Home ನಗರ ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಇಳಿಕೆ

ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಇಳಿಕೆ

22
0

ಪಥಾನಮ್‌ತಿಟ್ಟ:

ಕಳೆದ ವರ್ಷಕ್ಕೆ ಹೋಲಿಸಿದರೆ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇಗುಲದ ಆದಾಯ ಗಳಿಕೆ ಸಾಕಷ್ಟು ಇಳಿಕೆ ಕಂಡಿದೆ.

ಮಂಡಲಂ-ಮಕರವಿಲಕ್ಕು ಋತುವಿನ ಅರಂಭದ ನಂತರದ 23 ದಿನಗಳಲ್ಲಿ 4.07 ಕೋಟಿ ರೂ.ಆದಾಯ ಸಂಗ್ರಹವಾಗಿದೆ. ಇದು ಕಳೆದ ವರ್ಷ ಈ ಸಮಯದ 23 ದಿನಗಳಲ್ಲಿ ಸಂಗ್ರಹವಾದ ಮೊತ್ತದ ಶೇ.5ರಷ್ಟು ಕೂಡ ಅಲ್ಲ ಎನ್ನಲಾಗಿದೆ.

ಇದು ಅಪ್ಪಂ ಮತ್ತು ಅರಾವನದ ಅರ್ಪಣೆ ಮತ್ತು ಮಾರಾಟದಿಂದ 4,07,36,383 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 2019 ರಲ್ಲಿ ಈ ಮೊತ್ತ 82.70 ಕೋಟಿ ರೂ.ಗಳಷ್ಟಿತ್ತು.

ಈ ಋತುನಲ್ಲಿ ನ.16 ರಿಂದ ಡಿ.8ರವರೆಗೆ ಸುಮಾರು 34,000 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಒಟ್ಟು 1000 ಜನರು ಮತ್ತು ಶನಿವಾರ ಮತ್ತು ಭಾನುವಾರ ತಲಾ 2000 ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here