Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕ್ರೀಡೆ
  • ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

The Bengaluru Live November 14, 2026 9:44 PM
ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಶಾಲಾ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಅವರು ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಐದನೇ ಕರ್ನಾಟಕ ಮಿನಿ ಒಲಂಪಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಹಾಗೂ ಸಂಸ್ಥೆಯ ಅಧ್ಯಕ್ಷ ಕೆ. ಗೋವಿಂದರಾಜು ಮತ್ತು ನಟ ‘ನೆನಪಿರಲಿ’ ಪ್ರೇಮ್ ಉಪಸ್ಥಿತರಿದ್ದರು.

“ಮಕ್ಕಳಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ತರಬೇತಿ ನೀಡಲು ಪ್ರತಿ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಈ ಹುದ್ದೆಗಳ ನೇಮಕಾತಿಗೆ ಮುಂದಿನ ದಿನಗಳಲ್ಲಿ ನಾವು ಗಮನ ಹರಿಸುತ್ತೇವೆ” ಎಂದು ಶಿವಕುಮಾರ್ ಹೇಳಿದರು.

ಪಿಯುಸಿ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬ ದೂರುಗಳಿದ್ದು, ಇದಕ್ಕೆ ಅವಕಾಶ ಇರಬಾರದು ಎಂದ ಅವರು, “ಶಾಲಾ ಮತ್ತು ಪಿಯು ಹಂತದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಬೇಕು” ಎಂದು ಹೇಳಿದರು.

ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಶಿವಕುಮಾರ್, ಹೈಸ್ಕೂಲ್‌ನಲ್ಲಿದ್ದಾಗ ಸತತ ಮೂರು ವರ್ಷ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಅಂದಿನ ರಾಜ್ಯಪಾಲರಿಂದ ಗೌರವ ಸ್ವೀಕರಿಸಿದ್ದೆ, ಪಿಯುಸಿಯಲ್ಲಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದೆ ಎಂದರು. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

“ಯುವ ಪ್ರತಿಭೆಗಳನ್ನು ಹೊರತರುವ ಉದ್ದೇಶದಿಂದ ಭಾರತ ಜೋಡೋ ಯುವ ಸಂಘಗಳನ್ನು ಪ್ರಾರಂಭಿಸಿದ್ದೇವೆ. 16 ರಿಂದ 35 ವರ್ಷದ ಪ್ರತಿಭೆಗಳಿಗೆ ಇದು ಉತ್ತಮ ವೇದಿಕೆ. ಇದಕ್ಕಾಗಿ ಪ್ರತಿ ಪಂಚಾಯತಿ ಮತ್ತು ವಾರ್ಡ್‌ಗಳಿಗೆ ತಲಾ 10 ಲಕ್ಷ ರೂಪಾಯಿ ಒದಗಿಸಲಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಳ್ಳಿ” ಎಂದು ಹೇಳಿದರು.

“ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಪ್ರತಿ ಮಗು ಸಾಮರ್ಥ್ಯ ಹೊಂದಿದ್ದು, ಪ್ರತಿ ಮಗುವೂ ಚಾಂಪಿಯನ್ ಆಗಿದೆ. ಸೋತವರಿಗೂ ಮುಂದೆ ಗೆಲ್ಲುವ ಅವಕಾಶವಿರುತ್ತದೆ. ಜೀವನದಲ್ಲಿ ಯಾವತ್ತೂ ಧೈರ್ಯವನ್ನು ಕಳೆದುಕೊಳ್ಳಬಾರದು. ಗೆದ್ದಾಗ ಹೆಮ್ಮೆ ಪಡಬೇಡಿ, ಸೋತಾಗ ಧೈರ್ಯ ಕಳೆದುಕೊಳ್ಳಬೇಡಿ” ಎಂದು ಯುವ ಕ್ರೀಡಾಪಟುಗಳಿಗೆ ಹೇಳಿದರು.

“ಆಕಾಶಕ್ಕೆ ಮಿತಿ ಎಂಬುದಿಲ್ಲ. ದೊರೆತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಏನು ಬೇಕಾದರೂ ಸಾಧನೆ ಮಾಡುವ ಶಕ್ತಿ ನಮ್ಮ ಯುವಜನತೆಯಲ್ಲಿದೆ. ವಿದ್ಯಾರ್ಥಿ ಯುವಜನತೆಯಲ್ಲಿ ದೇಶದ ಭವಿಷ್ಯವಿದೆ. ಇದಕ್ಕಾಗಿ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ. ಕರ್ನಾಟಕ ರಾಜ್ಯಕ್ಕೆ ಗೌರವ ತರುವ ಕೆಲಸವನ್ನು ನೀವೆಲ್ಲರೂ ಮಾಡಬೇಕು” ಎಂದು ಹೇಳಿದರು.

ಕ್ರೀಡಾ ಮನೋಭಾವ ಇರಿಸಿಕೊಂಡವರು ಇತಿಹಾಸದಲ್ಲಿ ನಾಯಕರಾಗಿ ಬೆಳೆದಿದ್ದಾರೆ, ಆಟದಲ್ಲಿ ಗುರಿ ಮಾತ್ರ ಮುಖ್ಯ ಎಂದ ಮುಖ್ಯಮಂತ್ರಿ, ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ದೇಶಕ್ಕೆ 85 ಪದಕ ಬಂದಿದ್ದು, ಇದರಲ್ಲಿ ಬಹುತೇಕ ಮಂದಿ ಗ್ರಾಮೀಣ ಮಟ್ಟದಿಂದ ಬಂದವರು ಎಂದರು. “ಮುಂದಿನ 10 ವರ್ಷ ನಿಮ್ಮ ಬದುಕಿನಲ್ಲಿ ಅತಿ ಮುಖ್ಯವಾದುದು. ಸಮರ್ಪಣಾ ಮನೋಭಾವದಿಂದ ಮುನ್ನಡೆಯಿರಿ” ಎಂದು ಹೇಳಿದರು.

ಕ್ರೀಡಾಕೂಟದ ವೇಳಾಪಟ್ಟಿ ಕುರಿತು ದಿ ಬೆಂಗಳೂರು ಲೈವ್‌ನ ಹಿಂದಿನ ವರದಿ

  • ಬೆಂಗಳೂರಿನಲ್ಲಿ ನವೆಂಬರ್‌ 14ರಿಂದ ಐದನೇ ಮಿನಿ ಕರ್ನಾಟಕ ಕ್ರೀಡಾಕೂಟ

About the Author

The Bengaluru Live

Administrator

Visit Website View All Posts

Post navigation

Previous: ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ
Next: ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ

Related Stories

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು
  • ಬೆಂಗಳೂರು ನಗರ
  • ರಾಜಕೀಯ

ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ

The Bengaluru Live November 14, 2026 12:30 PM
ಅಶೋಕ ಸಿಂಹಗಳು ಮತ್ತು ಎನ್‌ಐಎ ಮುದ್ರೆಯೊಂದಿಗೆ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯ ಲಾಂಛನ
  • ಅಪರಾಧ
  • ಬೆಂಗಳೂರು ನಗರ

ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ

The Bengaluru Live November 14, 2026 10:34 AM
ಯಲಹಂಕ ಹೊಸ ಪಟ್ಟಣದಲ್ಲಿ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

The Bengaluru Live November 13, 2026 9:57 PM

Latest Post

ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
  • ಕರ್ನಾಟಕ
  • ಶಿಕ್ಷಣ

ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ

November 14, 2026 9:52 PM
ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

November 14, 2026 9:44 PM
ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು
  • ಬೆಂಗಳೂರು ನಗರ
  • ರಾಜಕೀಯ

ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ

November 14, 2026 12:30 PM
ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ ಅಶೋಕ ಸಿಂಹಗಳು ಮತ್ತು ಎನ್‌ಐಎ ಮುದ್ರೆಯೊಂದಿಗೆ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯ ಲಾಂಛನ
  • ಅಪರಾಧ
  • ಬೆಂಗಳೂರು ನಗರ

ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ

November 14, 2026 10:34 AM
ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ ಯಲಹಂಕ ಹೊಸ ಪಟ್ಟಣದಲ್ಲಿ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

November 13, 2026 9:57 PM
ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ ಇನ್ನರ್ ರಿಂಗ್ ರಸ್ತೆಯ ದೊಮ್ಮಲೂರು ಬಳಿ ಕಾರ್ಮಿಕರು ರಸ್ತೆ ದುರಸ್ತಿ ಮಾಡುತ್ತಿದ್ದು, ಬಿಳಿ ಅಂಗಿ ಧರಿಸಿದ ಅಧಿಕಾರಿಯೊಬ್ಬರು ನೋಡುತ್ತಿದ್ದಾರೆ; ಹತ್ತಿರದಲ್ಲಿ ಬಿಳಿ ವ್ಯಾನ್ ನಿಂತಿದೆ
  • ಬೆಂಗಳೂರು ನಗರ

ಬೆಂಗಳೂರು ಕೇಂದ್ರದ ವಾರ್ಡ್ ಒನ್ ಅಭಿಯಾನ: ಆರು ವಾರ್ಡ್‌ಗಳಲ್ಲಿ 9.65 ಕಿ.ಮೀ. ರಸ್ತೆ ಸ್ವಚ್ಛತೆ

November 13, 2026 9:12 PM

ನೀವು ತಪ್ಪಿಸಿಕೊಂಡಿರಬಹುದು

KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
  • ಕರ್ನಾಟಕ
  • ಶಿಕ್ಷಣ

ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ

The Bengaluru Live November 14, 2026 9:52 PM
ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದ ಮುಂಭಾಗ
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

The Bengaluru Live November 14, 2026 9:44 PM
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು
  • ಬೆಂಗಳೂರು ನಗರ
  • ರಾಜಕೀಯ

ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ

The Bengaluru Live November 14, 2026 12:30 PM
ಅಶೋಕ ಸಿಂಹಗಳು ಮತ್ತು ಎನ್‌ಐಎ ಮುದ್ರೆಯೊಂದಿಗೆ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯ ಲಾಂಛನ
  • ಅಪರಾಧ
  • ಬೆಂಗಳೂರು ನಗರ

ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ

The Bengaluru Live November 14, 2026 10:34 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ
  • ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್
  • ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ
  • ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ
©Copyright 2025 The Bengaluru Live All rights reserved. | MoreNews by AF themes.