Home ಬೆಂಗಳೂರು ನಗರ ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಲೋಕಾರ್ಪಣೆ, ಪ್ರಯಾಣಿಕರಿಗೆ ಸಂಕ್ರಾಂತಿ ಸಿಹಿ

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಲೋಕಾರ್ಪಣೆ, ಪ್ರಯಾಣಿಕರಿಗೆ ಸಂಕ್ರಾಂತಿ ಸಿಹಿ

41
0
Advertisement
bengaluru

ಬೆಂಗಳೂರು:

ಯಲಚೇನಹಳ್ಳಿ-ಅಂಜನಾಪುರ ವಿಸ್ತರಿತ ನಮ್ಮ ಮೆಟ್ರೋ ಹಸಿರು ಮಾರ್ಗಕ್ಕೆ ಗುರುವಾರ ಚಾಲನೆ ದೊರಕಿದ್ದು, ಪರಿಣಾಮ, ಪ್ರತಿನಿತ್ಯ 75 ಸಾವಿರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

6 ಕಿ.ಮೀ ಉದ್ದದ ನೂತನ ಮಾರ್ಗಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ದಿನದಂದೇ ಸಿಹಿಸುದ್ದಿ ದೊರಕಿದೆ.

WhatsApp Image 2021 01 14 at 17.31.49

ಉದ್ಗಾಟನೆ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಐಟಿ ಸಿಟಿ ಜೀವನ ಸುಲಭವಾಗಿಸಲು ಮೂಲಸೌಕರ್ಯ ಸುಧಾರಣೆ ಮೂಲಕ ನಗರದ ಹೆಚ್ಚಿನ ಅಭಿವೃದ್ಧಿಗೆ ತಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಹೇಳಿದರು.

bengaluru bengaluru

ಮೆಟ್ರೊ ವಿಸ್ತರಣಾ ಮಾರ್ಗದ ಉದ್ಘಾಟನೆಯು ನಗರದಲ್ಲಿ ಸುಖಕರ ಪ್ರಯಾಣಸ್ಮಾರ್ಟ್ ಚಲನಶೀಲತೆ ಆಯ್ಕೆಗಳನ್ನು ಸಕ್ರಿಯಗೊಳಿಸಲು ಬೆಂಗಳೂರು ಮಿಷನ್ 2022 ರ ಗುರಿಯತ್ತ ಇಟ್ಟ ಮತ್ತೊಂದು ಹೆಜ್ಜೆಯಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರ್ ಅಶೋಕ್, ಬಿ ಬಸವರಾಜ್, ಮತ್ತು ಲೋಕಸಭಾ ಸದಸ್ಯ ಪಿ ಸಿ ಮೋಹನ್ ಸೇರಿದಂತೆ ಇತರರು ಈ ಸಮಯ ಉಪಸ್ಥಿತರಿದ್ದರು. UNI


bengaluru

LEAVE A REPLY

Please enter your comment!
Please enter your name here