Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ
  • ಕರ್ನಾಟಕ
  • ರಾಜಕೀಯ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ

The Bengaluru Live November 23, 2026 2:29 PM 1 minute read
ಶಿವಮೊಗ್ಗದಲ್ಲಿ ಬಿಜೆಪಿ ಸಭೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ.

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನ ಅನುಸರಿಸುತ್ತಾ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಅವರು ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ನಂತರದಲ್ಲಿ ಕೇವಲ ಘೋಷಣೆಗಳಿಗೆ ಸೀಮಿತ ಆಗಿದ್ದಾರೆ. ಇವರ ನಡೆಗೂ ನುಡಿಗೂ ಅಜಗಜಾಂತರ ವ್ಯತ್ಯಾಸ ಇದೆ. ಹಿರಿಯೂರಿನಲ್ಲಿ ಮುಖ್ಯಮಂತ್ರಿಗಳು 2,500 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಕ್ಕೆ ಘೋಷಣೆ ಮಾಡಿದ್ದಾರೆ. ಎಲ್ಲಿದೆ ಸ್ವಾಮಿ ಎರಡೂವರೆ ಸಾವಿರ ಕೋಟಿ ರೂಪಾಯಿ? ಎಂದು ಪ್ರಶ್ನಿಸಿದರು.

  • ಸಕಾಲದಲ್ಲಿ ಸಂಬಳ ಕೊಡಲು ಆಗುತ್ತಿಲ್ಲ
  • ಸೋದರನಾದ ಸಿಎಂ ಹೇಳಿಕೆ ಸರಿಯೇ?
  • ಬರಪರಿಹಾರದ ವಿಷಯದಲ್ಲಿ ಸ್ಪಷ್ಟತೆ ಇಲ್ಲ
  • ಆನೆ ಶಿಬಿರ ನಿರ್ಮಿಸಲು ಆಗ್ರಹ

ಸ್ವತಃ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳು ಇವತ್ತು ಮುಖ್ಯಮಂತ್ರಿಗಳನ್ನು ಇದನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಇವತ್ತು ಸಕಾಲದಲ್ಲಿ ಸಂಬಳ ಕೊಡೋದಕ್ಕೆ ಆಗುತ್ತಿಲ್ಲ ಎಂದು ಗಮನ ಸೆಳೆದರು.

ಕೊರೆಯುವ ಚಳಿಯಲ್ಲೂ ಪ್ರತಿಭಟನೆ..

ಆಶಾ ಕಾರ್ಯಕರ್ತೆಯರು ಕೊರೆಯುವ ಚಳಿಯಲ್ಲೂ ಬೆಂಗಳೂರು ಮಹಾನಗರದಲ್ಲಿ ಇದ್ದುಕೊಂಡು ಕಳೆದ ಏಳು ದಿನಗಳಿಂದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಮನೆ, ಮಠ, ಕುಟುಂಬ ಎಲ್ಲವನ್ನು ಬಿಟ್ಟು ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ‘ನಾನು ನಿನ್ನ, ನಿಮ್ಮೆಲ್ಲರ ಅಣ್ಣ ನಾನು, ಸಹೋದರ’ ಹೇಳುತ್ತಾರೆ. ಆದರೆ, ಸಹೋದರನಾಗಿ, ಅಣ್ಣನಾಗಿ ಈ ರೀತಿ ನಡೆದುಕೊಳ್ಳುವುದು ನಿಮಗೆ ಶೋಭೆ ತರುತ್ತದಾ ಮುಖ್ಯಮಂತ್ರಿಗಳೇ? ಎಂದು ಪ್ರಶ್ನೆ ಹಾಕಿದರು.

ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಸಿಲ್ಲ..

ಆಶಾ ಕಾರ್ಯಕರ್ತರ ಬೇಡಿಕೆ ಈಡೇರಿಸುವ ಕುರಿತು ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲೂ ಹೇಳಿದೆ. ಗೌರವಧನ ಹೆಚ್ಚಿಸುತ್ತೇವೆ ಅಂತ ಹೇಳಿದ್ದರು. ಆದರೆ ಮೊನ್ನೆ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದಾಗ ಆಶಾ ಕಾರ್ಯಕರ್ತರಿಗೆ ‘ತಾಯಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತಾವೆಲ್ಲ ಯೋಚನೆ ಮಾಡಬೇಕು’ ಎಂದು ಪಾಠ ಹೇಳಿ ಕಳಿಸಿದ್ದಾರೆ ಮುಖ್ಯಮಂತ್ರಿಗಳು ಎಂದು ಆಕ್ಷೇಪಿಸಿದರು.

ತೆರಿಗೆದಾರರ ಹಣ ಪೋಲು..

ಆಶಾ ಕಾರ್ಯಕರ್ತರಿಗೆ ಅವರ ಗೌರವಧನ ಹೆಚ್ಚಿಸುವುದಕ್ಕೆ ನಿಮಗೆ ಆಗೋದಿಲ್ಲ ಅಂತ ಹೇಳಿದ್ರೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ‘ಭಾರತ ಜೋಡೋ’ ಮಾಡೋಕೆ ಏನು ಹೊರಟಿದ್ದೀರಿ? ಭಾರತ ಜೋಡೋ ಸಂಘಗಳನ್ನು ರಚಿಸಿ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರಿಗೆ ಸಂಬಳ ಕೊಡುವಂತಹ ಕೆಲಸ ಇವತ್ತು ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾಗಿದೆ. ಇದೇನು ಗಂಜಿ ಕೇಂದ್ರನಾ ಹಾಗಾದ್ರೆ? ರಾಜ್ಯದ ತೆರಿಗೆದಾರರ ಹಣವನ್ನು ಈ ರೀತಿ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ಶಾಸಕರನ್ನು, ಕಾರ್ಯಕರ್ತರನ್ನು ಸಾಕೋದಕ್ಕೆ ಇವತ್ತು ತೆರಿಗೆದಾರರ ದುಡ್ಡನ್ನ ಪೋಲು ಮಾಡೋದಕ್ಕೆ ಹೊರಟಿದ್ದೀರಲ್ಲ ಎಂದು ಟೀಕಿಸಿದರು.

ಹಣಕಾಸಿನ ದುರುಪಯೋಗ

ಇಂತಹ ಬರಗಾಲದ ಸಂದರ್ಭದಲ್ಲೂ ಕೂಡ ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದನೆ ಮಾಡಬೇಕು ಅಂತ ಹೇಳಿ ಅನ್ನಿಸೋದಿಲ್ಲ. ಆದರೆ ಕಾಂಗ್ರೆಸ್ ಶಾಸಕರ ಸಂಕಷ್ಟಕ್ಕೆ ಸ್ಪಂದನೆ ಮಾಡುವಂತಹ ಬುದ್ಧಿವಂತಿಕೆ ಪ್ರದರ್ಶನ ಮಾಡ್ತಾರೆ. ಇಂತಹ ಬರಗಾಲದ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷರು, ನಿಗಮಗಳಿಗೆ ಚೇರ್ಮನ್ ಮಾಡುವಂತಹ ಅವಶ್ಯಕತೆ, ಅಗತ್ಯ ಯಾಕಿತ್ತು ಡಿ.ಕೆ. ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದರು.

ಪರಿಹಾರಧನ ವಿಚಾರದಲ್ಲಿ ಗೊಂದಲ..

ರೈತರಿಗೆ ಪರಿಹಾರ ಕೊಡುವುದಾಗಿ ಹೇಳಿ 5,000 ರೂಪಾಯಿ ಘೋಷಣೆ ಮಾಡಿ ಕೇವಲ ಘೋಷಣೆ ಘೋಷಣೆಯಾಗೇ ಉಳಿದಿದೆ. ಪರಮೇಶ್ವರ್ ಅವರು ಹೆಕ್ಟೇರಿಗೆ 5,000 ರೂಪಾಯಿ ಅಂತ ಹೇಳುತ್ತಾರೆ. ಕಂದಾಯ ಸಚಿವರು, ಮುಖ್ಯಮಂತ್ರಿಗಳು ಒಂದು ಎಕರೆಗೆ 5,000 ರೂಪಾಯಿ ಅಂತ ಹೇಳ್ತಾರೆ. ಇದರ ಬಗ್ಗೆನೇ ಸ್ಪಷ್ಟತೆ ಇಲ್ಲ ಇವತ್ತು ಸರ್ಕಾರದ ಕಡೆಯಿಂದ. ಇವರ ಗೊಂದಲಕ್ಕೆ ಇವತ್ತು ಅಧಿಕಾರಿಗಳು ಕೂಡ ಯಾವುದೇ ತೀರ್ಮಾನ ಮಾಡದೇ ಗೊಂದಲದಲ್ಲಿ ಇದ್ದಾರೆ ಎಂದು ಆರೋಪಿಸಿದರು.

ಹದಗೆಟ್ಟ ಆರ್ಥಿಕ ಪರಿಸ್ಥಿತಿ..

ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಇದರ ನಡುವೆ ತೆರಿಗೆದಾರರ ದುಡ್ಡನ್ನು ಪೋಲು ಮಾಡಿ, ದುರುಪಯೋಗ ಮಾಡಿಕೊಂಡು ರೈತರು ಇವತ್ತು ಬರಗಾಲದ ಸಂದರ್ಭದಲ್ಲಿ ರೈತರ ಸಂಕಷ್ಟಕ್ಕೆ ನೆರವಿಗೂ ಕೂಡ ಬರುತ್ತಿಲ್ಲ. ಎಸ್‍ಸಿಪಿ-ಟಿಎಸ್‍ಪಿ ಹಣವನ್ನು ಕೂಡ ದುರುಪಯೋಗ ಮಾಡಿಕೊಂಡಿದ್ದಾರೆ. ಇವೆಲ್ಲ ವಿಚಾರಗಳನ್ನು ಎರಡನೇ ತಾರೀಕಿನಿಂದ ಪ್ರಾರಂಭವಾಗುವಂತಹ ಬೆಳಗಾವಿ ಅಧಿವೇಶನದಲ್ಲಿ ಎಲ್ಲಾ ಸಂಗತಿಗಳನ್ನು ಸಮರ್ಥವಾಗಿ ಚರ್ಚೆ ಮಾಡಿ ಸದನದಲ್ಲಿ ಈ ಸರ್ಕಾರಕ್ಕೆ ಬಿಸಿ ಮುಟ್ಟಿಸುವಂತಹ ಕೆಲಸ ಭಾರತೀಯ ಜನತಾ ಪಾರ್ಟಿ ಮಾಡಲಿದೆ ಎಂದು ಹೇಳಿದರು.

ಹಿರಿಯೂರು- ವರಿಷ್ಠರಿಗೆ ಮಾಹಿತಿ..

ಹಿರಿಯೂರು ಉಪಚುನಾವಣೆ ಟಿಕೆಟ್ ವಿಚಾರದ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಿಜೆಪಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ, ರಾಜ್ಯ ನಾಯಕರ ಅಭಿಪ್ರಾಯವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ನಮ್ಮ ಪಕ್ಷದ ವರಿಷ್ಠರ ಗಮನಕ್ಕೆ ತರುವಂತಹ ಕೆಲಸ ನಾನು ಮಾಡಿದ್ದೇನೆ. ಕುಮಾರಸ್ವಾಮಿ ಅವರು ಕೂಡ ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಜೆಡಿಎಸ್‍ಗೆ ಕೊಡಬೇಕು ಅನ್ನುವ ವಿನಂತಿ ಮಾಡಿದ್ದಾರೆ. ಇದರಲ್ಲಿ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧರಾಗಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡೋದ್ರಲ್ಲಿ ನಾವು ಯಶಸ್ವಿಯಾಗಿದ್ದೇವೆ, ಈ ಹಿರಿಯೂರಿನ ಉಪ ಚುನಾವಣೆಯಲ್ಲಿ ಕೂಡ ನಾವು ಯಶಸ್ವಿಯಾಗುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಕಾಡಾನೆ ಹಾವಳಿ ಕುರಿತು..

ಮೂಡಿಗೆರೆಯ ಕಾಂಗ್ರೆಸ್ಸಿನ ಶಾಸಕಿ ನಯನಾ ಮೋಟಮ್ಮ, ಚಿಕ್ಕಮಗಳೂರಿನ ಕಾಂಗ್ರೆಸ್ಸಿನ ಮೂರು ಶಾಸಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕಾಡಾನೆಗಳ ಹಾವಳಿಯನ್ನು ಸರಿಯಾದ ರೀತಿನಲ್ಲಿ ಅರಣ್ಯ ಅಧಿಕಾರಿಗಳು ನಿಭಾಯಿಸಲು ಆಗುತ್ತಿಲ್ಲ. ಅರಣ್ಯ ಅಧಿಕಾರಿಗಳು ಆ ಕಾಡಾನೆಗಳನ್ನು ಅಕ್ಕಪಕ್ಕದ ಕ್ಷೇತ್ರಗಳಿಗೆ ಓಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕರ ಬೇಡಿಕೆ ಸರಿಯಾಗೇ ಇದೆ. ಇವತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಾಡಾನೆಗಳಿಗೆ ಲಭ್ಯ ಜಮೀನಿನಲ್ಲಿ ಆನೆ ಶಿಬಿರ ರಚಿಸಬೇಕು. ಅಲ್ಲಿ ಗಿಡಗಳನ್ನು ಬೆಳೆಸಿ ಆನೆಗಳನ್ನ ಎಲಿಫೆಂಟ್ ಕ್ಯಾಂಪ್‍ಗೆ ಕಳಿಸುವ ಕೆಲಸ ಮಾಡಬೇಕು. ಈಗಿನ ಪದ್ಧತಿಯಿಂದ ಕಾಡಂಚಿನ ರೈತರು, ಕೃಷಿಕರು ಬಹಳ ತೊಂದರೆ ಎದುರಿಸುತ್ತಿದ್ದಾರೆ. ಕಾಡಾನೆಗಳ ಹಾವಳಿಯಿಂದ ಅವರ ಹೊಲಗದ್ದೆಗಳು ಇವತ್ತು ನಾಶ ಆಗುತ್ತಿವೆ ಎಂದು ಗಮನ ಸೆಳೆದರು. ಆನೆ ಕ್ಯಾಂಪ್ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗ್ರಹಿಸಿದರು.

ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಅರುಣ್ ಡಿ.ಎಸ್, ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್ ದತ್ತಾತ್ರಿ ಹಾಗೂ ಇತರರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

Related Stories

ಭಾರತ ಮತ್ತು ಜಪಾನ್ ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳು
  • ಕರ್ನಾಟಕ

ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್

The Bengaluru Live November 23, 2026 11:25 AM
ಗುರುಗಾಂವ್ ಕನ್ನಡ ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪದಾಧಿಕಾರಿಗಳಿಂದ ಸ್ಮರಣಿಕೆ ಸ್ವೀಕರಿಸುತ್ತಿರುವ ರಾಜ್ಯಪಾಲರಾದ ಡಾ. ಸುಧಾ ಯಾದವ್
  • ಕರ್ನಾಟಕ

ಗುರುಗಾಂವ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯಪಾಲೆ ಸುಧಾ ಯಾದವ್ ಭಾಗಿ

The Bengaluru Live November 23, 2026 10:09 AM
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೂಗುಚ್ಛ ಹಿಡಿದ ಮಹಿಳೆ ಮತ್ತು ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪುರುಷರು
  • ಕರ್ನಾಟಕ

ಜಪಾನ್‌ನಲ್ಲಿ ಸಿಎಂ ಶಿವಕುಮಾರ್‌ಗೆ ಭಾರತೀಯ ರಾಯಭಾರಿ, ಟೋಕಿಯೊ ಕನ್ನಡ ಸಂಘದ ಸದಸ್ಯರಿಂದ ಸ್ವಾಗತ

The Bengaluru Live November 22, 2026 7:00 PM

Latest Post

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ ಶಿವಮೊಗ್ಗದಲ್ಲಿ ಬಿಜೆಪಿ ಸಭೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
  • ಕರ್ನಾಟಕ
  • ರಾಜಕೀಯ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ

November 23, 2026 2:29 PM
ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

November 23, 2026 1:26 PM
ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ ಸಚಿವರ ಗೃಹ ಕಚೇರಿಯ ಹೊರಗೆ ಬಿಸಿಯೂಟ ನೌಕರರ ಯೂನಿಯನ್ ನಿಯೋಗದ ಸದಸ್ಯರೊಂದಿಗೆ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಶಿಕ್ಷಣ

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

November 23, 2026 1:21 PM
ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ ನೇರಳೆ ಬಣ್ಣದ ಅಂಗಿ ಧರಿಸಿ ಕೈಕಟ್ಟಿ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

November 23, 2026 12:10 PM
ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಭಾರತ ಮತ್ತು ಜಪಾನ್ ಧ್ವಜಗಳ ಮುಂದೆ ಸಾಲಾಗಿ ನಿಂತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳು
  • ಕರ್ನಾಟಕ

ಟೋಕಿಯೊದಿಂದ ನಗೋಯಾದ ಟೊಯೋಟಾ ಘಟಕಕ್ಕೆ ಬುಲೆಟ್ ಟ್ರೈನ್‌ನಲ್ಲಿ ಪ್ರಯಾಣಿಸಿದ ಸಿಎಂ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್

November 23, 2026 11:25 AM
ಗುರುಗಾಂವ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯಪಾಲೆ ಸುಧಾ ಯಾದವ್ ಭಾಗಿ ಗುರುಗಾಂವ್ ಕನ್ನಡ ಸಂಘದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಬಾವುಟದ ಬಣ್ಣದ ಶಾಲು ಧರಿಸಿದ ಪದಾಧಿಕಾರಿಗಳಿಂದ ಸ್ಮರಣಿಕೆ ಸ್ವೀಕರಿಸುತ್ತಿರುವ ರಾಜ್ಯಪಾಲರಾದ ಡಾ. ಸುಧಾ ಯಾದವ್
  • ಕರ್ನಾಟಕ

ಗುರುಗಾಂವ್ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ರಾಜ್ಯಪಾಲೆ ಸುಧಾ ಯಾದವ್ ಭಾಗಿ

November 23, 2026 10:09 AM

ನೀವು ತಪ್ಪಿಸಿಕೊಂಡಿರಬಹುದು

ಶಿವಮೊಗ್ಗದಲ್ಲಿ ಬಿಜೆಪಿ ಸಭೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
  • ಕರ್ನಾಟಕ
  • ರಾಜಕೀಯ

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ

The Bengaluru Live November 23, 2026 2:29 PM
ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

The Bengaluru Live November 23, 2026 1:26 PM
ಸಚಿವರ ಗೃಹ ಕಚೇರಿಯ ಹೊರಗೆ ಬಿಸಿಯೂಟ ನೌಕರರ ಯೂನಿಯನ್ ನಿಯೋಗದ ಸದಸ್ಯರೊಂದಿಗೆ ಮಾತನಾಡುತ್ತಿರುವ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ
  • ಶಿಕ್ಷಣ

ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ

The Bengaluru Live November 23, 2026 1:21 PM
ನೇರಳೆ ಬಣ್ಣದ ಅಂಗಿ ಧರಿಸಿ ಕೈಕಟ್ಟಿ ಮೇಜಿನ ಬಳಿ ಕುಳಿತು ಮಾತನಾಡುತ್ತಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್
  • ಬೆಂಗಳೂರು ನಗರ

ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ

The Bengaluru Live November 23, 2026 12:10 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಸದನದಲ್ಲಿ ಬಿಸಿ ಮುಟ್ಟಿಸುತ್ತೇವೆ: ಬಿ.ವೈ.ವಿಜಯೇಂದ್ರ
  • ನವೆಂಬರ್ 25ರಂದು ಪದ್ಮನಾಭನಗರ, ಬನಶಂಕರಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ
  • ಕ್ಲಸ್ಟರ್ ಕಿಚನ್ ಸ್ಥಾಪಿಸುವ ಪ್ರಶ್ನೆಯೇ ಇಲ್ಲ; ಬಿಸಿಯೂಟ ನೌಕರರು ಆತಂಕಪಡಬೇಕಿಲ್ಲ: ಸಚಿವ ಮಧು ಬಂಗಾರಪ್ಪ
  • ಡಿಸೆಂಬರ್ 4ರಿಂದ 13ರವರೆಗೆ ಬೆಂಗಳೂರು ಜಾತ್ರೆ: ದಕ್ಷಿಣ ಪಾಲಿಕೆ ವ್ಯಾಪ್ತಿಯ 15–20 ಉದ್ಯಾನ, ಕೆರೆ ಆವರಣಗಳಲ್ಲಿ ವಿಕೇಂದ್ರೀಕರಣ
©Copyright 2025 The Bengaluru Live All rights reserved. | MoreNews by AF themes.