Home ರಾಜಕೀಯ ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದ್ರು

ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದ್ರು

33
0
Advertisement
bengaluru

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಮೈಸೂರು:

ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಬಂದ ಒಳ್ಳೆಯ ಹೆಸರು ಇತ್ತು.ಆದರೆ ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು.ಕಾಂಗ್ರೆಸ್‌ನಿಂದಲೇ ಎಲ್ಲವೂ ಸರ್ವನಾಶವಾಯಿತು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುತ್ತೂರುಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ಮ ತ್ತು ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,ಎಮೋಷನಲ್ ಟ್ರ್ಯಾಪ್‌ಗೆ ನಾವು ಬಲಿಯಾದೆವು.ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು.ಸಿದ್ದರಾಮಯ್ಯ ಅವರ ಅಪಪ್ರಚಾರ ಮಾಡಿದರು.ಪ್ರೀ ಪ್ಲ್ಯಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸೋಲು ಗೆಲವು ಜೆಡಿಎಸ್ ಮೇಲೆ ನಿಂತಿದೆ ಎಂದು ಅವರಿಗೆ ಗೊತ್ತಾಗಿದೆ.ಸಿದ್ದರಾಮಯ್ಯ ಅವರಿಂದ ಕಳೆದ ಬಾರಿ ಬಿಜೆಪಿಗೆ 105 ಸ್ಥಾನ ಬಂತು.ಜೆಡಿಎಸ್ ಬಿಜೆಪಿ ಬಿ ಟೀಂ ಎಂದು ಅಪಪ್ರಚಾರದಿಂದ ಬಂದಿ ದೆ.ಸಿದ್ದ ರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೆ ನನಗೆ ಗೊತ್ತಿಲ್ಲವಾ ಇತ್ತೀಚೆಗೆ ಯಾರನ್ನು ಭೇಟಿ ಮಾಡಿದ್ದರು? ನಾನು ಯಾರನ್ನು ಗೌಪ್ಯವಾಗಿ ಭೇಟಿ ಮಾಡಲ್ಲ.ನಾನು ರಾತ್ರಿ ಅಥವಾ ಗುಟ್ಟಾಗಿ ಭೇಟಿಯಾಗುವುದಿಲ್ಲ ಎಲ್ಲರ ನ್ನೂ ಬಹಿರಂಗವಾಗಿಯೇ ಭೇಟಿ ಮಾಡುತ್ತೇನೆ ಎಂದು ಸಿದ್ಧರಾಮಯ್ಯಗೆ ಟಾಂಗ್ ನೀಡಿದರು.

bengaluru bengaluru

ಮೈತ್ರಿ ಮಾಡಿಕೊಂಡ ಮೊದಲ ದಿನವೇ ನನ್ನ‌ ಹೆಸರು ಕೆಡುತ್ತಿರುವುದು ಗೊತ್ತಾಯ್ತು.ಆದರೂ ಅವರ ಜೊತೆ ಕೈ ಜೊಡಿಸಿದೆ.24 ಪಕ್ಷಗಳು ಬಿಜೆಪಿ ವಿರುದ್ದ ಒಂದು ಸಂದೇಶ ನೀಡುವ ಉದ್ದೇಶ ಇತ್ತು.ಇದೆ ಕಾರಣಕ್ಕೆ ಅವರಿಗೆ ಗೌರವ ಕೊಟ್ಟೆ.ಅಧಿಕಾರದಲ್ಲೇ ಉಳಿಯಬೇಕಿದ್ದರೆ ನನಗೆನು ಕಷ್ಟ ಇರಲಿಲ್ಲ.ಇದೊಂ ದು ಟೆಂಪ್ರವರಿ ಡ್ಯಾಮೆಜ್ ಅಷ್ಟೇ. ಇದನ್ನ ಜನವರಿಯಿಂದ ಸರಿಪಡಿಸಿಕೊಳ್ಳುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿಗೆ 105 ಸ್ಥಾನ ಬರಲು ಸಿದ್ದರಾಮಯ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾ ರಸ್ವಾಮಿ ಹೇಳಿದ್ದಾರೆ.ನಮ್ಮ ಪಕ್ಷವನ್ನು ಬಿ ಟೀಂ ಎಂದು ಪದೇ ಪದೇ ಹೇಳಿ ಬಿಜೆಪಿಗೆ ಹೆಚ್ಚು ಸ್ಥಾನ ಬರುವಂತೆ ಮಾಡಿದರು. ಈಗಲೂ ವಿಪಕ್ಷವಾಗಿ ಕಾಂಗ್ರೆಸ್ ಗಟ್ಟಿಯಾದ ವಿಚಾರ ಹಿಡಿದುಕೊಂಡು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತಿಲ್ಲ ಎಂದು ದೂರಿದರು.


bengaluru

LEAVE A REPLY

Please enter your comment!
Please enter your name here