Home ಸಿನಿಮಾ ಪುರುಸೊತ್ ಮಾಡಿಕೊಂಡು ‘ಪುರಸೋತ್ ರಾಮ’ನನ್ನು ನೋಡಿ

ಪುರುಸೊತ್ ಮಾಡಿಕೊಂಡು ‘ಪುರಸೋತ್ ರಾಮ’ನನ್ನು ನೋಡಿ

76
0

ಬೆಂಗಳೂರು:

ಮಾನಸದೇವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಮಾನಸ ಅವರು ನಿರ್ಮಿಸಿರುವ ‘ಪುರಸೋತ್ ರಾಮ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಪ್ರಭುದೇವ್ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಸರು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ‌ನಾಲ್ಕು ಹಾಡುಗಳನ್ನು ಪ್ರಭುದೇವ ಹಾಗೂ ಧ್ರುವ ಬರೆದಿದ್ದಾರೆ. ಸುದ್ದೋರಾಯ್ ಸಂಗೀತ ನೀಡಿದ್ದಾರೆ.

PursotRama..

ಕಿರಣ್ ಕುಮಾರ್ ಛಾಯಾಗ್ರಹಣ, ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಾಜಕಿಶೋರ್, ಮದನ್ ಹರಿಣಿ ನೃತ್ಯ ನಿರ್ದೇಶನವಿದೆ.

ಕಾಮಿಡಿ ಕಥಾ ಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ರವಿಶಂಕರ್ ಗೌಡ, ಶಿವರಾಜ್ ಕೆ.ಆರ್ ಪೇಟೆ, ರಿತಿಕ್ ಸರು, ಸಹನ, ಮಾನಸ, ಅನುಷ ಪಕಾಲಿ, ಕುರಿ ಪ್ರತಾಪ, ಬ್ಯಾಂಕ್ ಜನಾರ್ದನ್, ಆರ್.ಟಿ.ರಮಾ ಮುಂತಾದವರಿದ್ದಾರೆ.

LEAVE A REPLY

Please enter your comment!
Please enter your name here