Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಳಗಾವಿ
  • ರಾಜ್ಯದಲ್ಲಿ ಸದ್ಯದಲ್ಲೇ `ಉದ್ಯೋಗ ನೀತಿ’ ಜಾರಿ: ಬೊಮ್ಮಾಯಿ
  • ಬೆಳಗಾವಿ

ರಾಜ್ಯದಲ್ಲಿ ಸದ್ಯದಲ್ಲೇ `ಉದ್ಯೋಗ ನೀತಿ’ ಜಾರಿ: ಬೊಮ್ಮಾಯಿ

The Bengaluru Live December 23, 2021 3:00 PM 1 minute read
New ‘employment policy’ on the anvil in State: CM Bommai

ರಾಜ್ಯದಲ್ಲಿ ಸದ್ಯದಲ್ಲೇ `ಉದ್ಯೋಗ ನೀತಿ’ ಜಾರಿ: ಬೊಮ್ಮಾಯಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಳಗಾವಿಯಲ್ಲಿ ಉದ್ಯೋಗ ಮೇಳ’;ಸರ್ವರಿಗೂ ಉದ್ಯೋಗ’ ಕಾರ್ಯಕ್ರಮ ಲೋಕಾರ್ಪಣೆ

ಬೆಳಗಾವಿ: 

ರಾಜ್ಯದಲ್ಲಿ ಶೀಘ್ರದಲ್ಲೇ ಅತ್ಯಂತ ರಚನಾತ್ಮಕವಾದ `ಉದ್ಯೋಗ ನೀತಿ’ಯನ್ನು ಜಾರಿಗೆ ತರಲಾಗುವುದು. ಈ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ಕೊಡುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲಿನ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಸರ್ವರಿಗೂ ಉದ್ಯೋಗ’ ಕಾರ್ಯಕ್ರಮ ಲೋಕಾರ್ಪಣೆ ಮತ್ತುಉದ್ಯೋಗ ಮೇಳ’ವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದುವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಮತ್ತು ಉತ್ತೇಜಕ ಭತ್ಯೆಗಳನ್ನು ಕೊಡಲಾಗುತ್ತಿತ್ತು. ಆದರೆ ಇನ್ನುಮುಂದೆ ಯಾವ ಸಂಸ್ಥೆಯು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ ಎನ್ನುವುದನ್ನು ಆಧರಿಸಿ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು.

New ‘employment policy’ on the anvil in State: CM Bommai

ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ,  ಕೌಶಲ್ಯ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಈ ಮೂರೂ ಅಂಶಗಳು ಒಂದರ ಜೊತೆಯಲ್ಲಿ ಇನ್ನೊಂದಿರುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಶಿಕ್ಷಣ ಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬೆಸೆಯಲಾಗಿದೆ. ಇನ್ನೊಂದೆಡೆಯಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವಾತಾವರಣದೊಂದಿಗೆ ಬೆಸೆಯಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಹತ್ತಾರು ಒಡಂಬಡಿಕೆಗಳನ್ನು ಮಾಡಿಕೊಂಡಿವೆ ಎಂದು ಅವರು ವಿವರಿಸಿದರು.

ಬೆಳಗಾವಿಯಲ್ಲಿ @Skill_Karnataka @naandi_india ಸಹಯೋಗದಲ್ಲಿ ಆಯೋಜಿಸಿರುವ 'ಸರ್ವರಿಗೂ ಉದ್ಯೋಗ', ಹಾಗೂ 'ಬೆಳಗಾವಿ ಉದ್ಯೋಗ ಮೇಳ'ವನ್ನು ಮುಖ್ಯಮಂತ್ರಿ @BSBommai ನೇತೃತ್ವದಲ್ಲಿ ಉದ್ಘಾಟಿಸಲಾಯಿತು.

ಉಪಸ್ಥಿತರಿದ್ದ @ShashikalaJolle,@BABasavaraja, @iamabhaypatil ಹಾಗೂ ಭಾಗವಹಿಸಿದ ಎಲ್ಲ ಉದ್ಯೋಗಾಕಾಂಕ್ಷಿಗಳಿಗೂ ಧನ್ಯವಾದಗಳು. pic.twitter.com/V2DgMxg7ed

— Dr. Ashwathnarayan C. N. (@drashwathcn) December 23, 2021

ಇದೇ ಸಂದರ್ಭದಲ್ಲಿ ಮಾತನಾಡಿದ ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಪ್ರತಿಯೊಬ್ಬ ವಿದ್ಯಾವಂತರಿಗೂ ಅವರಿಗೆ ಆಸಕ್ತಿ ಇರುವಂತಹ ಉದ್ಯೋಗಗಳೇ ದೊರಕುವಂತಾಗಬೇಕು ಎನ್ನುವುದು ಸರಕಾರದ ಸಂಕಲ್ಪವಾಗಿದ್ದು, ಈ ಮಹತ್ತ್ವಾಕಾಂಕ್ಷೆಯಿಂದಲೇ `ಸಕಲರಿಗೂ ಉದ್ಯೋಗ’ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಕೌಶಲ್ಯ ಸಹಿತ ಯುವಶಕ್ತಿಯನ್ನು ಸಿದ್ಧಪಡಿಸುವ ಜತೆ ಉದ್ಯೋಗ ಸೃಷ್ಟಿ ನಮ್ಮ ಸರ್ಕಾರದ ಆದ್ಯತೆಯಾಗಿದ್ದು ಮುಖ್ಯಮಂತ್ರಿ @BSBommai ಅವರ ನೇತೃತ್ವದಲ್ಲಿ 'ಉದ್ಯೋಗ ನೀತಿ’ ಜಾರಿಗೊಳಿಸುವ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇವೆ.

ಔದ್ಯೋಗಿಕ ಅವಕಾಶ ಕಲ್ಪಿಸಲು @Skill_Karnataka, ಸ್ಟಾರ್ಟ್‌ಅಪ್‌ ವಿಷನ್ ಗ್ರೂಪ್‌ಗಳ ಶ್ರಮ ನಿರಂತರವಾಗಿದೆ.

— Dr. Ashwathnarayan C. N. (@drashwathcn) December 23, 2021

ಬೆಳಗಾವಿಯಲ್ಲಿ ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕೇಂದ್ರ ಕಚೇರಿ ಇದೆ. ರಾಜ್ಯದ ಒಟ್ಟು 6 ವಿ.ವಿ.ಗಳನ್ನು `ಯೂನಿವರ್ಸಿಟಿ ಆಫ್ ಎಮಿನೆನ್ಸ್’ ಮಟ್ಟಕ್ಕೆ ಮತ್ತು 7 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ವಿಟಿಯು ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯು ಒಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ, ಬಸವರಾಜ ಭೈರತಿ, ಶಾಸಕ ಅಭಯ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

I am delighted that today's job fair has been successful. It has given wings to the aspirations of the youth of Belagavi.

I sincerely thank all organisations and individuals who made this job fair successful. We are on to the next endeavours.@BSBommai @Skill_Karnataka pic.twitter.com/agaWxrG2Do

— Dr. Ashwathnarayan C. N. (@drashwathcn) December 23, 2021

ಸಾವಿರಾರು ಆಸಕ್ತರು, ಅಚ್ಚುಕಟ್ಟುತನದ ಹೆಗ್ಗಳಿಕೆ

ಈ ಉದ್ಯೋಗ ಮೇಳಕ್ಕೆ ಬೆಳಗಾವಿ ಮತ್ತು ಅಕ್ಕಪಕ್ಕದ ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಮುಂತಾದ ಜಿಲ್ಲೆಗಳು 5 ಸಾವಿರಕ್ಕೂ ಹೆಚ್ಚು ಬಿ.ಇ., ಡಿಪ್ಲೊಮಾ ಮತ್ತು ಐಟಿಐ ಪದವೀಧರರು ಉತ್ಸಾಹದಿಂದ ಬಂದಿದ್ದರು. ಬುಧವಾರ ಸಂಜೆಯ ಹೊತ್ತಿಗಾಗಲೇ 5,400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಕಿಲ್ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಗುರುವಾರ ಮೇಳ ಆರಂಭವಾಗುವ ಹೊತ್ತಿಗಾಗಲೇ ಈ ಸಂಖ್ಯೆ ಇನ್ನೂ ಹೆಚ್ಚಾಗಿದ್ದು, ಗೋಗಟೆ ಕಾಲೇಜಿನ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಮೇಳದಲ್ಲಿ 57 ಕಂಪನಿಗಳು ನೇರವಾಗಿ ಪಾಲ್ಗೊಂಡಿದ್ದು, ಇವುಗಳಿಗೆಲ್ಲ ಪ್ರತ್ಯೇಕ ಕೌಂಟರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಅಭ್ಯರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮನ್ನು ಸಂದರ್ಶನಕ್ಕೆ ಆಹ್ವಾನಿಸಿರುವ ಕಂಪನಿಗಳ ಕೌಂಟರುಗಳನ್ನು ತಲುಪುತ್ತಿದ್ದರು. ಮೇಳದಲ್ಲಿ ಎಚ್.ಪಿ., ಓಲಾ, ಎಚ್.ಸಿ.ಎಲ್., ವಿಪ್ರೊ, ಬೈಜೂಸ್, ನಾರಾಯಣ ಗ್ರೂಪ್, ಟಾಟಾ ಬಿಜಿನೆಸ್ ಹಬ್ ಲಿ., ಟೊಯೊಟಾ ಮುಂತಾದ ಹೆಸರಾಂತ ಕಂಪನಿಗಳು ಭಾಗವಹಿಸಿದ್ದವು. ಇದಲ್ಲದೆ, 14 ಕಂಪನಿಗಳು ವರ್ಚುಯಲ್ ಆಗಿ ಪಾಲ್ಗೊಂಡಿದ್ದವು.

About the Author

The Bengaluru Live

Administrator

Visit Website View All Posts

Post navigation

Previous: ಬೆಳಗಾವಿ: ನಾಳೆ (ಗುರುವಾರ) ಉದ್ಯೋಗ ಮೇಳ, `ಸಕಲರಿಗೂ ಉದ್ಯೋಗ’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ
Next: ಮತಾಂತರ ನಿಯಂತ್ರಣ ಕಾಯ್ದೆ ಅನುಷ್ಠಾನಕ್ಕೆ ನಳಿನ್‍ಕುಮಾರ್ ಕಟೀಲ್ ಅಭಿನಂದನೆ

Related Stories

ಬೆಂಗಳೂರಿನ ಜಾರಿ ನಿರ್ದೇಶನಾಲಯ ಕಚೇರಿಯ ಪ್ರವೇಶದ್ವಾರ — ಸಂಗ್ರಹ ಚಿತ್ರ
  • ಅಪರಾಧ
  • ಕರ್ನಾಟಕ
  • ಬೆಳಗಾವಿ

ಬೆಳಗಾವಿ ಹೂಡಿಕೆ ವಂಚನೆ ಪ್ರಕರಣ: ₹427.16 ಕೋಟಿ ಆಸ್ತಿ ತಾತ್ಕಾಲಿಕ ಜಪ್ತಿ ಮಾಡಿದ ಇಡಿ

The Bengaluru Live October 31, 2026 1:11 PM
ಕರ್ನಾಟಕದ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ ಭಾವಚಿತ್ರ.
  • ಬೆಂಗಳೂರು ನಗರ
  • ಕರ್ನಾಟಕ
  • ಬೆಳಗಾವಿ
  • ರಾಜಕೀಯ

ಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ; ಸಿಎಂ ಸಂತಾಪ

The Bengaluru Live October 30, 2026 10:30 AM
ಅಕ್ಟೋಬರ್ 27ರಂದು ಬೆಳಗಾವಿಯ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಬಾಸ್ಕೆಟ್‌ಬಾಲ್ ಆಡುತ್ತಿರುವ ಕೆಡೆಟ್‌ಗಳು.
  • ಕರ್ನಾಟಕ
  • ಕ್ರೀಡೆ
  • ಬೆಳಗಾವಿ

ಬೆಳಗಾವಿಯಲ್ಲಿ ಐದು ಮಿಲಿಟರಿ ಶಾಲೆಗಳ 175 ಕೆಡೆಟ್‌ಗಳ ಕ್ರೀಡಾ–ಶೈಕ್ಷಣಿಕ ಸ್ಪರ್ಧೆ

The Bengaluru Live October 27, 2026 7:30 PM

Latest Post

ಅರ್ನಾಬ್, ಮುರಸು ಚಂಡಮಾರುತಗಳ ವೇಳೆ ನೆರವು: ಕರ್ನಾಟಕಕ್ಕೆ ಧನ್ಯವಾದ ತಿಳಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬಸ್ ಪಕ್ಕದಲ್ಲಿ ಹೆಲ್ಮೆಟ್ ಹಾಗೂ ಜಾಕೆಟ್ ಧರಿಸಿರುವ ಬೆಸ್ಕಾಂ ಪವರ್‌ಮನ್‌ಗಳು ಮತ್ತು ಅಧಿಕಾರಿಗಳು
  • ಕರ್ನಾಟಕ

ಅರ್ನಾಬ್, ಮುರಸು ಚಂಡಮಾರುತಗಳ ವೇಳೆ ನೆರವು: ಕರ್ನಾಟಕಕ್ಕೆ ಧನ್ಯವಾದ ತಿಳಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

November 18, 2026 11:41 PM
ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

November 18, 2026 10:10 PM
ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಹಿನ್ನೆಲೆ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಶಸ್ತಿ ವಿಜೇತರು ಮತ್ತು ಗಣ್ಯರು
  • ಕರ್ನಾಟಕ

ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ

November 18, 2026 9:47 PM
ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ ಮರದ ಫಲಕಗಳ ಕೊಠಡಿಯಲ್ಲಿ ಸೋಫಾದ ಮೇಲೆ ಕುಳಿತಿರುವ ಕೇಸರಿ ವಸ್ತ್ರಧಾರಿ ಸ್ವಾಮೀಜಿ ಮತ್ತು ಇಬ್ಬದಿಯಲ್ಲಿ ನಿಂತಿರುವ ಪುರುಷರ ಗುಂಪು
  • ಕರ್ನಾಟಕ

ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ

November 18, 2026 9:36 PM
ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

November 18, 2026 9:29 PM
ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

November 18, 2026 9:08 PM

ನೀವು ತಪ್ಪಿಸಿಕೊಂಡಿರಬಹುದು

ಬಸ್ ಪಕ್ಕದಲ್ಲಿ ಹೆಲ್ಮೆಟ್ ಹಾಗೂ ಜಾಕೆಟ್ ಧರಿಸಿರುವ ಬೆಸ್ಕಾಂ ಪವರ್‌ಮನ್‌ಗಳು ಮತ್ತು ಅಧಿಕಾರಿಗಳು
  • ಕರ್ನಾಟಕ

ಅರ್ನಾಬ್, ಮುರಸು ಚಂಡಮಾರುತಗಳ ವೇಳೆ ನೆರವು: ಕರ್ನಾಟಕಕ್ಕೆ ಧನ್ಯವಾದ ತಿಳಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

The Bengaluru Live November 18, 2026 11:41 PM
ಮೈಸೂರಿನ ಹೋಟೆಲ್‌ನ ಸಭಾಂಗಣದಲ್ಲಿ ಯು ಆಕಾರದ ಮೇಜಿನ ಸುತ್ತ ಕುಳಿತಿರುವ ಸಚಿವರು, ಶಾಸಕರು ಮತ್ತು ಅಧಿಕಾರಿಗಳು
  • ಕರ್ನಾಟಕ
  • ಮೈಸೂರು

ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ

The Bengaluru Live November 18, 2026 10:10 PM
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಹಿನ್ನೆಲೆ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಶಸ್ತಿ ವಿಜೇತರು ಮತ್ತು ಗಣ್ಯರು
  • ಕರ್ನಾಟಕ

ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ

The Bengaluru Live November 18, 2026 9:47 PM
ಮರದ ಫಲಕಗಳ ಕೊಠಡಿಯಲ್ಲಿ ಸೋಫಾದ ಮೇಲೆ ಕುಳಿತಿರುವ ಕೇಸರಿ ವಸ್ತ್ರಧಾರಿ ಸ್ವಾಮೀಜಿ ಮತ್ತು ಇಬ್ಬದಿಯಲ್ಲಿ ನಿಂತಿರುವ ಪುರುಷರ ಗುಂಪು
  • ಕರ್ನಾಟಕ

ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ

The Bengaluru Live November 18, 2026 9:36 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಅರ್ನಾಬ್, ಮುರಸು ಚಂಡಮಾರುತಗಳ ವೇಳೆ ನೆರವು: ಕರ್ನಾಟಕಕ್ಕೆ ಧನ್ಯವಾದ ತಿಳಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
  • ಮೈಸೂರಿನಲ್ಲಿ ನ.26ರ ಸಂವಿಧಾನ ದಿನಾಚರಣೆಗೆ ಸುಮಾರು ಒಂದು ಲಕ್ಷ ಜನ ನಿರೀಕ್ಷೆ: ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ
  • ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ
  • ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ
©Copyright 2025 The Bengaluru Live All rights reserved. | MoreNews by AF themes.