Home ಬೆಂಗಳೂರು ನಗರ ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆ : ಬೊಮ್ಮಾಯಿ

ಸೋಮವಾರ ಹೊಸ ಮಾರ್ಗಸೂಚಿ ಬಿಡುಗಡೆ : ಬೊಮ್ಮಾಯಿ

29
0

ಬೆಂಗಳೂರು:

ಕೋವಿಡ್ ರೋಗಾಣು ರೂಪಾಂತರ ಗೊಂಡಿರುವುದರಿಂದ ಈ ಬಾರಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಸೋಮವಾರ( ನಾಳೆ) ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.

ಹೊಸ ವರ್ಷಾಚರಣೆ ಸಂಭ್ರಮದಲ್ಲಿ ನಡೆಯುವ ಪಾರ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಅವರನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ಹೀಗಾಗಿ ಈ ವಿಷಯವನ್ನು ಕೇಂದ್ರಿಕರಿಸಿಕೊಂಡು ಹೊಸ ವರ್ಷಕ್ಕೆ ಅವಕಾಶವಿಲ್ಲ ಎಂದರು. UNI

LEAVE A REPLY

Please enter your comment!
Please enter your name here