ಬೆಂಗಳೂರು:
ಕೋವಿಡ್ ಪರೀಕ್ಷೆಯ ದರವನ್ನು ರಾಜ್ಯ ಸರ್ಕಾರ ಮತ್ತೊಮ್ಮೆ ಪರಿಷ್ಕರಿಸಿದೆ. ವ್ಯಕ್ತಿಯು ಸ್ವತಃ ಪ್ರಯೋಗಾಲಯದಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡಲ್ಲಿ 800 ರೂ. ಶುಲ್ಕ ಪಾವತಿಸಬೇಕಾಗುತ್ತದೆ.
ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ, ಖಾಸಗಿ ಪ್ರಯೋಗಾಲಯಗಳಿಗೆ ರವಾನಿಸುವ ಪ್ರತಿ ಮಾದರಿಯ ಆರ್‌ಟಿ–ಪಿಸಿಆರ್ ಪರೀಕ್ಷಾ ಶುಲ್ಕ 1,200ರೂ.ಗಳಿಂದ 800ರೂ.ಗೆ ಇಳಿಸಿದೆ.
Revised rates for the Covid19 tests in Karnataka.@CMofKarnataka @BSYBJP @DrKSudhakar4 @CovidKarnataka @DHFWKA pic.twitter.com/YSJvtHJOJd
— PANKAJ KUMAR PANDEY, IAS (@iaspankajpandey) December 9, 2020
ಟ್ರೂ ನ್ಯಾಟ್ ಪರೀಕ್ಷೆಯ ದರ ಕೂಡ ಇಳಿಕೆಯಾಗಿದೆ. ಖಾಸಗಿ ಆಸ್ಪತ್ರೆಯ ಪರೀಕ್ಷೆಗೆ 2,220 ರೂ.ಗಳಿಂದ 1,250ಕ್ಕೆ ಕಡಿಮೆಗೊಳಿಸಲಾಗಿದೆ.
ಕೋವಿಡ್ ಪರೀಕ್ಷೆಗೆ ಅಗತ್ಯವಿರುವ ರಾಸಾಯನಿಕ ಹಾಗೂ ಇತರ ಅಗತ್ಯ ವಸ್ತುಗಳ ದರಗಳು ಕಡಿಮೆಯಾಗಿವೆ. ಈ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಜತೆಗೆ ಚರ್ಚಿಸಿ, ಪರೀಕ್ಷಾ ದರ ಇಳಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಿಂದ (ಐಸಿಎಂಆರ್) ಮಾನ್ಯತೆ ಪಡೆದ ರಾಜ್ಯದ ಪ್ರಯೋಗಾಲಯಗಳಿಗೆ ಮಾತ್ರ ನೂತನ ದರ ಅನ್ವಯವಾಗುತ್ತದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.