ಬೆಂಗಳೂರು:
ನವೆಂಬರ್ 25 ರಂದು ವಿಚಾರಣೆಗೆ ಹಾಜರಾಗಲು ಸಿಬಿಐ ನೊಟೀಸ್ ನೀಡಿರುವ ಹಿನ್ನೆಲೆಯಲ್ಲಿ ಸಮನ್ಸ್ ರದ್ದು ಮಾಡುವಂತೆ ಹಾಗೂ ನಿರೀಕ್ಷಣಾ ಜಾಮೀನು ಪಡೆಯುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೊಟೀಸ್ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ತಮ್ಮ ವಕೀಲರೊಂದಿಗೆ ಮುಂದಿನ ಕಾನೂನು ಹೋರಾಟದ ಕುರಿತು ಶಿವಕುಮಾರ್ ಚರ್ಚಿಸಿದರು.
ಸಿಬಿಐ ನೀಡಿರುವ ಸಮನ್ಸ್‌ಗೆ ವಿಚಾರಣೆಗೆ ಹಾಜರಾಗಿ ಎಫ್‍ಐಆರ್‍ನಲ್ಲಿ ಉಲ್ಲೇಖಿಸಿರುವ ವಿಚಾರಗಳಿಗೆ ಸೂಕ್ತ ದಾಖಲೆ ಒದಗಿಸಿ ತನಿಖೆಗೆ ಸಹಕಾರ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಬಿಐ ನೀಡಿರುವ ಸಮನ್ಸ್ ಅನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿ, ಐಟಿ ಮತ್ತು ಇಡಿ ಪ್ರಕರಣದಲ್ಲಿ ಇರುವ ಆರೋಪಗಳೇ ಸಿಬಿಐ ಪ್ರಕರಣದಲ್ಲಿಯೂ ಇವೆ. ಇದರಲ್ಲಿ ಯಾವುದೇ ಹೊಸ ಆರೋಪ ಇಲ್ಲ. ಒಂದೇ ಆರೋಪದ ಅಡಿಯಲ್ಲಿ ಪ್ರತ್ಯೇಕ ತನಿಖೆ ಸರಿಯಲ್ಲ ಎಂದು ಅರ್ಜಿ ಹಾಕುವ ಬಗ್ಗೆಯೂ ವಕೀಲರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಈಗಾಗಲೇ ಇಡಿ ಪ್ರಕರಣದಲ್ಲಿ ಜಾಮೀನು ಇರುವುದರಿಂದ ಪ್ರತ್ಯೇಕ ಪ್ರಕರಣ ಅವಶ್ಯಕತೆ ಇಲ್ಲ. ಇದು ರಾಜಕೀಯ ಪ್ರೇರಿತ ಪ್ರಕರಣ ಎಂದು ಕೋರ್ಟ್‍ನಲ್ಲಿ ಕಾನೂನು ಹೋರಾಟ ಮಾಡುವುದು. ಸಿಬಿಐ ವಿಚಾರಣೆಗೆ ಹಾಜರಾದಾಗ ಬಂಧನ ಭೀತಿ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ ಜಾಮೀನು ಪಡೆದುಕೊಳ್ಳಬಹುದು ಎಂದು ವಕೀಲರು ಸಲಹೆ ನೀಡಿದ್ದಾರೆನ್ನಲಾಗಿದೆ.