Home Uncategorized Vishal: ‘ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ಸಿದ್ಧನಿದ್ದೇನೆ, ಆದರೆ..’: ವಾಸ್ತವ ಸ್ಥಿತಿ ವಿವರಿಸಿದ ನಟ ವಿಶಾಲ್​

Vishal: ‘ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ಸಿದ್ಧನಿದ್ದೇನೆ, ಆದರೆ..’: ವಾಸ್ತವ ಸ್ಥಿತಿ ವಿವರಿಸಿದ ನಟ ವಿಶಾಲ್​

18
0
Advertisement
bengaluru

ನಟ ವಿಶಾಲ್​ (Vishal) ಅವರು ಕನ್ನಡ ಚಿತ್ರರಂಗದ ಜೊತೆ ಉತ್ತಮ ನಂಟು ಇಟ್ಟುಕೊಂಡಿದ್ದಾರೆ. ಕರುನಾಡಿನ ಬಗ್ಗೆ ಅವರಿಗೆ ಗೌರವ ಇದೆ. ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ನಿಧನರಾದಾಗ ವಿಶಾಲ್​ ಅವರು ಕಂಬನಿ ಮಿಡಿದಿದ್ದರು. ಅಲ್ಲದೆ, ಮೈಸೂರಿನ ಶಕ್ತಿಧಾಮದ (Shakthidhama) ಮಕ್ಕಳನ್ನು ದತ್ತು ಪಡೆಯಲು ತಾವು ಸಿದ್ಧ ಎಂದು ಅವರು ಹೇಳಿದ್ದರು. ಆದರೆ ದತ್ತು ಪಡೆಯಲು ಈವರೆಗೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನೆಂಬುದನ್ನು ವಿಶಾಲ್​ ಅವರು ವಿವರಿಸಿದ್ದಾರೆ. ದತ್ತು ಪಡೆಯುವ ಕಾರ್ಯಕ್ಕಾಗಿ ಡಾ. ರಾಜ್​ಕುಮಾರ್​ ಕುಟುಂಬದ (Dr Rajkumar Family) ಅನುಮತಿ ಬೇಕಿದೆ. ಅಲ್ಲದೇ, ಅಣ್ಣಾವ್ರ ಕುಟುಂಬದವರು ಈಗಾಗಲೇ ಶಕ್ತಿಧಾಮವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಶಕ್ತಿಧಾಮಕ್ಕೆ ಈಗ ಸಹಾಯದ ಅವಶ್ಯಕತೆ ಇಲ್ಲ ಎಂದು ವಿಶಾಲ್​ ಹೇಳಿದ್ದಾರೆ.

‘ಮೈಸೂರಿನ ಶಕ್ತಿಧಾಮದ ಮಕ್ಕಳನ್ನು ದತ್ತು ಪಡೆಯಲು ನಾನು ಸಿದ್ಧನಿದ್ದೇನೆ. ಡಾ. ರಾಜ್​ಕುಮಾರ್ ಕುಟುಂಬದವರ ಒಪ್ಪಿಗೆಗಾಗಿ ಕಾಯುತ್ತಿದ್ದೇನೆ. ಶಕ್ತಿಧಾಮದ ಸ್ವಯಂಸೇವಕನಾಗಿ ದುಡಿಯಲು ನಾನು ಸದಾ ಸಿದ್ಧ. ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ನಾನು ಇಲ್ಲಿಗೆ ಬರುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಶಕ್ತಿಧಾಮಕ್ಕೆ ಸಹಾಯದ ಅವಶ್ಯಕತೆ ಇಲ್ಲ. ಡಾ. ರಾಜ್ ಕುಟುಂಬದವರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅವಶ್ಯಕತೆ ಇದ್ದಾಗ ನಾನು ಶಕ್ತಿಧಾಮದ ಜೊತೆಗಿರುತ್ತೇನೆ’ ಎಂದು ಮೈಸೂರಿನಲ್ಲಿ ವಿಶಾಲ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Vishal Wedding: ನಟ ವಿಶಾಲ್​ ಮದುವೆ ಯಾವಾಗ? ಬಹಿರಂಗ ವೇದಿಕೆಯಲ್ಲಿ ಪ್ಲ್ಯಾನ್​ ತಿಳಿಸಿದ ಸ್ಟಾರ್​ ಹೀರೋ

ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ:

bengaluru bengaluru

‘ನಾನು ಕನ್ನಡ ಸಿನಿಮಾದಲ್ಲಿ ಅಭಿನಯಿಸಬೇಕು ಅನ್ನೋದು ನನ್ನ ತಂದೆಯ ಕನಸು. ಕನ್ನಡ ಭಾಷೆಯ ಚಿತ್ರದಲ್ಲಿ ನಟಿಸಲು ನಾನು ಸಿದ್ಧನಿದ್ದೇನೆ. ನನ್ನ ತಂದೆ ಕನ್ನಡಿಗರಾಗಿರುವುದರಿಂದ ಆಸೆ ಪಡುತ್ತಿದ್ದಾರೆ. ಅವರ ಆಸೆ ಈಡೇರಿಸಲು ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ. ಕನ್ನಡ ಚಿತ್ರರಂಗದಿಂದ ಈಗಾಗಲೇ ನನಗೆ ಆಫರ್​ ಬಂದಿದೆ. 2023ರಲ್ಲಿ ನಾನು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದೇನೆ. 2024ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ’ ಎಂದು ವಿಶಾಲ್​ ಹೇಳಿದ್ದಾರೆ.

ಇದನ್ನೂ ಓದಿ: Vishal: ವಿಶಾಲ್​ ಮನೆ ಮೇಲೆ ಕಲ್ಲು ತೂರಾಟ; ಸಿಸಿಟಿವಿ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ

‘ಕಾಂತಾರ’ ಚಿತ್ರಕ್ಕೆ ವಿಶಾಲ್​ ಮೆಚ್ಚುಗೆ:

‘ದಕ್ಷಿಣ ಭಾರತದ ಸಿನಿಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ‘ಕೆಜಿಎಫ್’​ ನಂತರ ‘ಕಾಂತಾರ’ ಸಹ ಒಳ್ಳೆಯ ಸಿನಿಮಾವಾಗಿ ಮೂಡಿಬಂದಿದೆ. ನಾನು ಕೂಡ ಈ ಚಿತ್ರವನ್ನು ನೋಡಿದ್ದೇನೆ, ಬಹಳ ಚೆನ್ನಾಗಿದೆ. ರಿಷಬ್​ಗೆ ಕರೆ ಮಾಡಿ ಸಿನಿಮಾ ಚೆನ್ನಾಗಿದೆ ಅಂತ ತಿಳಿಸಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಲ್ಲಿನ ಕಲೆ ಸಂಸ್ಕೃತಿ ಅನಾವರಣ ಆಗುತ್ತಿದೆ. ಉತ್ತರ ಭಾರತದವರಿಗೆ ಇದು ಇಷ್ಟವಾಗ್ತಿದೆ. ದಕ್ಷಿಣ ಭಾರತ, ಉತ್ತರ ಭಾರತದ ಸಿನಿಮಾ ಎಂಬ ಭೇದ ಇಲ್ಲ. ಎಲ್ಲವೂ ಭಾರತದ ಸಿನಿಮಾ’ ಎಂದು ವಿಶಾಲ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


bengaluru

LEAVE A REPLY

Please enter your comment!
Please enter your name here