Home Uncategorized Pathaan 2nd Song: ‘ಪಠಾಣ್​’ ಚಿತ್ರದ 2ನೇ ಹಾಡು ಬಿಡುಗಡೆ ಮಾಡಲು ಸಜ್ಜಾದ ಶಾರುಖ್​ ಖಾನ್​,...

Pathaan 2nd Song: ‘ಪಠಾಣ್​’ ಚಿತ್ರದ 2ನೇ ಹಾಡು ಬಿಡುಗಡೆ ಮಾಡಲು ಸಜ್ಜಾದ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ

2
0
bengaluru

ಖ್ಯಾತ ನಟ ಶಾರುಖ್​ ಖಾನ್​ (Shah Rukh Khan) ಅವರ ‘ಪಠಾಣ್​’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ನೆಗೆಟಿವ್​ ಮತ್ತು ಪಾಸಿಟಿವ್​ ಎರಡೂ ಕಾರಣಕ್ಕಾಗಿ ಈ ಸಿನಿಮಾ ಸುದ್ದಿ ಆಗುತ್ತಿದೆ. ಒಂದು ವರ್ಗದ ಜನರು ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಕೂಗಾಡುತ್ತಿದ್ದಾರೆ. ಆದರೆ ಶಾರುಖ್​ ಖಾನ್​ ಅವರ ಅಪ್ಪಟ ಅಭಿಮಾನಿಗಳು ‘ಪಠಾಣ್​’ ಚಿತ್ರದ (Pathaan Movie) ಬಿಡುಗಡೆಗಾಗಿ ಕಾದಿದ್ದಾರೆ. 2023ರ ಜನವರಿ 25ರಂದು ಈ ಚಿತ್ರ ರಿಲೀಸ್​ ಆಗಲಿದೆ. ಕೆಲವೇ ದಿನಗಳ ಹಿಂದೆ ‘ಬೇಷರಂ ರಂಗ್​..’ ಹಾಡು ಬಿಡುಗಡೆ ಆಯಿತು. ಈ ಗೀತೆಯಲ್ಲಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡ ರೀತಿ ಸರಿಯಿಲ್ಲ ಎಂದು ನೆಟ್ಟಿಗರು ಬೊಬ್ಬೆ ಹೊಡೆದುಕೊಂಡರು. ಆ ವಿವಾದ ಇನ್ನೂ ಹಸಿಯಾಗಿರುವಾಗಲೇ ‘ಪಠಾಣ್​’ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ.

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರದ್ದು ಹಿಟ್​ ಜೋಡಿ. ‘ಓಂ ಶಾಂತಿ ಓಂ’, ‘ಹ್ಯಾಪಿ ನ್ಯೂ ಇಯರ್​’, ‘ಚೆನ್ನೈ ಎಕ್ಸ್​ಪ್ರೆಸ್​’ ಬಳಿಕ ಇವರಿಬ್ಬರು ‘ಪಠಾಣ್​’ ಸಿನಿಮಾದಲ್ಲಿ ಮತ್ತೊಮ್ಮೆ ಒಂದಾಗಿದ್ದಾರೆ. ಇಬ್ಬರನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ‘ಬೇಷರಂ ರಂಗ್​..’ ಹಾಡಿನಲ್ಲಿ ಇಬ್ಬರ ಕೆಮಿಸ್ಟ್ರಿ ಕಂಡು ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಅದೇ ರೀತಿ, ಈಗ ಎರಡನೇ ಹಾಡಿನ ಮೂಲಕ ರಂಜಿಸಲು ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್​ ಮಾಡಲಿದೆ? ಶಾರುಖ್​ ಖಾನ್​ಗೆ ನೇರ ಪ್ರಶ್ನೆ

‘ಜೂಮೇ ಜೋ ಪಠಾಣ್​..’ ಎಂಬ ಈ ಸಾಂಗ್​ ಹೇಗೆ ಮೂಡಿಬಂದಿರಬಹುದು ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ. ಮೊದಲ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿದ ಕೇಸರಿ ಬಿಕಿನಿ ಬಗ್ಗೆ ತಕಾರಾರು ವ್ಯಕ್ತವಾಯಿತು. ಎರಡನೇ ಹಾಡಿನಲ್ಲಿ ಏನೆಲ್ಲ ಇದೆ ಎಂಬುದು ಡಿಸೆಂಬರ್​ 22ರಂದು ತಿಳಿಯಲಿದೆ. ಈ ಹಾಡಿನ ರಿಲೀಸ್​ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್​ ಆಗುತ್ತಿದೆ.

bengaluru

ಇದನ್ನೂ ಓದಿ: Shah Rukh Khan: ‘ಮದುವೆ ಡೇಟ್​ ಮುಂದೂಡಿಕೊಳ್ಳಿ’: ಅಭಿಮಾನಿಗೆ ಸಲಹೆ ನೀಡಿದ ‘ಪಠಾಣ್​’ ಹೀರೋ ಶಾರುಖ್​ ಖಾನ್​

ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿರುವ ‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ‘ಯಶ್​ ರಾಜ್​ ಫಿಲ್ಮ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

#JhoomeJoPathaan is a modern fusion Qawaali & celebrates #Pathaan’s style and Panache.
“It has been a while since we have seen SRK grove to the music & we are hoping that people will love seeing their favourite superstar shake a leg with an attitude to kill for.”dir#ShahRukhKhan pic.twitter.com/MfCc95iIpW

— Shah Rukh Khan Universe Fan Club (@SRKUniverse) December 20, 2022

ವಿಲನ್​ ಆಗಿ ಜಾನ್​ ಅಬ್ರಾಹಂ ನಟಿಸಿದ್ದು, ಸ್ಟಾರ್​ ಮೆರುಗು ಹೆಚ್ಚಿದೆ. ಅದ್ದೂರಿ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾವನ್ನು ವಿವಿಧ ದೇಶಗಳಲ್ಲಿ ಚಿತ್ರಿಸಲಾಗಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಶಾರುಖ್​ ಖಾನ್​ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಹೆಚ್ಚಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

bengaluru

LEAVE A REPLY

Please enter your comment!
Please enter your name here