Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ರಾಜಕೀಯ
  • ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ
  • ರಾಜಕೀಯ

ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ

The Bengaluru Live November 9, 2026 8:14 PM 1 minute read
ಕರ್ನಾಟಕ ಸರ್ಕಾರದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮೇಜಿನ ಮುಂಭಾಗದಲ್ಲಿ ಕುಳಿತಿರುವ ಸಚಿವರು

ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ. ಚಿತ್ರ: ಸಚಿವರ ಮಾಧ್ಯಮ ಗುಂಪು

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಕಲಬುರಗಿ ನಗರದ ಸಮೀಪದ ಕಪನೂರು ಗ್ರಾಮದ ಬಳಿ ಶರಣ-ಶರಣೆಯರ ವಚನ ಪರಂಪರೆ, ಸಾಮಾಜಿಕ ಕ್ರಾಂತಿ ಹಾಗೂ ಕನ್ನಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಆಧುನಿಕ ವಚನ ಮಂಟಪವನ್ನು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ವಚನ ಮಂಟಪದ ವಿನ್ಯಾಸ, ನಿರ್ಮಾಣದ ರೂಪುರೇಷೆ ಹಾಗೂ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು, ಯೋಜನೆಯನ್ನು ಅರ್ಥಪೂರ್ಣವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಚನ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಿಧ ಹೆಸರಾಂತ ವಾಸ್ತುಶಿಲ್ಪಿಗಳು ಸಿದ್ಧಪಡಿಸಿ ಸಲ್ಲಿಸಿರುವ ವಿನ್ಯಾಸ ಹಾಗೂ ಪರಿಕಲ್ಪನಾ ವರದಿಗಳನ್ನು ಸಚಿವರು ವೀಕ್ಷಿಸಿದರು.

ಕಲಬುರಗಿ ತಾಲ್ಲೂಕಿನ ಕಪನೂರು ಗ್ರಾಮದ ಸರ್ವೆ ನಂ. 44/1ರಲ್ಲಿರುವ 6 ಎಕರೆ 6 ಗುಂಟೆ ಜಮೀನಿನಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ವಚನ ಮಂಟಪದ ಜೊತೆಗೆ ಶರಣರ ಜೀವನ, ವಚನ ಸಾಹಿತ್ಯ ಮತ್ತು ವಚನ ಚಳವಳಿಯ ಇತಿಹಾಸವನ್ನು ಪರಿಚಯಿಸುವ ವಸ್ತುಸಂಗ್ರಹಾಲಯ, ವ್ಯಾಖ್ಯಾನ ಕೇಂದ್ರ (Interpretation Centre), ಅನುಭವ ಕೇಂದ್ರ (Experience Centre) ಹಾಗೂ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಪರಿಕಲ್ಪನೆಯೂ ಯೋಜನೆಯಲ್ಲಿದೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಸೇರಿದಂತೆ ವಚನ ಕ್ರಾಂತಿಯಲ್ಲಿ ಪಾಲ್ಗೊಂಡ ಎಲ್ಲ ಶರಣ-ಶರಣೆಯರ ಜೀವನ, ಸಾಧನೆ, ಭಾವಚಿತ್ರಗಳು ಹಾಗೂ ಅಮೂಲ್ಯ ವಚನಗಳನ್ನು ಇಲ್ಲಿ ಪರಿಚಯಿಸಲಾಗುವುದು. ವಚನ ಸಾಹಿತ್ಯದ ಆಶಯ, ಸಮಾನತೆ, ಕಾಯಕ, ದಾಸೋಹ ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವ ರೀತಿಯಲ್ಲಿ ಮಂಟಪವನ್ನು ವಿನ್ಯಾಸಗೊಳಿಸಲಾಗುವುದು.

ಇದರೊಂದಿಗೆ ಚರ್ಚೆ, ಸಂವಾದ, ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಕೂಲವಾಗುವಂತೆ ತೆರೆದ ಸಭಾಂಗಣವನ್ನೂ ನಿರ್ಮಿಸುವ ಉದ್ದೇಶವಿದೆ. ವಚನ ಸಾಹಿತ್ಯದ ಕುರಿತು ಅಧ್ಯಯನ ನಡೆಸುವ ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ಅಗತ್ಯ ಮಾಹಿತಿ ಮತ್ತು ಸೌಲಭ್ಯಗಳನ್ನು ಒದಗಿಸುವ ಕೇಂದ್ರವಾಗಿಯೂ ಇದು ರೂಪುಗೊಳ್ಳಲಿದೆ.

ಕಲಬುರಗಿ ಜಿಲ್ಲೆಯ ಐತಿಹಾಸಿಕ ತಾಣಗಳ ಅಭಿವೃದ್ಧಿಗೆ ಒತ್ತು

ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಪ್ರವಾಸೋದ್ಯಮ, ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ತಾಣಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಈ ನಿಟ್ಟಿನಲ್ಲಿ ಕಾಳಗಿ ತಾಲ್ಲೂಕಿನ ಸೂರ್ಯನಾರಾಯಣ ದೇವಾಲಯದ ಸಂರಕ್ಷಣಾ ಕಾಮಗಾರಿ, ಸೇಡಂ ತಾಲ್ಲೂಕಿನ ಐತಿಹಾಸಿಕ ಮಳಖೇಡ ಕೋಟೆಯ ಅಭಿವೃದ್ಧಿ, ಚಿತ್ತಾಪುರ ತಾಲ್ಲೂಕಿನ ನಾಗಾವಿ ಪಾರಂಪರಿಕ ಪ್ರದೇಶದಲ್ಲಿರುವ ಪ್ರಾಚ್ಯ ಕುರುಹುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಅದೇ ರೀತಿ ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿಯಲ್ಲಿರುವ ಐತಿಹಾಸಿಕ ಬೌದ್ಧ ನೆಲೆ ಹಾಗೂ ಪ್ರಾಚ್ಯ ಕುರುಹುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಲಬುರಗಿ ಜಿಲ್ಲೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ, ಈ ತಾಣಗಳನ್ನು ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಆಕರ್ಷಣೀಯವಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರೊಂದಿಗೆ ಸ್ಥಳೀಯ ಆರ್ಥಿಕ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಸಚಿವರು ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೇ ಅಲ್ಲದೆ, ವಿಡಿಯೊ ಸಂವಾದದ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹಾಗೂ ಜಿಲ್ಲೆಯ ಅಧಿಕಾರಿಗಳು ಭಾಗವಹಿಸಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ
Next: ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ

Related Stories

ಬಿಳಿಚೋಡಿನಲ್ಲಿ ಹೂಗಳೊಂದಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಮುಖಂಡರು
  • ರಾಜಕೀಯ

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ

The Bengaluru Live November 9, 2026 8:14 PM
ಬಸ್ ನಿಲ್ದಾಣದ ಬಳಿ ಮೈಕ್ರೋಫೋನ್‌ಗಳ ಮುಂದೆ ಮಾತನಾಡುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಸ್ಥಳ ಪರಿಶೀಲಿಸಿದ್ದೇನೆ; ಲಾಲ್‌ಬಾಗ್ ಬಳಿ ಹಳ್ಳ, ಪರ್ಯಾಯ ವ್ಯವಸ್ಥೆಗೆ ಸೂಚನೆ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 7:04 PM
ಬಿಳಿ ಉಡುಪಿನಲ್ಲಿರುವ ಡಿ.ಕೆ. ಶಿವಕುಮಾರ್ ಹಳದಿ ಗುಲಾಬಿ ಹೂಗುಚ್ಛವನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

The Bengaluru Live November 9, 2026 6:53 PM

Latest Post

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ ಬಿಳಿಚೋಡಿನಲ್ಲಿ ಹೂಗಳೊಂದಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಮುಖಂಡರು
  • ರಾಜಕೀಯ

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ

November 9, 2026 8:14 PM
ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ ಕರ್ನಾಟಕ ಸರ್ಕಾರದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮೇಜಿನ ಮುಂಭಾಗದಲ್ಲಿ ಕುಳಿತಿರುವ ಸಚಿವರು
  • ರಾಜಕೀಯ

ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ

November 9, 2026 8:14 PM
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ ನಾಮಫಲಕದ ಬಳಿ ಸಚಿವರು ಹಾಗೂ ಅಧಿಕಾರಿಗಳು ನಡೆದು ಬರುತ್ತಿರುವ ದೃಶ್ಯ
  • ಕರ್ನಾಟಕ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ

November 9, 2026 7:22 PM
ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಸ್ಥಳ ಪರಿಶೀಲಿಸಿದ್ದೇನೆ; ಲಾಲ್‌ಬಾಗ್ ಬಳಿ ಹಳ್ಳ, ಪರ್ಯಾಯ ವ್ಯವಸ್ಥೆಗೆ ಸೂಚನೆ: ಸಿಎಂ ಡಿ.ಕೆ. ಶಿವಕುಮಾರ್ ಬಸ್ ನಿಲ್ದಾಣದ ಬಳಿ ಮೈಕ್ರೋಫೋನ್‌ಗಳ ಮುಂದೆ ಮಾತನಾಡುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಸ್ಥಳ ಪರಿಶೀಲಿಸಿದ್ದೇನೆ; ಲಾಲ್‌ಬಾಗ್ ಬಳಿ ಹಳ್ಳ, ಪರ್ಯಾಯ ವ್ಯವಸ್ಥೆಗೆ ಸೂಚನೆ: ಸಿಎಂ ಡಿ.ಕೆ. ಶಿವಕುಮಾರ್

November 9, 2026 7:04 PM
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್ ಬಿಳಿ ಉಡುಪಿನಲ್ಲಿರುವ ಡಿ.ಕೆ. ಶಿವಕುಮಾರ್ ಹಳದಿ ಗುಲಾಬಿ ಹೂಗುಚ್ಛವನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತಿರುವ ದೃಶ್ಯ
  • ಕರ್ನಾಟಕ
  • ರಾಜಕೀಯ

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಮುನಿಸಿಲ್ಲ: ಸಿಎಂ ಡಿ ಕೆ ಶಿವಕುಮಾರ್

November 9, 2026 6:53 PM
ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್ ಕನ್ನಡ ಬ್ಯಾನರ್ ಮುಂದೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ; ಒಂದು ಲಕ್ಷ ಆಸ್ತಿದಾರರಿಗೆ ಭೂ ಗ್ಯಾರಂಟಿ: ಸಿಎಂ ಡಿ.ಕೆ. ಶಿವಕುಮಾರ್

November 9, 2026 6:22 PM

ನೀವು ತಪ್ಪಿಸಿಕೊಂಡಿರಬಹುದು

ಬಿಳಿಚೋಡಿನಲ್ಲಿ ಹೂಗಳೊಂದಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಮುಖಂಡರು
  • ರಾಜಕೀಯ

ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ

The Bengaluru Live November 9, 2026 8:14 PM
ಕರ್ನಾಟಕ ಸರ್ಕಾರದ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಮೇಜಿನ ಮುಂಭಾಗದಲ್ಲಿ ಕುಳಿತಿರುವ ಸಚಿವರು
  • ರಾಜಕೀಯ

ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ

The Bengaluru Live November 9, 2026 8:14 PM
ನಾಮಫಲಕದ ಬಳಿ ಸಚಿವರು ಹಾಗೂ ಅಧಿಕಾರಿಗಳು ನಡೆದು ಬರುತ್ತಿರುವ ದೃಶ್ಯ
  • ಕರ್ನಾಟಕ

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ

The Bengaluru Live November 9, 2026 7:22 PM
ಬಸ್ ನಿಲ್ದಾಣದ ಬಳಿ ಮೈಕ್ರೋಫೋನ್‌ಗಳ ಮುಂದೆ ಮಾತನಾಡುತ್ತಿರುವ ಸಿಎಂ ಡಿ.ಕೆ. ಶಿವಕುಮಾರ್
  • ಕರ್ನಾಟಕ
  • ರಾಜಕೀಯ

ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಸ್ಥಳ ಪರಿಶೀಲಿಸಿದ್ದೇನೆ; ಲಾಲ್‌ಬಾಗ್ ಬಳಿ ಹಳ್ಳ, ಪರ್ಯಾಯ ವ್ಯವಸ್ಥೆಗೆ ಸೂಚನೆ: ಸಿಎಂ ಡಿ.ಕೆ. ಶಿವಕುಮಾರ್

The Bengaluru Live November 9, 2026 7:04 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೂ ಆದ್ಯತೆ: ಬಿಳಿಚೋಡಿನಲ್ಲಿ ₹31.82 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಟಿ. ರಘುಮೂರ್ತಿ
  • ಕಲಬುರಗಿ ಬಳಿ ಆಧುನಿಕ ವಚನ ಮಂಟಪ ನಿರ್ಮಾಣಕ್ಕೆ ಸಿದ್ಧತೆ; ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರಕ್ಕೂ ಚಿಂತನೆ: ಸಚಿವ ಪ್ರಿಯಾಂಕ್ ಖರ್ಗೆ
  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ₹38 ಕೋಟಿ ವೆಚ್ಚದ ಪ್ರವಾಸಿ ಸ್ನೇಹಿ ಕಾಮಗಾರಿ, ಹೊಸ ಸೌಲಭ್ಯಗಳ ಉದ್ಘಾಟನೆ: ಸಚಿವ ರಾಮಲಿಂಗಾ ರೆಡ್ಡಿ
  • ಹೆಲಿಕಾಪ್ಟರ್‌ನಲ್ಲಿ ಸಂಚರಿಸುವಾಗ ಸುರಂಗ ಮಾರ್ಗದ ಸ್ಥಳ ಪರಿಶೀಲಿಸಿದ್ದೇನೆ; ಲಾಲ್‌ಬಾಗ್ ಬಳಿ ಹಳ್ಳ, ಪರ್ಯಾಯ ವ್ಯವಸ್ಥೆಗೆ ಸೂಚನೆ: ಸಿಎಂ ಡಿ.ಕೆ. ಶಿವಕುಮಾರ್
©Copyright 2025 The Bengaluru Live All rights reserved. | MoreNews by AF themes.