Home Uncategorized Voter ID Scam: ಆರ್​. ಆರ್​ ನಗರದಲ್ಲಿ ಕಾಂಗ್ರೆಸ್​ ಬೆಂಬಲಿತ, ಒಕ್ಕಲಿಗ ಮತದಾರರ ಹೆಸರು ಡಿಲೀಟ್:...

Voter ID Scam: ಆರ್​. ಆರ್​ ನಗರದಲ್ಲಿ ಕಾಂಗ್ರೆಸ್​ ಬೆಂಬಲಿತ, ಒಕ್ಕಲಿಗ ಮತದಾರರ ಹೆಸರು ಡಿಲೀಟ್: ಚುನಾವಣಾ ಆಯೋಗಕ್ಕೆ ಡಿಕೆ ಸುರೇಶ್ ದೂರು

21
0

ಬೆಂಗಳೂರು: ರಾಜ್ಯದಲ್ಲಿ ಮತದಾರ ವೋಟರ್​ ಐಡಿ ಪರಿಷ್ಕರಣೆ (Voter ID Scam) ಚರ್ಚೆ ತೀವ್ರತೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಮತಾದರರ ಮಾಹಿತಿ ಸಂಗ್ರಹ ಅಕ್ರಮ ಆರೋಪ ಕೇಳಿಬರುತ್ತಿದೆ. ಇದೇ ವಿಚಾರ ಕಳೆದ ಕೆಲ ದಿನಗಳಿಂದ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಗ್ಯುದ್ದಕ್ಕು ಕಾರಣವಾಗಿದೆ ಮತ್ತು ದೂರುಗಳು ದಾಖಲಾಗುತ್ತಿವೆ. ಹೀಗೆಯೇ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ (Rajarajeshwari nagar assembly constituency) ವೋಟರ್​ ಐಡಿ ಪರಿಷ್ಕರಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಸಿ ಕೆ.ಆರ್​.ವೃತ್ತ​ ಬಳಿ ಇರುವ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ (Congress)​​ ಸಂಸದ ಡಿ.ಕೆ.ಸುರೇಶ್ (DK Suresh) ಇಂದು (ಡಿ.7)​​ ದೂರು ನೀಡಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಡಿ. ಕೆ ಸುರೇಶ್, ​ಆರ್​.ಆರ್​​.ನಗರದಲ್ಲಿ ನಕಲಿ ಮತದಾರರ ಹೆಸರು ಸೇರ್ಪಡೆಯಾಗಿದೆ. ಪ್ರಮುಖವಾಗಿ ಮತಪಟ್ಟಿಯಿಂದ ಒಕ್ಕಲಿಗರ ಮತದಾರರ ಹೆಸರು ತೆಗೆಯಲಾಗಿದೆ. ಕಾಂಗ್ರೆಸ್​ ಬೆಂಬಲಿತ ಮತದಾರರ ಹೆಸರುಗಳನ್ನು ಕೂಡ ಡಿಲೀಟ್ ಮಾಡಲಾಗಿದೆ. ಚಿಲುಮೆ ಸಂಸ್ಥೆ ಜೊತೆ ಕೆಲ ಬಿಜೆಪಿ ನಾಯಕರು ಸೇರಿ ಅಕ್ರಮವೆಸಗಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಎಂದು ತಿಳಸಿದರು.

ಇದನ್ನೂ ಓದಿ: ಧಾರವಾಡ: ಮತದಾರರ ಪಟ್ಟಿ ಪರಿಷ್ಕರಣೆ, ಸಮೀಕ್ಷೆ ಕಾರ್ಯದಲ್ಲಿ ಬೇಜವಾಬ್ದಾರಿ, ಎಸ್​ಡಿಎ ಅಮಾನತು

ಜನವರಿ 22ರಿಂದ ನವೆಂಬರ್​ವರೆಗೆ ಸಾಕಷ್ಟು ಹೆಸರು ಸೇರ್ಪಡೆ ಮಾಡಿದ್ದಾರೆ. ಹೊಸ ಸೇರ್ಪಡೆ ವಿಚಾರವನ್ನು ಆಯುಕ್ತರ ಗಮನಕ್ಕೆ ತಂದಿದ್ದೇವೆ. 46ಸಾವಿರ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. 26 ಸಾವಿರ ಮತದಾರರ ಹೆಸರನ್ನು ಡಿಲೀಟ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಫಾರ್ಮ್ ನಂಬರ್​ 6 ಹಾಗೂ 7ಕ್ಕೆ ಸಹಿ ಆಗಬೇಕು. ಆದರೆ ಯಾವುದೇ ಸಹಿ ಇಲ್ಲದೆ ಡಿಲೀಟ್​ ಮಾಡಲಾಗಿದೆ ಎಂದು ಆರೋಪಿಸಿದರು.

ಈ ವೇಳೆ ಕಾಂಗ್ರೆಸ್​ ಮುಖಂಡರಾದ ಹನುಮಂತರಾಯಪ್ಪ, ಆರ್.ಆರ್.ನಗರ ಪರಾಜಿತ ಅಭ್ಯರ್ಥಿ ಕುಸುಮ ಉಪಸ್ಥಿತರಿದ್ದರು.

ಯಶವಂತಪುರದಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಫೈಟ್​​​

ಡಿ.4 ರಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿ.ಕೆ. ನಗರದ 8ನೇ ಅಡ್ಡರಸ್ತೆಯಲ್ಲಿ ಕೆಲವರು ಮತದಾರರ ಮಾಹಿತಿ ಕಲೆಹಾಕುತ್ತಿದ್ದರು. ಆಮಿಷವೊಡ್ಡಿ ಮತದಾನ ಗುರುತಿನ ಚೀಟಿ ಪಡೆದುಕೊಳ್ಳಲು ಬಿಜೆಪಿ ಕಾರ್ಯಕರ್ತರನ್ನು, ಮಾಹಿತಿ ಪಡೆಯುತ್ತಿದ್ದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡಿದ್ದರು.

ಈ ವೇಳೆ ಅವರನ್ನು ಪರಿಶೀಲಿಸಿದಾಗ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ, ಸಂಸದ ಡಿ.ಕೆ. ಸುರೇಶ್ ಹಾಗೂ ಎಸ್. ಕುಸುಮಾ ಅವರ ಫೋಟೊಗಳಿದ್ದವು. ಈ ವೇಳೆ ಮಾಹಿತಿ ಸಂಗ್ರಹಿಸುತ್ತಿದ್ದವರು ಕುಸುಮಾ, ಡಿ.ಕೆ ಸುರೇಶ್ ಇಬ್ಬರು ನಾಯಕರು ಹೇಳಿದಂತೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ದಾವಣಗೆರೆ ಜಿಲ್ಲೆಯಲ್ಲೂ ಕೆಲ ಮತದಾರರ ಹೆಸರು ಡಿಲೀಟ್ ಆಗಿವೆ: ಡಿಸಿ ಶಿವಾನಂದ ಕಾಪಶಿ

ಚಿಲುಮೆ ಸಂಸ್ಥೆಯ ಅಕ್ರಮ ಬಳಿಕ ಅರಿವು ಮೂಡಿಸಲು ಸೂಚಿಸಿದ್ದಾರೆ. ಮತದಾರರಿಗೆ ಅರಿವು ಮೂಡಿಸಲು ನಮ್ಮ ನಾಯಕರು ಹೇಳಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಗೋಪಾಲಕೃಷ್ಣ ಹೇಳಿದ್ದರು. ಇದಾದ ಬಳಿಕ ಬಿಜೆಪಿಯ ಮಾಜಿ ಕಾರ್ಪೊರೇಟರ್ ವೆಂಕಟೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್​ ಕಾರ್ಯಕರ್ತರು ಪೊಲೀಸ್​ ಠಾಣೆ ಎದುರು ಪ್ರತಿಭಟನೆ ಮಾಡಿದ್ದರು. ಎಸ್‌. ಕುಸುಮಾ ನೇತೃತ್ವದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಘೋಷಣೆ ಕೂಗಿದ್ದರು.

ರಾಜ್ಯದ ಮತ್ತಷ್ಟು ಸುದ್ದುಇಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here