Home ಸಿನಿಮಾ Dwarkeesh| ಪೊಲೀಸ್‌ ಗೌರವದೊಂದಿಗೆ ಹಿರಿಯ ನಟ ದ್ವಾರಕೀಶ್ ಅಂತ್ಯಸಂಸ್ಕಾರ

Dwarkeesh| ಪೊಲೀಸ್‌ ಗೌರವದೊಂದಿಗೆ ಹಿರಿಯ ನಟ ದ್ವಾರಕೀಶ್ ಅಂತ್ಯಸಂಸ್ಕಾರ

26
0

ಬೆಂಗಳೂರು : ಹೃದಯಾಘಾತದಿಂದ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್‌ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿ.ಆರ್.ಮಿಲ್‌ ರುದ್ರಭೂಮಿಯಲ್ಲಿ ಪೊಲೀಸ್‌ ಗೌರವದೊಂದಿಗೆ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ನೆರವೇರಿದೆ.

ಅಂತ್ಯಕ್ರಿಯೆಗೂ ಮುನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ನಟರಾದ ಯಶ್‌, ರವಿಚಂದ್ರನ್‌, ಧ್ರುವ ಸರ್ಜಾ, ನಟಿ ಶ್ರುತಿ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದಿದ್ದರು.

LEAVE A REPLY

Please enter your comment!
Please enter your name here