮಾಡಲಿ. ಮೊದಲಿನಿಂದಲೂ ಕಾನೂನು ತರುತ್ತೇವೆ ಎಮದು ಹೇಳುತ್ತಾ ಇದ್ದಾರೆ. ಗೋ ಹತ್ಯೆ ನಿಷೇಧ ಬಿಲ್ ನೋಡಿ ನಾವು ತೀರ್ಮಾನ ಮಾಡ್ತೇವೆ. ಗೋ ಹತ್ಯೆ ನಿಷೇಧ ಇಲ್ಲೇ ಯಾಕೆ..? ಗೋವಾ, ಮಿಜೋರಾಂ, ಕೇರಳದಲ್ಲಿ ಯಾಕೆ ನಿಷೇಧ ಮಾಡಿಲ್ಲ. ಒನ್ ನೇಷನ್ ಅಂತಾರೆ, ಇಡೀ ದೇಶಕ್ಕೇ ಒಂದೇ ಕಾನೂನು ತರಲಿ ಎಂದು ಸಲಹೆ ನೀಡಿದರು.

ಅಲ್ಲೆಲ್ಲ ಗೋವಿನ ಮಾಂಸ ತಿನ್ನಲು ಬಿಟ್ಟು ಇಲ್ಲಿ ತರುತ್ತೇವೆ ಅಂದರೆ ಏನು? ಅದು ಕೇವಲ ಭಾವನಾತ್ಮಕ ವಿಷಯದ ರಾಜಕಾರಣ? ಇದು ನೈತಿಕ ಪೊಲೀಸ್ ಗಿರಿಗೆ ಅವಕಾಶ ಮಾಡಲಿದೆ ಎಂದು ಸರ್ಕಾರದ ವಿರುದ್ಧ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

bengaluru bengaluru

ಜನಸಾಮಾನ್ಯರಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೊಡುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗ್ರಾ.ಪಂ ಚುನಾವಣೆ ಬಂದಿದೆ. ಅದಕ್ಕೆ ಮಾರಕ ವಿಧೇಯಕಗಳನ್ನು ತರಲು ಹೊರಟಿದ್ದಾರೆ. ರೈತರ ಮಾರಕ ವಿಧೇಯಕ ತಂದಿದ್ದಾರೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ತಂದಿದ್ದಾರೆ. ಈ ಕಾಯ್ದೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಇವರು ಭಾವನಾತ್ಮಕ ವಿಷಯಗಳನ್ನು ಮುಂದೆ ತಂದು ರಾಜಕಾರಣ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ಇಂದಿರಾ ತಂದಿದ್ದರು. ಅದನ್ನು ಬಲಪಡಿಸುವ ಕೆಲಸ ಮಾಡಲಿ ಎಂದರು.

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಯಾವ ಸ್ಪಷ್ಟನೆಯಿದೆ? ಇವರಿಗೆ ಯಾವುದೇ ಇಚ್ಛಾ ಶಕ್ತಿಯಿಲ್ಲ.ಲವ್ ಜಿಹಾದ್ ಕಾಯ್ದೆಯಲ್ಲಿ ಏನಿದೆ ಎನ್ನುವುದನ್ನು ನೋಡಬೇಕಿದೆ. ಅದು ಸಮಾಜಕ್ಕೆ ಮಾರಕವೇ ಎಂಬುದನ್ನು ತಿಳಿಯಬೇಕಿದೆ. ಜಿಹಾದ್ ಪದ ಇಲ್ಲಿ ಯಾಕೆ ಬಳಸಬೇಕು. ಜಿಹಾದ್ ಅನ್ನುವುದು ಅರೇಬಿಕ್ ಪದ. ಕನ್ನಡದಲ್ಲಿ ಯಾವುದೇ ಪದ ಅವರಿಗೆ ಸಿಗಲಿಲ್ವೇ? ಮಕ್ಕಳ ಸ್ಕಾಲರ್ ಶಿಪ್ ಕೊಡುವ ಯೋಗ್ಯತೆಯಿದೆಯೇ? ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಾಲ ಸಿಗುತ್ತಿಲ್ಲ. ಪಿಹೆಚ್ ಡಿ ವಿದ್ಯಾರ್ಥಿಗಳ ಸಾಲ ಕಡಿತ ಮಾಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅವರು ಯೋಚಿಸಲಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿ ಮಾಡಿ ಗೋಹತ್ಯೆ ಕಾಯ್ದೆ ಕುರಿತು ಚರ್ಚೆ ನಡೆಸಿದ ಸಚಿವ ಪ್ರಭು ಚವ್ಹಾಣ್  https://kannada.thebengalurulive.com/minister-prabhu-chauhan-meets-uttar-pradesh-chief-minister-yogi-adityanath/

ಇದನ್ನೂ ಓದಿ: ಪ್ರಸ್ತುತ ವಿಧಾನಮಂಡಲ ಅಧಿವೇಶನದಲ್ಲೇ ಗೋಹತ್ಯೆ ನಿಷೇಧ ವಿಧೇಯಕ ಮಂಡನೆ: ಚವ್ಹಾಣ್ https://kannada.thebengalurulive.com/karnataka-assembly-session-cow-slaughter-act/


bengaluru

LEAVE A REPLY

Please enter your comment!
Please enter your name here