ಬೆಂಗಳೂರು: ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 18 ಪಂಚಾಯತಿಗಳ ಮೇಲೆ ಉಪ ಲೋಕಾಯುಕ್ತ ಬಿ ವೀರಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ. ಏಕ ಕಾಲಕ್ಕೆ ಅಣ್ಣೇಶ್ವರ, ಜಾಲಿಗೆ, ರಾಜಾನುಕುಂಟೆ, ಕಸಘಟ್ಟಪುರ, ಕಣ್ಣೂರು,ಬೂದಿಹಾಳ್ ದೊಡ್ಡತುಮಕೂರು, ಮಜರಾಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮಪಂಚಾಯಿತಿಗಳ ಮೇಲೆ ದಾಳಿ ನಡೆಸಲಾಯಿತು. ಲೋಕಾಯುಕ್ತ ಬಿ ಎಸ್ ಪಾಟೀಲ್, ಉಪ ಲೋಕಾಯುಕ್ತ ಬಿ ವೀರಪ್ಪ ಹಾಗೂ ಕೆ ಎಸ್ ಫಣೀಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಏಕ ಕಾಲಕ್ಕೆ ಅಣ್ಣೇಶ್ವರ, ಜಾಲಿಗೆ, ರಾಜಾನುಕುಂಟೆ, ಕಸಘಟ್ಟಪುರ, ಕಣ್ಣೂರು,ಬೂದಿಹಾಳ್ ದೊಡ್ಡತುಮಕೂರು, ಮಜರಾಹೊಸಹಳ್ಳಿ ಸೇರಿದಂತೆ ವಿವಿಧ ಗ್ರಾಮಪಂಚಾಯಿತಿಗಳ ಮೇಲೆ ದಾಳಿ ನಡೆಸಲಾಯಿತು.
ಗ್ರಾಮ ಪಂಚಾಯಿತಿಗಳ ದುರಾಡಳಿತ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಗ್ರಾಮ ಪಂಚಾಯಿತಿಗಳಿಗೆ ಖುದ್ದು ಉಪಲೋಕಾಯುಕ್ತ ಬಿ.ವೀರಪ್ಪ ಉಪ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪರಿಶೀಲನೆ ನಡೆಸಿ ಮತ್ತೊಂದು ಪಂಚಾಯಿತಿಗೆ ತೆರಳುತ್ತಿದ್ದಾಗ ಶಾಲಾ ಬಸ್ಸಿನಲ್ಲಿ ಮಕ್ಕಳನ್ನು ಕಂಡು ಕೂಡಲೇ ಶಾಲಾ ಬಸ್ ನಿಲ್ಲಿಸಿ ಕೆಲಕಾಲ ಮಕ್ಕಳ ಬಳಿ ಸಂವಾದ ನಡೆಸಿದರು.
ನಾನು ಉಪಲೋಕಾಯುಕ್ತ ಬಿ.ವೀರಪ್ಪ ಎಂದು ಮಕ್ಕಳಿಗೆ ಪರಿಚಯ ಮಾಡಿಕೊಂಡ ಅವರು, ಚೆನ್ನಾಗಿ ಓದಿ ತಂದೆ-ತಾಯಿ, ಶಿಕ್ಷಕರು, ಊರು, ರಾಜ್ಯ, ದೇಶಕ್ಕೆ ಒಳ್ಳೆ ಹೆಸರನ್ನು ತಂದುಕೊಡಬೇಕು.
ಅಂಬೇಡ್ಕರ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಅವರ ಮಾರ್ಗದಲ್ಲಿ ಸಾಗುವಂತೆ ಸಲಹೆ ನೀಡಿದರು. ಅನ್ಯಾಯ, ಭ್ರಷ್ಟಾಚಾರ, ಅಪರಾಧಗಳಿಂದ ದೂರ ಇರುವಂತೆ ಸೂಚನೆ ನೀಡಿದರು. ಯಾವುದೇ ರೀತಿ ಸಮಸ್ಯೆ ಆದಲ್ಲಿ ನಮಗೆ ದೂರು ನೀಡುವಂತೆ ಉಪಲೋಕಾಯುಕ್ತ ಕಚೇರಿ ಮೊಬೈಲ್ ಸಂಖ್ಯೆ ನೀಡಿದರು.