ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು; ರಾಜ್ಯಪಾಲರಾದ ಸುಧಾ ಯಾದವ್ ಉಪಸ್ಥಿತರಿದ್ದರು. ಚಿತ್ರ: ಮುಖ್ಯಮಂತ್ರಿ ಕಚೇರಿ
ಬೆಂಗಳೂರು: ಬೆಂಗಳೂರು ಮತ್ತು ಮೈಸೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಿದರು. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರನ್ನು ಬರಮಾಡಿಕೊಂಡರು. ರಾಜ್ಯಪಾಲರಾದ ಸುಧಾ ಯಾದವ್ ಅವರೂ ಉಪಸ್ಥಿತರಿದ್ದರು.
ದೆಹಲಿಯಿಂದ ಬಂದಿಳಿದ ಮೋದಿ ಅವರನ್ನು ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಆತ್ಮೀಯವಾಗಿ ಸ್ವಾಗತಿಸಿದರು ಎಂದು ಮಾಹಿತಿ ಮತ್ತು ಜನಸಂಪರ್ಕ ಇಲಾಖೆ ತಿಳಿಸಿದೆ.
ಇಲಾಖೆಯ ನೇರಪ್ರಸಾರ ವೇಳಾಪಟ್ಟಿಯ ಪ್ರಕಾರ, ಮೋದಿ ಅವರ ಬೆಂಗಳೂರು ಭೇಟಿಯ ಅಂಗವಾಗಿ ಪ್ರಸಾರ ಭಾರತಿಯ ಕಾಸ್ಮೋಸ್-ಮೈಸೂರು ಪಿಬಿ-ಶಬ್ದ್ ಉದ್ಘಾಟನೆ, ಮೆಟ್ರೊಗೆ ಚಾಲನೆ ನೀಡಿ ತವರೆಕೆರೆಯಿಂದ ಐಐಎಂ ಬೆಂಗಳೂರು ಮೆಟ್ರೊ ನಿಲ್ದಾಣದವರೆಗೆ ಪ್ರಯಾಣ, ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಭಾಗಿ ಸೇರಿವೆ.
ಇದನ್ನೂ ಓದಿ:
