Three accused targeting PGs and stealing laptops are arrested |ಪಿಜಿಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಮೂವರ ಆರೋಪಿಗಳು ಅರೆಸ್ಟ್
ಬೆಂಗಳೂರು:
ಪಿಜಿ (Paying Guest) ಗಳನ್ನೇ ಟಾರ್ಗೆಟ್ ಮಾಡಿ ಲ್ಯಾಪ್ ಟಾಪ್ ಕದಿಯುತ್ತಿದ್ದ ಗ್ಯಾಂಗ್ ಪತ್ತೆಯಾಗಿದ್ದು, ಯಶವಂತಪುರ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಯುವರಾಜು, ಪ್ರಭು, ಸೆಲ್ವರಾಜು ಬಂಧಿತ ಆರೋಪಿಗಳು. ಇವರಿಂದ ಬರೊಬ್ಬರಿ 16 ಲಕ್ಷ ರೂಪಾಯಿ ಮೌಲ್ಯದ 50 ಲ್ಯಾಪ್ಟಾಟ್ ಹಾಗೂ 7 ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ಈ ಆಸಾಮಿಗಳು ಲ್ಯಾಪ್ಟಾಪ್ಗಳನ್ನು ಕದ್ದು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ.

ಆರೋಪಿಗಳಾದ ಪ್ರಭು ಮತ್ತು ಯುವರಾಜ್ ಕೆಆರ್ ಪುರಂನಲ್ಲಿ ರೂಮ್ ಮಾಡಿಕೊಂಡಿದ್ದರು. ಸ್ಟೂಡೆಂಟ್ಸ್ ರೀತಿ ಡ್ರೆಸ್ ಮಾಡಿಕೊಂಡು ಪಿಜಿಗಳ ಬಳಿ ಹೋಗುತ್ತಿದ್ದ ಆರೋಪಿಗಳು. ಸಂಪೂರ್ಣ ಪಿಜಿಯನ್ನು ಗಮನಿಸಿಕೊಂಡು ಯಾವ್ಯಾವ ರೂಮ್ ನಲ್ಲಿ ಲ್ಯಾಪ್ಟಾಪ್ ಇವೆ ಎನ್ನುವುದನ್ನು ನೋಡಿಕೊಂಡು, ಬಳಿಕ ರೂಮ್ಗಳಲ್ಲಿ ಯಾರು ಇಲ್ಲದ ವೇಳೆ ಬೆಳಗ್ಗೆ 9 ರಿಂದ 10 ಗಂಟೆ ಸಮಯದಲ್ಲಿ ಲ್ಯಾಪ್ಟಾಪ್ ಕಳ್ಳತನ ಮಾಡಿ, ಕದ್ದ ಕೆಲವೇ ಗಂಟೆಗಳಲ್ಲಿ ಬಸ್ನಲ್ಲಿ ಪಾರ್ಸಲ್ ಮಾಡುತ್ತಿದ್ದರು.
ಯಶವಂತಪುರ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು ಪ್ರಕರಣ ದಾಖಲಿಸಿಕೊಂಡು ಮೂವರನ್ನ ಬಂಧಿಸಿರೋ ಯಶವಂತಪುರ ಪೊಲೀಸರು ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
