Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಬರ ಪರಿಹಾರ ಬಾರದಿದ್ದರೆ ‘ದೆಹಲಿ ಚಲೋ’: ಸಿಎಂ ಶಿವಕುಮಾರ್; ಮಹಿಳಾ ಮೀಸಲಾತಿಗೆ ಬೆಂಬಲ, ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ
  • ಕರ್ನಾಟಕ

ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಬರ ಪರಿಹಾರ ಬಾರದಿದ್ದರೆ ‘ದೆಹಲಿ ಚಲೋ’: ಸಿಎಂ ಶಿವಕುಮಾರ್; ಮಹಿಳಾ ಮೀಸಲಾತಿಗೆ ಬೆಂಬಲ, ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ

The Bengaluru Live November 28, 2026 5:06 PM 1 minute read
ಮಾಧ್ಯಮಗೋಷ್ಠಿಯಲ್ಲಿ ಬೆರಳು ಎತ್ತಿ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್

ನವೆಂಬರ್ 28ರಂದು ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಬೆಳಗಾವಿ ಅಧಿವೇಶನ ಮುಕ್ತಾಯದ ಒಳಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ನೀಡದಿದ್ದರೆ, ಅಧಿವೇಶನ ಮುಗಿದ ಬಳಿಕ ‘ದೆಹಲಿ ಚಲೋ’ ಹೋರಾಟ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನವೆಂಬರ್ 28ರಂದು ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣ ‘ಸಂಗಮ’ದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯದಲ್ಲಿನ ಬರ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಈವರೆಗೂ ಒಂದು ರೂಪಾಯಿ ನೆರವು ನೀಡಿಲ್ಲ. ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದು, ಎಲ್ಲಾ ರೀತಿಯ ಹೋರಾಟ ಮಾಡುತ್ತೇವೆ” ಎಂದರು.

ಪರಿಹಾರ ನೀಡದಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೀರಾ ಎಂಬ ಪ್ರಶ್ನೆಗೆ, ಸುಪ್ರೀಂ ಕೋರ್ಟ್‌ಗೂ ಹೋಗುತ್ತೇವೆ ಎಂದು ಹೇಳಿದರು. ಸರ್ವಪಕ್ಷ ನಿಯೋಗದ ಭೇಟಿಗೆ ಸಮಯ ನೀಡುವಂತೆ ಪ್ರಧಾನಮಂತ್ರಿಗಳಿಗೂ ಮನವಿ ಮಾಡಲಾಗಿದೆ; ಈ ವಿಚಾರವನ್ನು ಅವರ ಮುಂದೆ ಪ್ರಸ್ತಾಪಿಸಿದ್ದೇನೆ ಎಂದರು.

ರಾಜ್ಯ ಹಾಗೂ ಕನ್ನಡಿಗರ ಸ್ವಾಭಿಮಾನದ ವಿಚಾರವಾದ ಕನ್ನಡ ಧ್ವಜಕ್ಕೆ ಮಾನ್ಯತೆ ನೀಡುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದು, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂಬುದು ಒಮ್ಮತದ ತೀರ್ಮಾನವಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಕುರಿತು, “ಶನಿವಾರ ರಾತ್ರಿ ದೆಹಲಿಗೆ ತೆರಳುತ್ತಿದ್ದು, ಭಾನುವಾರ ಕೇರಳ, ತೆಲಂಗಾಣ ಮುಖ್ಯಮಂತ್ರಿಗಳು ಸೇರಿದಂತೆ ಚರ್ಚೆ ನಡೆಸಿ, ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತೇವೆ” ಎಂದರು. ಉತ್ತರ ಭಾರತದ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳು ಹೆಚ್ಚಲಿವೆ, ದಕ್ಷಿಣದ ರಾಜ್ಯಗಳ ಪರಿಸ್ಥಿತಿ ಮತ್ತು ಸಾಧಕ-ಬಾಧಕಗಳ ಬಗ್ಗೆಯೂ ಚರ್ಚೆಯಾಗಲಿದೆ.

ನಿನ್ನೆಯಷ್ಟೇ ಕೇಂದ್ರ ಸಚಿವ ಸಂಪುಟ ತೀರ್ಮಾನ ಮಾಡಿದ್ದು, ಮಾಧ್ಯಮ ವರದಿಗಳ ಮಾಹಿತಿ ಮಾತ್ರ ತಮಗೆ ತಿಳಿದಿದೆ ಎಂದರು. ಈ ಹಿಂದೆ ಡಿಎಂಕೆ ಕರೆದ ಸಭೆಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಅವರು, ಬಿಜೆಪಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಾರ್ವಭೌಮತ್ವ ಉಳಿಸಿಕೊಳ್ಳಲು ಹೋರಾಡುತ್ತೇವೆ ಎಂದ ಅವರು, “ಮಹಿಳಾ ಮೀಸಲಾತಿಗೆ ನಾವು ಒಪ್ಪಿದ್ದೇವೆ; ಕ್ಷೇತ್ರ ಪುನರ್ವಿಂಗಡಣೆಗೆ ನಮ್ಮ ವಿರೋಧ” ಎಂದು ಸ್ಪಷ್ಟಪಡಿಸಿದರು.

ಎನ್‌ಡಿಎ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಶಿವಕುಮಾರ್, ಇದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಅವು ಅಲ್ಪಸಂಖ್ಯಾತವಾಗಲಿವೆ ಎಂದರು. “ದೇಶದ ಪ್ರಗತಿಗೆ ದಕ್ಷಿಣ ರಾಜ್ಯಗಳು ಶಕ್ತಿ ತುಂಬುತ್ತಿವೆ. ಅವರು ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ” ಎಂದರು. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆಯುವ ನಿರೀಕ್ಷೆಯಿತ್ತು; ಸಿದ್ದರಾಮಯ್ಯ ಹೇಳಿದಂತೆ ಸಭೆ ಕರೆದು ಚರ್ಚಿಸಬೇಕಿತ್ತು ಎಂದರು.

ಕನ್ನಡಿಗರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಸೂದೆಗೆ ಬೆಂಬಲ ನೀಡುತ್ತಿದ್ದೇವೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕೇಳಿದಾಗ, “ಅವರ ಕಾಲದಲ್ಲಿ ಕನ್ನಡಿಗರು ಹಾಗೂ ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಅವರು ಹೇಳಲಿ. ಖಾಲಿ ಮಾತು ಆಡುವುದಲ್ಲ” ಎಂದರು.

ಆಶಾ ಕಾರ್ಯಕರ್ತೆಯರ ಕುರಿತು ಮಾತನಾಡಿ, ನಿನ್ನೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ; ನಮ್ಮ ಸಚಿವರು ನವೆಂಬರ್ 28ರಂದು ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚಿಸಿದ್ದಾರೆ ಎಂದರು. ಎನ್‌ಡಿಎ ನಾಯಕರು ಅವರಿಗೆ ನೆರವಾಗಲು ಮುಂದೆ ಬಂದಿಲ್ಲ, ಬದಲಿಗೆ ರಾಜ್ಯ ಸರ್ಕಾರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂಪಾಯಿ ನೀಡುವುದನ್ನು ಬಿಟ್ಟರೆ ಬೇರೇನೂ ನೀಡುತ್ತಿಲ್ಲ; ಈ ವಿಚಾರದಲ್ಲಿ ರಾಜ್ಯಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಕೇಂದ್ರಕ್ಕೂ ಅಷ್ಟೇ ಇದೆ ಎಂದರು. “ನಾವು ಆಶಾ ಕಾರ್ಯಕರ್ತೆಯರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಇದನ್ನೂ ಓದಿ: ಲೋಕಸಭೆ ಸ್ಥಾನ ಶೇ.50 ಹೆಚ್ಚಳ ಕರ್ನಾಟಕಕ್ಕೆ ಹೇಗೆ ಲಾಭ? 28ರಿಂದ 42 ಸ್ಥಾನ, ಯುಪಿಗೆ 80ರಿಂದ 120: ಸರ್ವಪಕ್ಷ ಸಭೆಗೆ ಸಿದ್ದರಾಮಯ್ಯ ಆಗ್ರಹ | ಮಹಿಳಾ ಮೀಸಲು, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಜೆಡಿಎಸ್ ಬೆಂಬಲ: “ಯಾವ ರಾಜ್ಯಕ್ಕೂ ಅನ್ಯಾಯವಿಲ್ಲ”, ಕರ್ನಾಟಕದ ಸ್ಥಾನ ಶೇ.50 ಏರಿಕೆ ಎಂದ ಕುಮಾರಸ್ವಾಮಿ

About the Author

The Bengaluru Live

Administrator

Visit Website View All Posts

Post navigation

Previous: ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು

Related Stories

ಆಸ್ಪತ್ರೆಯ ಹಾಸಿಗೆಯ ಪಕ್ಕ ನಿಂತಿರುವ ಎಚ್.ಡಿ. ಕುಮಾರಸ್ವಾಮಿ; ಮಗುವಿನ ಮುಖ ಮಸುಕುಗೊಳಿಸಲಾಗಿದೆ
  • ಕರ್ನಾಟಕ
  • ಬೆಂಗಳೂರು ನಗರ

ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು

The Bengaluru Live November 28, 2026 5:01 PM
ರಾಜ್ಯದ ಸಾಂಪ್ರದಾಯಿಕ ಸೀರೆ ಮತ್ತು ಬಟ್ಟೆಗಳಿಂದ ರೂಪಿಸಿದ ಕರ್ನಾಟಕದ ನಕ್ಷೆ
  • ಕರ್ನಾಟಕ

₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಗುರಿ: ಡಿ.1ರಂದು ನೂತನ ಜವಳಿ ನೀತಿ ಅನಾವರಣಗೊಳಿಸಲಿರುವ ಸಿಎಂ ಶಿವಕುಮಾರ್

The Bengaluru Live November 28, 2026 4:53 PM
ಬೆಂಚುಗಳಲ್ಲಿ ಕುಳಿತಿರುವ ಶಿಕ್ಷಕರಿಂದ ತುಂಬಿದ ಸಭಾಂಗಣದಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಮಧು ಬಂಗಾರಪ್ಪ
  • ಕರ್ನಾಟಕ
  • ಬೆಂಗಳೂರು ನಗರ

ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’

The Bengaluru Live November 28, 2026 3:00 PM

Latest Post

ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಬರ ಪರಿಹಾರ ಬಾರದಿದ್ದರೆ ‘ದೆಹಲಿ ಚಲೋ’: ಸಿಎಂ ಶಿವಕುಮಾರ್; ಮಹಿಳಾ ಮೀಸಲಾತಿಗೆ ಬೆಂಬಲ, ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ ಮಾಧ್ಯಮಗೋಷ್ಠಿಯಲ್ಲಿ ಬೆರಳು ಎತ್ತಿ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಬರ ಪರಿಹಾರ ಬಾರದಿದ್ದರೆ ‘ದೆಹಲಿ ಚಲೋ’: ಸಿಎಂ ಶಿವಕುಮಾರ್; ಮಹಿಳಾ ಮೀಸಲಾತಿಗೆ ಬೆಂಬಲ, ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ

November 28, 2026 5:06 PM
ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು ಆಸ್ಪತ್ರೆಯ ಹಾಸಿಗೆಯ ಪಕ್ಕ ನಿಂತಿರುವ ಎಚ್.ಡಿ. ಕುಮಾರಸ್ವಾಮಿ; ಮಗುವಿನ ಮುಖ ಮಸುಕುಗೊಳಿಸಲಾಗಿದೆ
  • ಕರ್ನಾಟಕ
  • ಬೆಂಗಳೂರು ನಗರ

ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು

November 28, 2026 5:01 PM
₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಗುರಿ: ಡಿ.1ರಂದು ನೂತನ ಜವಳಿ ನೀತಿ ಅನಾವರಣಗೊಳಿಸಲಿರುವ ಸಿಎಂ ಶಿವಕುಮಾರ್ ರಾಜ್ಯದ ಸಾಂಪ್ರದಾಯಿಕ ಸೀರೆ ಮತ್ತು ಬಟ್ಟೆಗಳಿಂದ ರೂಪಿಸಿದ ಕರ್ನಾಟಕದ ನಕ್ಷೆ
  • ಕರ್ನಾಟಕ

₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಗುರಿ: ಡಿ.1ರಂದು ನೂತನ ಜವಳಿ ನೀತಿ ಅನಾವರಣಗೊಳಿಸಲಿರುವ ಸಿಎಂ ಶಿವಕುಮಾರ್

November 28, 2026 4:53 PM
ಡಿ.1ರಂದು ಅಗರ್ತಲಾಕ್ಕೆ ಹೊರಟಿದ್ದೀರಾ? ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಿಗ್ಗೆ 10.15ಕ್ಕೆ ಹೊರಡಬೇಕಿದ್ದ ಹಮ್‌ಸಫರ್ ಎಕ್ಸ್‌ಪ್ರೆಸ್ ರದ್ದು ಬಂಗಾಳಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಅಗರ್ತಲಾ ರೈಲು ನಿಲ್ದಾಣದ ನಾಮಫಲಕ
  • ಬೆಂಗಳೂರು ನಗರ

ಡಿ.1ರಂದು ಅಗರ್ತಲಾಕ್ಕೆ ಹೊರಟಿದ್ದೀರಾ? ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಿಗ್ಗೆ 10.15ಕ್ಕೆ ಹೊರಡಬೇಕಿದ್ದ ಹಮ್‌ಸಫರ್ ಎಕ್ಸ್‌ಪ್ರೆಸ್ ರದ್ದು

November 28, 2026 4:46 PM
ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’ ಬೆಂಚುಗಳಲ್ಲಿ ಕುಳಿತಿರುವ ಶಿಕ್ಷಕರಿಂದ ತುಂಬಿದ ಸಭಾಂಗಣದಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಮಧು ಬಂಗಾರಪ್ಪ
  • ಕರ್ನಾಟಕ
  • ಬೆಂಗಳೂರು ನಗರ

ಮಿಷನ್ 60+: ಬೆಂಗಳೂರು ಸಮೀಪದ ಮೂರು ಜಿಲ್ಲೆಗಳು 70+ ಗುರಿ ತಲುಪಬೇಕು ಎಂದ ಮಧು ಬಂಗಾರಪ್ಪ; ಕೆಪಿಎಸ್ ಸ್ಥಾಪನೆ ‘ಬಂಗಾರದ ಕೆಲಸ’

November 28, 2026 3:00 PM
ಪಿಜಿ ಮೆಡಿಕಲ್ 2026: ಎರಡನೇ ಸುತ್ತಿನ ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ; ಡಿ.1ರವರೆಗೆ ಶುಲ್ಕ ಪಾವತಿ, ಡಿ.2ರವರೆಗೆ ಕಾಲೇಜಿಗೆ ವರದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಸರು ಮತ್ತು ಲಾಂಛನದ ಮುಂದೆ ಕುಳಿತಿರುವ ಎಚ್. ಪ್ರಸನ್ನ
  • ಕರ್ನಾಟಕ

ಪಿಜಿ ಮೆಡಿಕಲ್ 2026: ಎರಡನೇ ಸುತ್ತಿನ ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ; ಡಿ.1ರವರೆಗೆ ಶುಲ್ಕ ಪಾವತಿ, ಡಿ.2ರವರೆಗೆ ಕಾಲೇಜಿಗೆ ವರದಿ

November 28, 2026 12:10 PM

ನೀವು ತಪ್ಪಿಸಿಕೊಂಡಿರಬಹುದು

ಮಾಧ್ಯಮಗೋಷ್ಠಿಯಲ್ಲಿ ಬೆರಳು ಎತ್ತಿ ಮಾತನಾಡುತ್ತಿರುವ ಡಿ.ಕೆ. ಶಿವಕುಮಾರ್
  • ಕರ್ನಾಟಕ

ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಬರ ಪರಿಹಾರ ಬಾರದಿದ್ದರೆ ‘ದೆಹಲಿ ಚಲೋ’: ಸಿಎಂ ಶಿವಕುಮಾರ್; ಮಹಿಳಾ ಮೀಸಲಾತಿಗೆ ಬೆಂಬಲ, ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ

The Bengaluru Live November 28, 2026 5:06 PM
ಆಸ್ಪತ್ರೆಯ ಹಾಸಿಗೆಯ ಪಕ್ಕ ನಿಂತಿರುವ ಎಚ್.ಡಿ. ಕುಮಾರಸ್ವಾಮಿ; ಮಗುವಿನ ಮುಖ ಮಸುಕುಗೊಳಿಸಲಾಗಿದೆ
  • ಕರ್ನಾಟಕ
  • ಬೆಂಗಳೂರು ನಗರ

ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು

The Bengaluru Live November 28, 2026 5:01 PM
ರಾಜ್ಯದ ಸಾಂಪ್ರದಾಯಿಕ ಸೀರೆ ಮತ್ತು ಬಟ್ಟೆಗಳಿಂದ ರೂಪಿಸಿದ ಕರ್ನಾಟಕದ ನಕ್ಷೆ
  • ಕರ್ನಾಟಕ

₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಗುರಿ: ಡಿ.1ರಂದು ನೂತನ ಜವಳಿ ನೀತಿ ಅನಾವರಣಗೊಳಿಸಲಿರುವ ಸಿಎಂ ಶಿವಕುಮಾರ್

The Bengaluru Live November 28, 2026 4:53 PM
ಬಂಗಾಳಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವ ಅಗರ್ತಲಾ ರೈಲು ನಿಲ್ದಾಣದ ನಾಮಫಲಕ
  • ಬೆಂಗಳೂರು ನಗರ

ಡಿ.1ರಂದು ಅಗರ್ತಲಾಕ್ಕೆ ಹೊರಟಿದ್ದೀರಾ? ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಿಗ್ಗೆ 10.15ಕ್ಕೆ ಹೊರಡಬೇಕಿದ್ದ ಹಮ್‌ಸಫರ್ ಎಕ್ಸ್‌ಪ್ರೆಸ್ ರದ್ದು

The Bengaluru Live November 28, 2026 4:46 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಳಗಾವಿ ಅಧಿವೇಶನ ಮುಗಿಯುವುದರೊಳಗೆ ಬರ ಪರಿಹಾರ ಬಾರದಿದ್ದರೆ ‘ದೆಹಲಿ ಚಲೋ’: ಸಿಎಂ ಶಿವಕುಮಾರ್; ಮಹಿಳಾ ಮೀಸಲಾತಿಗೆ ಬೆಂಬಲ, ಕ್ಷೇತ್ರ ಪುನರ್ವಿಂಗಡಣೆಗೆ ವಿರೋಧ
  • ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು
  • ₹20,000 ಕೋಟಿ ಹೂಡಿಕೆ, 5 ಲಕ್ಷ ಉದ್ಯೋಗ ಗುರಿ: ಡಿ.1ರಂದು ನೂತನ ಜವಳಿ ನೀತಿ ಅನಾವರಣಗೊಳಿಸಲಿರುವ ಸಿಎಂ ಶಿವಕುಮಾರ್
  • ಡಿ.1ರಂದು ಅಗರ್ತಲಾಕ್ಕೆ ಹೊರಟಿದ್ದೀರಾ? ಎಸ್‌ಎಂವಿಟಿ ಬೆಂಗಳೂರಿನಿಂದ ಬೆಳಿಗ್ಗೆ 10.15ಕ್ಕೆ ಹೊರಡಬೇಕಿದ್ದ ಹಮ್‌ಸಫರ್ ಎಕ್ಸ್‌ಪ್ರೆಸ್ ರದ್ದು
©Copyright 2025 The Bengaluru Live All rights reserved. | MoreNews by AF themes.