Home ರಾಜಕೀಯ Otherwise, Kotwal Shishya would have filed a case against us and seized...

Otherwise, Kotwal Shishya would have filed a case against us and seized the property: Ramesh Jarkiholi| ಇಲ್ಲದಿದ್ದರೆ ಕೊತ್ವಾಲ್ ಶಿಷ್ಯ ನಮ್ಮ ಮೇಲೆ ಇಲ್ಲ-ಸಲ್ಲದ ಪ್ರಕರಣ ದಾಖಲಿಸಿ ಆಸ್ತಿಯೇ ಕಬಳಿಕೆ ಮಾಡುತ್ತಿದ್ದರು: ರಮೇಶ್ ಜಾರಕಿಹೊಳಿ

37
0
Otherwise, Kotwal Shishya would have filed a case against us and seized the property: Ramesh Jarkiholi

ಬೆಳಗಾವಿ:

ದೇವರು ದೊಡ್ಡವನು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಇಲ್ಲದಿದ್ದರೆ ಕೊತ್ವಾಲ್ ಶಿಷ್ಯ ನಮ್ಮ ಮೇಲೆ ಇಲ್ಲ-ಸಲ್ಲದ ಪ್ರಕರಣ ದಾಖಲಿಸಿ ಆಸ್ತಿಯೇ ಕಬಳಿಕೆ ಮಾಡುತ್ತಿದ್ದರು ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ದೂರಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಒಳ್ಳೆಯ ಮುಖ್ಯಮಂತ್ರಿ. ಆದರೆ, 2018ರಲ್ಲಿ ಇದ್ದಂತೆ ಈಗ ಇಲ್ಲ. ಕೊತ್ವಾಲ್ ಶಿಷ್ಯ ಡಿಸಿಎಂ ಆಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯಗೆ ಬೆಲೆ ಇಲ್ಲ. ಆದರೂ ದೇವರು ದೊಡ್ಡವನು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಇಲ್ಲದಿದ್ದರೆ ಕೊತ್ವಾಲ್ ಶಿಷ್ಯ ನಮ್ಮ ಆಸ್ತಿ ಎಲ್ಲ ಕಬಳಿಕೆ ಮಾಡುತ್ತಿದ್ದ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇಮಕಾತಿ ಬಗ್ಗೆ ಪ್ರತಿಕ್ರಿಯಿಸಿ ರಮೇಶ್ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಬೇರೆಯವರ ನೇಮಕ ಆಗುವುದಿಲ್ಲ. ಯಾವುದೇ ಬದಲಾವಣೆ ಇಲ್ಲ, ಎಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here