ಕೊರೊನಾ ಪಾಸಿಟಿವಿ ದರ ಶೇ. 20.76ಕ್ಕೆ ಇಳಿಕೆಯಾಗಿದ್ದರೆ, ಸಾವಿನ ಪ್ರಮಾಣ ಶೇ. 2.40ಕ್ಕೆ ಏರಿಕೆ
ಬೆಂಗಳೂರು:
ಕೇವಲ 24 ಗಂಟೆಗಳ ಅಂತರದಲ್ಲಿ 626 ಜನರು ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ 362 ಸಾವು ಸಂಭವಿಸಿದೆ.
ಸಾವಿನ ಪ್ರಮಾಣವೂ ಈವರೆಗಿನ ಗರಿಷ್ಠ ಶೇ. 2.40ಕ್ಕೆ ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಕೋವಿಡ್ ಸಾವುಗಳ ಸಂಖ್ಯೆ 25,282 ಗಡಿ ದಾಟಿದೆ.
ಬೆಂಗಳೂರಿನಲ್ಲಿ 362 ಸಾವು ಸಂಭವಿಸಿದೆ. ಬೆಂಗಳೂರು ಗ್ರಾಮಾಂತರದಲ್ಲಿ 30, ಮೈಸೂರಿನಲ್ಲಿ 22, ಬಳ್ಳಾರಿಯಲ್ಲಿ 18, ಉತ್ತರ ಕನ್ನಡದಲ್ಲಿ 17, ಕಲಬುರಗಿ 15, ಬೆಳಗಾವಿಯಲ್ಲಿ 13, ಮಂಡ್ಯದಲ್ಲಿ 13, ಶಿವಮೊಗ್ಗ 13, ತುಮಕೂರು 13, ಕೊಪ್ಪಳದಲ್ಲಿ 12, ಹಾಸನದಲ್ಲಿ 11 ಸೋಂಕಿತರು ಅಸುನೀಗಿದ್ದಾರೆ.
ರಾಜ್ಯದಲ್ಲಿ ಭಾನುವಾರ 25,979 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 24,24,904ಕ್ಕೆ ಏರಿಕೆಯಾಗಿದೆ. ಪಾಸಿಟಿವಿ ದರ ಶೇ. 20.76ಕ್ಕೆ ಇಳಿಕೆಯಾಗಿದೆ.
ಇಂದಿನ 23/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/m1mcUWEAPz @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/IbYu5ceCSq
— K'taka Health Dept (@DHFWKA) May 23, 2021
ಹೊಸ ಪ್ರಕರಣಗಳು ಮತ್ತು ಪಾಸಿಟಿವಿ ದರ ಎರಡೂ ಇಳಿಕೆಯಾಗಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ತೀವ್ರ ಏರಿಕೆಯಾಗಿದೆ. ಮಾತ್ರವಲ್ಲ ಈವರೆರಿನ ಗರಿಷ್ಠ ಸಾವುಗಳು ಭಾನುವಾರ ದಾಖಲಾಗಿವೆ. ಕೇವಲ 24 ಗಂಟೆಗಳ ಅಂತರದಲ್ಲಿ 626 ಜನರು ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಪ್ರಮಾಣವೂ ಈವರೆಗಿನ ಗರಿಷ್ಠ ಶೇ. 2.40ಕ್ಕೆ ಹೆಚ್ಚಳವಾಗಿದೆ. ರಾಜ್ಯದ ಒಟ್ಟು ಕೋವಿಡ್ ಸಾವುಗಳ ಸಂಖ್ಯೆ 25 ಸಾವಿರದ (25,282) ಗಡಿ ದಾಟಿದೆ.
ಬೆಂಗಳೂರು ಸೇರಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೊಸ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿವೆ. ರಾಜಧಾನಿಯಲ್ಲಿ ಭಾನುವಾರ 7,494 ಹೊಸ ಕೇಸ್‌ಗಳು ದೃಢಪಟ್ಟಿದ್ದರೆ, ಮೈಸೂರಿನಲ್ಲಿ 2222, ಹಾಸನದಲ್ಲಿ 1618, ತುಮಕೂರಿನಲ್ಲಿ 1269, ಬಳ್ಳಾರಿಯಲ್ಲಿ 1190, ಬೆಳಗಾವಿಯಲ್ಲಿ 1066 ಪ್ರಕರಣಗಳು ವರದಿಯಾಗಿವೆ.