Home ರಾಜಕೀಯ ಸರ್ಕಾರಕ್ಕೆ ಯಡಿಯೂರಪ್ಪ ಸನ್ ಸ್ಟ್ರೋಕ್; ಎಚ್.ವಿಶ್ವನಾಥ್ ವಾಗ್ದಾಳಿ

ಸರ್ಕಾರಕ್ಕೆ ಯಡಿಯೂರಪ್ಪ ಸನ್ ಸ್ಟ್ರೋಕ್; ಎಚ್.ವಿಶ್ವನಾಥ್ ವಾಗ್ದಾಳಿ

114
0
Advertisement
bengaluru

ರಾಯಚೂರು:

ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕೆಂಡಾಮಂಡಲವಾಗಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಇಂದು ಕೂಡ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಮಾತು ತಪ್ಪಿದ್ದಾರೆ. ಸನ್ ಸ್ಟ್ರೋಕ್, ಫ್ಯಾಮಿಲಿ ಸ್ಟ್ರೋಕ್ ನಲ್ಲಿ ಹಲವು ರಾಜಕೀಯ ಪಕ್ಷಗಳು ನಾಶವಾಗಿವೆ, ದೇಶದ ಅತಿದೊಡ್ಡ ಪಕ್ಷಗಳು ಕುಟುಂಬ ರಾಜಕಾರಣದಿಂದ ನಾಶವಾಗಿವೆ. 90ರ ದಶಕದಲ್ಲಿ ಜನತಾ ಪರಿವಾರ ಕೂಡ ಸನ್ ಸ್ಟ್ರೋಕ್ ನಿಂದಲೇ ಮುಗಿದು ಹೋಯಿತು. ಇದೀಗ ಬಿಜೆಪಿಯನ್ನು ಕೂಡ ಇದು ನಾಶಮಾಡಬಹುದು ಎಂದು ಎಚ್ಚರಿಸಿದರು.

ಇದಕ್ಕೆ ಹೈಕಮಾಂಡ್ ಅವಕಾಶ ನೀಡಬಾರದು. ಪ್ರಾದೇಶಿಕ ಪಕ್ಷ ಹಾಳಾಗುವುದಕ್ಕೂ, ರಾಷ್ಟ್ರೀಯ ಪಕ್ಷಗಳು ಹಾಳಾಗುವುದಕ್ಕೂ ವ್ಯತ್ಯಾಸವಿದೆ. ದೇಶದ ಹಿತದೃಷ್ಟಿಯಿಂದ ರಾಷ್ಟ್ರೀಯ ಪಕ್ಷಗಳು ಹಾಳಾಗಬಾರದು. ಕಾಂಗ್ರೆಸ್ ಕೂಡ ಸನ್ ಸ್ಟ್ರೋಕ್ ನಿಂದ ಹೊರಟುಹೋಯಿತು. ಸನ್ ಸ್ಟ್ರೋಕ್ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕು ಎಂದು ಹೇಳಿದರು. UNI

bengaluru bengaluru

bengaluru

LEAVE A REPLY

Please enter your comment!
Please enter your name here