We will all work together to make Modi Prime Minister again; Janardhana Reddy announced that he will join the BJP party | ಎಲ್ಲರೂ ಒಟ್ಟಾಗಿ ಮೋದಿರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ; ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗ್ತೇನೆ ಎಂದು ಜನಾರ್ದನ ರೆಡ್ಡಿ ಘೋಷಣೆ
ಬೆಂಗಳೂರು: ನಾಳೆ ಬೆಳಗ್ಗೆ 10ಕ್ಕೆ ವಿಜಯೇಂದ್ರ ಮತ್ತು ಉಸ್ತುವಾರಿ ರಾಧಾಮೋಹನ್ ಸಮ್ಮುಖದಲ್ಲಿ ನಾಳೆ ಬಿಜೆಪಿ ಸೇರುತ್ತೇನೆ ಎಂದು ಜನಾರ್ದನ ರೆಡ್ಡಿ ಅಧಿಕೃತವಾಗಿ ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ನಾಳೆ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ನಾಳೆ ಬೆಳಗ್ಗೆ 10ಕ್ಕೆ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಎಲ್ಲಾ ಬೆಂಬಲಿಗರ ಅಭಿಪ್ರಾಯ ಪಡೆದಿದ್ದೇನೆ.
ಇದಕ್ಕೆ ಎಲ್ಲಾ ಬೆಂಬಲಿಗರು ಒಪ್ಪಿಗೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಕಳೆದ 10 ವರ್ಷದಿಂದ ಅಭಿವೃದ್ಧಿಯಾಗಿದೆ. ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಈ ನಿರ್ಧಾರ ಮಾಡಿದ್ದೇನೆ.