Home ಬೆಂಗಳೂರು ನಗರ ಕರ್ನಾಟಕದಲ್ಲಿ ಗ್ರಾಮ ಒನ್ ಯೋಜನೆಯ ಲೋಕಾರ್ಪಣೆ

ಕರ್ನಾಟಕದಲ್ಲಿ ಗ್ರಾಮ ಒನ್ ಯೋಜನೆಯ ಲೋಕಾರ್ಪಣೆ

31
0
Village One project launched in Karnataka
bengaluru

ಬೆಂಗಳೂರು:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನಸಿನ ಯೋಜನೆಯಾಗಿರುವ ಗ್ರಾಮ ಒನ್ ಯೋಜನೆಯನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ವರ್ಚುಯಲ್ ಕಾರ್ಯಕ್ರಮದ ಮೂಲಕ ರಾಜ್ಯದ 12 ಜಿಲ್ಲೆಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಸಸಿಗೆ ನೀರೆರೆಯುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಹಲವು ಅನುಕೂಲ ಒದಗಿಸುವ ಯೋಜನೆಗೆ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಎಸಿಎಸ್ ರಾಜೀವ ಚಾವ್ಲಾ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಮತ್ತು ಇತರರು ಉಪಸ್ಥಿತರಿದ್ದರು.

bengaluru

ಗ್ರಾಮ ಒನ್ ಕೇಂದ್ರಗಳಿಂದ ಸಚಿವರಾದ ಅರಗ ಜ್ನಾನೇಂದ್ರ, ಬಿ ಶ್ರೀರಾಮುಲು, ಬಿ ಸಿ ನಾಗೇಶ ಸೇರಿದಂತೆ ಇತರರು ಭಾಗವಹಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಪ್ರಾಯ ಹಂಚಿಕೊಂಡರು.

bengaluru

LEAVE A REPLY

Please enter your comment!
Please enter your name here