Home ಬೆಂಗಳೂರು ನಗರ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಚೆಂಡು ಎಂದು ಬಣ್ಣಿಸಿದ ಸಚಿವರು

ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಚೆಂಡು ಎಂದು ಬಣ್ಣಿಸಿದ ಸಚಿವರು

43
0
Sangolli Rayanna was a fire ball of freedom struggle says Higher Education Minister

ಮಲ್ಲೇಶ್ವರ ಕ್ಷೇತ್ರದಲ್ಲಿ ವಿವಿಧೆಡೆ ಸ್ವಾತಂತ್ರ್ಯ ದಿನಾಚರಣೆ; ವಿವಿಧೆಡೆ ಕಾರ್ಯಕ್ರಮಗಳಲ್ಲಿ ಭಾಗಿಯಾದ ಡಾ.ಅಶ್ವತ್ಥನಾರಾಯಣ

ಬೆಂಗಳೂರು:

ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ಕ್ಷೇತ್ರದ ವಿವಿಧಡೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಮೊದಲು ಮಿಲ್ಕ್ ಕಾಲೋನಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಲಯನ್ಸ್ ಕ್ಲಬ್ ಆಫ್‌  ಬೆಂಗಳೂರು ಆಯೋಜಿಸಿದ್ದ‌ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ವಿವಿಧ ಕ್ಷೇತ್ರಗಳ ಸಾಧಕರು, ಹಿರಿಯ ಸಮಾಜ ಸೇವಕರು ಹಾಗೂ ಕೋವಿಡ್ ಸಂದರ್ಭದಲ್ಲಿ ಕೆಲಸ‌ ಮಾಡಿದ ವೈದ್ಯರನ್ನು‌ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ‌ಮುಖಂಡ ಸುರೇಶ ಗೌಡ ಮುಂತಾದವರು ಇದ್ದರು.

ನಂತರ ಸುಬ್ರಹ್ಮಣ್ಯನಗರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಭಾಗಿಯಾಗಿದ್ದರಲ್ಲದೆ, ಈ ಸಂದರ್ಭದಲ್ಲಿ ರಾಯಣ್ಣ ಅವರ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ನಡೆಸಿದ ಹೋರಾಟವನ್ನು ಸ್ಮರಿಸಿಕೊಂಡರು.

ಇವತ್ತು ಒಬ್ಬ ಮಹಾನ್‌ ಹೋರಾಟಗಾರರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಚೆಂಡು, ಬ್ರಿಟೀಷರ ಎದೆ ನಡುಗಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನವೂ ಇಂದೇ ಆಗಿದೆ ಎಂದು ಅವರು ಹೇಳಿದರು.

ಕೇವಲ 34 ವರ್ಷಗಳಷ್ಟೇ ಬಾಳಿ ಬದುಕಿದ ಈ ಮಹಾನ್‌ ಚೇತನ ನಮಗೆಲ್ಲರಿಗೂ ದಿವ್ಯಸ್ಫೂರ್ತಿ. ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಿತ್ತೂರಿನ ರಾಣಿ ಚೆನ್ನಮ್ಮ ಅವರ ಬಲಗೈ ಬಂಟರಾಗಿದ್ದರು. ನಿಷ್ಠೆ-ನಂಬಿಕೆಯ ಪ್ರತೀಕ ಎಂದು ಅವರು ಹೇಳಿದರು

ಅದಾದ ಮೇಲೆ ಗಾಯತ್ರಿ ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರಲ್ಲದೆ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ವೇಳೆಯಲ್ಲಿ ಕಾಡುತ್ತಿರುವ ಕೋವಿಡ್‌ ಮಹಾಮಾರಿಯನ್ನು ಹತ್ತಿಕ್ಕಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ‌‌ಮುಖಂಡ ನಾಗೇಶ ಮುಂತಾದವರು ಇದ್ದರು.

ಎಲ್ಲ ಕಡೆಯಲ್ಲೂ ಸಚಿವ ಡಾ.ಅಶ್ವತ್ಥನಾರಾಯಣ ಅವರು ಸಾರ್ವಜನಿಕರ ಜತೆ ಸಂವಾದ ನಡೆಸಿದರಲ್ಲದೆ, ವಿದ್ಯಾರ್ಥಿಗಳು, ಯುವಕರನ್ನು ಮಾತನಾಡಿದರು. ಪ್ರತಿ ಕಾರ್ಯಕ್ರಮದಲ್ಲೂ ಸಹಿ ಹಂಚಿ ಸಂಭ್ರಮಿಸಲಾಯಿತು.

LEAVE A REPLY

Please enter your comment!
Please enter your name here