Home ಮಂಗಳೂರು ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ 6 ಮಂದಿ ಮೀನುಗಾರರು ನಾಪತ್ತೆ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ 6 ಮಂದಿ ಮೀನುಗಾರರು ನಾಪತ್ತೆ

87
0

ಮಂಗಳೂರು:

ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟ್‌ ವೊಂದು ಸಮುದ್ರ ಮಧ್ಯೆ ಮುಳುಗಡೆಯಾಗಿದ್ದು, ಆರು ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಉಳ್ಳಾಲದ ಪಶ್ಚಿಮ ಭಾಗದ ಕೆಲವು ನಾಟಿಕಲ್‌ ಮೈಲಿ ದೂರದಲ್ಲಿ ನಡೆದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ “ಶ್ರೀರಕ್ಷಾ” ಹೆಸರಿನ ಬೋಟು ಸೋಮವಾರ ಬೆಳಗ್ಗಿನ ಜಾವ 25 ಮೀನುಗಾರರೊಂದಿಗೆ ಸಮುದ್ರಕ್ಕೆ ತೆರಳಿದೆ. ಕಡಲಲ್ಲಿ‌ ಭಾರೀ ಪ್ರಮಾಣದ ಮೀನು ಸಿಕ್ಕಿದ್ದು, ಸಂಜೆ 6:30ರ ಸುಮಾರಿಗೆ ಬಲೆಯನ್ನು ಮೇಲೆ‌‌ ಎಳೆಯುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸ್ಟೀಲ್‌ ನಿಂದ ತಯಾರಿಸಲಾಗಿರುವ ಪರ್ಸಿನ್ ಬೋಟ್ ಸಮುದ್ರದಲ್ಲಿ ಮಗುಚಿದ್ದು, 25 ಮೀನುಗಾರರ ಪೈಕಿ 19 ಮಂದಿ ಈಜಿ ದಡ ಸೇರಿದ್ದಾರೆ. ಉಳಿದ ಆರು ಮೀನುಗಾರರು ಬಲೆಯಲ್ಲೇ ಸಿಕ್ಕಿಕೊಂಡಿರುವ ಸಾಧ್ಯತೆ ಇದೆ ಎಂದು ಮೀನುಗಾರ ಮುಖಂಡ ನಿತಿನ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಾಪತ್ತೆಯಾದ ಮೀನುಗಾರರ ರಕ್ಷಣೆಗೆ ಮಂಗಳವಾರ ಹಲವು ಬೋಟುಗಳು ಅವಘಡ ಸಂಭವಿಸಿದ ಸ್ಥಳಕ್ಕೆ‌ ತಲುಪಿವೆ. ಮೀನುಗಾರರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here