Home ರಾಜಕೀಯ 3320 ಕೋಟಿ ರೂ ಪೂರಕ ಅಂದಾಜುಗಳ ಎರಡನೆ ಕಂತು ವಿಧಾನ ಸಭೆಯಲ್ಲಿ ಮಂಡನೆ

3320 ಕೋಟಿ ರೂ ಪೂರಕ ಅಂದಾಜುಗಳ ಎರಡನೆ ಕಂತು ವಿಧಾನ ಸಭೆಯಲ್ಲಿ ಮಂಡನೆ

52
0

ಬೆಂಗಳೂರು:

ಕೋವಿಡ್ ನಿಯಂತ್ರಣ ಕಾರ್ಯಕ್ಕಾಗಿ ೯೦೦ಕೋಟಿ ರು.ತಿರುಪತಿಯಲ್ಲಿ ರಾಜ್ಯದ ವಸತಿ ಗೃಹ,ಮೂಲಸೌಕರ್ಯಕ್ಕಾಗಿ ೧೦೦ ಕೋಟಿ ರು.,ಪ್ರವಾಹ ನಿರ್ವಹ ಣೆಗಾಗಿ ೭೪.೧೯ಕೋಟಿ ರು. ಸೇರಿದಂತೆ ಒಟ್ಟು ೩೩೨೦.೪೦ ಕೋಟಿ ರು. ಮೊತ್ತದ ಪೂರಕ ಅಂದಾಜು ಅನ್ನು ಸರ್ಕಾರವು ಮಂಡನೆ ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರವಾಗಿ ಮಂಗಳವಾರ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪೂರಕ ಅಂದಾಜು ಮಂಡನೆಯ ಮಾಡಿದ್ದಾರೆ.೩೩೨೦.೪೦ ಕೋಟಿ ರು.ಪೈಕಿ ೨೯೧.೫೭ಕೋಟಿ ರು.ಪ್ರಭೃತ ವೆಚ್ಚ ಮತ್ತು ೩೦೨೮.೮೩ಕೋಟಿ ರು ಪುರಸ್ಕೃತ ವೆಚ್ಚ ಸೇರಿದೆ. ೩೪೬.೨೨ಕೋಟಿ ರು.ಕೇಂದ್ರ ಸಹಾಯಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಹೊರಹೋ ಗುವ ನಿವ್ವಳ ನಗದು ಮೊತ್ತ ೨೮೩೮.೦೬ ಕೋಟಿ ರು.ಆಗಿದೆ.

ಕೋವಿಡ್‌ನಿಯಂತ್ರಣಕ್ಕಾಗಿ ಆಹಾರ ಇಲಾಖೆಯು ೭೧೧.೬೨ಕೋಟಿ ರು.ವೆಚ್ಚ ಮಾಡಿದರೆ,ಆರೋಗ್ಯ ಇಲಾಖೆಯು ೨೦೫.೪೦ಕೋಟಿ ರು.ವೆಚ್ಚ ಮಾಡಿದೆ.ಒಟ್ಟಾರೆ ಕೋವಿಡ್‌ಗಾಗಿ ಸುಮಾರು ೯೦೦ಕೋಟಿ ರು.ನಷ್ಟು ಖರ್ಚು ಮಾಡಲಾಗಿದೆ.ಕೇಂದ್ರ ಸರ್ಕಾರವು ಘೋಷಿಸಿರುವ ಪಿಎಂಜಿಕೆಎವೈ ಯೋಜನೆಯನ್ನು ಅನುಷ್ಠಾನಗೊಳಿಸಲು ೭೧೧.೬೨ಕೋಟಿ ರು.ಆಹಾರ ಇಲಾಖೆ ವೆಚ್ಚ ಮಾಡಿದೆ.ಆರೋಗ್ಯ ಇಲಾಖೆಯು ಕೋವಿಡ್ ನಿಯಂತ್ರಣಕ್ಕಾಗಿ ತುರ್ತು ಔಷಧಿ,ಆರ್‌ಟಿಪಿಸಿಆರ್ ಕಿಟ್ಸ್,ಎಕ್ಸ್ ಟ್ರಾಕ್ಸನ್ ಕಿಟ್ ಖರೀದಿಗೆ ಸಂಬಂಧಿಸಿದಂತೆ ೧೭೦.೭೨ಕೋಟಿ ರು.ಮತ್ತು ವೆಂಟಿಲೇಟರ್, ಪಲ್ಸ್ ಆಕ್ಸಿಮೀಟರ್ ಖರೀದಿಗೆ ೩೪.೬೮ ಕೋಟಿ ರು. ವೆಚ್ಚ ಮಾಡಲಾಗಿದೆ.

ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಉಂಟಾದ ಪ್ರವಾಹದಿಂದ ಹಾನಿಗೀಡಾದ ಮನೆಗಳ ದುರಸ್ತಿ,ಪುನರ್ ನಿರ್ಮಾಣಕ್ಕಾಗಿ ಪರಿಹಾರ ನೀಡಲು ಕಂಚಾಯ ಇಲಾಖೆಯು ೭೪.೧೯ ಕೋಟಿ ರು.ನಷ್ಟು ಖರ್ಚು ಮಾಡಿದೆ.ಆಂಧ್ರಪ್ರದೇಶದ ತಿರುಮಲದಲ್ಲಿನ ರಾಜ್ಯದ ಛತ್ರಕ್ಕೆ ಸೇರಿದ ಜಾಗದಲ್ಲಿ ವಸತಿ ಗೃಹ ಮತ್ತು ಇತರೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ತಿರುಮಲ ತಿರುಪತಿ ದೇವಾಲಯ ಪ್ರಾಧಿಕಾರಕ್ಕೆ ೧೦೦ ಕೋಟಿ ರು.ಬಿಡುಗಡೆ ಮಾಡಲಾಗಿದೆ.ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ವೆಚ್ಚಕ್ಕಾಗಿ ೪ಕೋಟಿ ರು.ಒದಗಿಸಲಾಗಿದೆ. ಅಲ್ಲದೇ, ೩.೦೫ ಕೋಟಿ ರು.ಸಾದಿಲ್ವಾರು ನಿಧಿಯಿಂದ ಬಿಡುಗಡೆ ಮಾಡಲಾಗಿದೆ.ವಿಧಾನಪರಿಷತ್ ಚುನಾವಣೆಗಾಗಿ ೨.೫೦ ಕೋಟಿ ರು.ನೀಡಲಾಗಿದೆ.

ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಮರುಪಾವತಿಸಬೇಕಾಗಿರುವ ಸಾಲವನ್ನು ಮರುಪಾವತಿ ಮಾಡಲು ರಾಜ್ಯ ಉಗ್ರಾಣ ನಿಗಮಕ್ಕೆ ಸಾಲವಾಗಿ ಸಾದಿಲ್ವಾರು ನಿಧಿಯಿಂದ ೩೩.೦೬ ಕೋಟಿ ರು.ನೀಡಲಾಗಿದೆ.ನಿಗಮ/ಮಂಡಳಿಗಳಿಂದ ನಿಯೋಜನೆ ಮೇಲೆ ವಿಧಾನ ಸಭೆ/ವಿಧಾನಪರಿಷತ್‌ನ ಸದಸ್ಯರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವೇತನ/ಭತ್ಯೆ ಪಾವತಿಗಾಗಿ ೬೪.೫೬ ಲಕ್ಷ ಒದಗಿಸಲಾಗಿದೆ.

LEAVE A REPLY

Please enter your comment!
Please enter your name here