ತಿಕೋಟಾದಲ್ಲಿ ಮಕ್ಕಳ ವಿಜ್ಞಾನ ಜಾತ್ರೆಗೆ ಸಿದ್ಧತೆ. ಫೋಟೋ: ಎಂ.ಬಿ. ಪಾಟೀಲ ಎಕ್ಸ್
ತಿಕೋಟಾ: ಮಕ್ಕಳ ದಿನಾಚರಣೆ ಅಂಗವಾಗಿ ನವೆಂಬರ್ 14ರಂದು ತಿಕೋಟಾದ ಎ.ಬಿ. ಜತ್ತಿ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಜಾತ್ರೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭಾಗವಹಿಸಲಿದ್ದಾರೆ ಎಂದು ಪಾಟೀಲರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
A grand science fair to celebrate Children’s Day! Preparations are in full swing for the children’s science fair to be held at A.B. Jatti School in Tikota on November 14.
— M B Patil (@MBPatil) November 11, 2026
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ, ಹೊಸ ಚಿಂತನೆ, ಸೃಜನಶೀಲತೆ ಮತ್ತು ಜಿಜ್ಞಾಸೆಯ ಮನೋಭಾವ ಬೆಳೆಸುವ ಈ ವಿಜ್ಞಾನ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ಅವರು ಕೋರಿದ್ದಾರೆ. “ಇಂದಿನ ಮಕ್ಕಳೇ ನಾಳಿನ ವಿಜ್ಞಾನಿಗಳು” ಎಂದು ಅವರು ಹೇಳಿದ್ದಾರೆ.
