Home ಅಪರಾಧ ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿ ಮಹಿಳೆಯ ಮೇಲೆ ಅತ್ಯಾಚಾರ

ಬೆಂಗಳೂರಿನ ಕೆಆರ್ ಮಾರ್ಕೆಟ್ ಬಳಿ ಮಹಿಳೆಯ ಮೇಲೆ ಅತ್ಯಾಚಾರ

32
0

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಾನುವಾರ ರಾತ್ರಿ ಘನಘೋರ ಕೃತ್ಯ ನಡೆದಿದೆ. ಕೆಆರ್ ಮಾರ್ಕೆಟ್​​ನ ಗೋಡೌನ್ ಸ್ಟ್ರೀಟ್​ನಲ್ಲಿ ಇಬ್ಬರು ದುಷ್ಕರ್ಮಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.

ಭಾನುವಾರ ರಾತ್ರಿ 11.30 ರ ಸುಮಾರಿಗೆ ಮಹಿಳೆ ಯಲಹಂಕಕ್ಕೆ ತೆರಳಲು ಕೆಆರ್ ಮಾರ್ಕೆಟ್‌ ಬಳಿ ಬಸ್​ಗಾಗಿ ಕಾಯುತ್ತಿದ್ದರು. ಯಲಹಂಕ ಕಡೆಗೆ ಬಸ್ ಬರದ ಕಾರಣ ಬಸ್ ಎಲ್ಲಿ ಬರುತ್ತದೆ ಎಂದು ಸ್ಥಳದಲ್ಲಿದ್ದವರಲ್ಲಿ ವಿಚಾರಿಸುತ್ತಿರುವಾಗ ದುಷ್ಕರ್ಮಿಗಳು ಬಂದಿದ್ದಾರೆ. ಬಸ್ ಬರುವ ಜಾಗ ತೋರಿಸತ್ತೇವೆ ಎಂದು ಸಮೀಪದಲ್ಲೇ ಇರುವ ಗೋಡೌನ್ ಸ್ಟ್ರೀಟ್​ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಮಹಿಳೆಯ ಬಳಿ ಇದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ

37 ವರ್ಷದ ಮಹಿಳೆ ಒಂದು ವಾರದ ಹಿಂದೆ ಗಂಡನ ಜೊತೆ ಜಗಳ ಮಾಡಿಕೊಂಡು ಊರು ಬಿಟ್ಟಿದ್ದರು. ಆದರೆ ಜನವರಿ19 ರಂದು ರಾತ್ರಿ ಭಾನುವಾರ ರಾತ್ರಿ ಬಸ್ ಸ್ಟಾಪ್​​ನಲ್ಲಿ ಕುಳಿತಿದ್ದ ವೇಳೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಮೊಬೈಲ್, ಹಣ, ಓಲೆ, ಚಿನ್ನದ ತಾಳಿ ಚೈನು ಕಿತ್ತು ಪರಾರಿ ಆಗಿದ್ದಾರೆ.

ಇದೀಗ ಸಿಸಿಟಿವಿ‌ ದೃಶ್ಯ ಆಧರಿಸಿ ಪೊಲೀಸರು‌ ಆರೋಪಿಗಳ ಬಂಧನಕ್ಕೆ ಬಲೆ‌ ಬೀಸಿದ್ದಾರೆ.

ಕರ್ನಾಟಕದಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳು ಜನರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿರುವ ರೇಪ್ ಬೆಚ್ಚಿ ಬೀಳಿಸಿದೆ.

LEAVE A REPLY

Please enter your comment!
Please enter your name here