Home Uncategorized ಅಫಜಲಪುರ ಪಟ್ಟಣದಲ್ಲಿ ಟ್ರ್ಯಾಕ್ಟರ್ ಹರಿದು ಪಾದಚಾರಿ ಸಾವು; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಫಜಲಪುರ ಪಟ್ಟಣದಲ್ಲಿ ಟ್ರ್ಯಾಕ್ಟರ್ ಹರಿದು ಪಾದಚಾರಿ ಸಾವು; ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

3
0
bengaluru

ಕಲಬುರಗಿ: ಟ್ರ್ಯಾಕ್ಟರ್ ಹರಿದು ಪಾದಾಚಾರಿ ಸಾವನ್ನಪ್ಪಿದ ಭೀಕರ ಘಟನೆ ಜಿಲ್ಲೆಯ ಅಫಜಲಪುರ ಪಟ್ಟಣದ ನಿಂಬಾಳ್​ ಪೆಟ್ರೋಲ್ ಬಂಕ್​ ಬಳಿ ನಡೆದಿದ್ದು, ಅಪಘಾತದ (Accident) ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಫಜಲಪುರ ಪಟ್ಟಣದ ನಿವಾಸಿ ಬರ್ಮಾ ದಂಡಗೂಲೆ (45) ಮೃತ ದುರ್ದೈವಿಯಾಗಿದ್ದಾರೆ. ಮುಂಜಾನೆ ರಸ್ತೆ ಪಕ್ಕದಲ್ಲಿ ಬರ್ಮಾ ದಂಡಗೂಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್​ನ ಇಂಜಿನ್​ಗೆ ಅಳವಡಿಸಿದ್ದ ಟೇಲರ್ ಸಂಪರ್ಕ ಕಡಿತಗೊಂಡು ಬರ್ಮಾ ಅವರ ಮೇಲೆ ಹರಿದಿದೆ.

ಇದನ್ನೂ ಓದಿ: ಸೆಲ್ಫೀ ತೆಗೆದುಕೊಳ್ಳುವಾಗ ಕಿತವಾಡ ಜಲಪಾತದಲ್ಲಿ ನೀರಿಗೆ ಜಾರಿದ ಯುವತಿಯರಲ್ಲಿ ನಾಲ್ವರು ಜಲಸಮಾಧಿ, ಒಬ್ಬಳ ಸ್ಥಿತಿ ಚಿಂತಾಜನಕ

ಜಮೀನಿನಲ್ಲಿ ಮರಗಳನ್ನು ಕಡಿದುಹಾಖಿದ ದುಷ್ಕರ್ಮಿಗಳು

ದಾವಣಗೆರೆ: ಜಮೀನಿನಲ್ಲಿದ್ದ 10ಕ್ಕೂ ಹೆಚ್ಚು ಮರಗಳು ದುಷ್ಕರ್ಮಿಗಳ ತಂಡವೊಂದು ಕಡಿದುಹಾಕಿದ ಘಟನೆ ತಾಲೂಕಿನ‌ ಗಡಿ ಗುಡಾಳ್ ಗ್ರಾಮದಲ್ಲಿ ನಡೆದಿದೆ. ಹೇಮಂತಕುಮಾರ್‌ ಎಂಬವರಿಗೆ ಸೇರಿದ ಜಮೀನಿನಲ್ಲಿ ಅವರ ತಂದೆಯ ಸಮಾಧಿ ಪಕ್ಕದಲ್ಲಿದ್ದ ಬೇವಿನ ಮರ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಬೇವಿನ ಮರಗಳನ್ನು ಕಡಿದು ನಾಶಗೊಳಿಸಲಾಗಿದ್ದು, ಪಕ್ಕದ ಜಮೀನಿನ ಮಾಲೀಕನೇ ಕಡಿದು ಹಾಕಿದ್ದಾಗಿ ಆರೋಪ ಮಾಡಲಾಗಿದೆ. ಕೃತ್ಯ ಸಂಬಂಧ ಹೇಮಂತಕುಮಾರ್ ಅವರು ಜಯಪ್ಪ ವಿರುದ್ಧ ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

bengaluru

ಇದನ್ನೂ ಓದಿ: ಗೌರಿಶಂಕರ್ ಕೊಲೆ ಸುಪಾರಿ ಕೊಟ್ಟಿದ್ದರೆಂದು ಪ್ರಪಂಚದ ಯಾವುದೇ ದೇವರ ಮುಂದೆ ಪ್ರಮಾಣ ಮಾಡಿ ಹೇಳಲು ಸಿದ್ಧ: ಬಿಜೆಪಿ ಮಾಜಿ ಶಾಸಕ

BWSSB ಕಾಮಗಾರಿ ವೇಳೆ ಸ್ಲ್ಯಾಬ್​ ಬಿದ್ದು ಕಾರ್ಮಿಕ ಸಾವು

ಬೆಂಗಳೂರು: ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಕಾಮಗಾರಿ ವೇಳೆ ಸ್ಲ್ಯಾಬ್​ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮಗಾರಿ ನಡೆಸುವ ವೇಳೆ ಸಿಮೆಂಟ್ ಸ್ಲ್ಯಾಬ್ ಕುಸಿದುಬಿದ್ದಿದೆ. ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸಾವನ್ನಪ್ಪಿದ್ದು, ಮೃತದೇಹವನ್ನು ರಾಜರಾಜೇಶ್ವರಿ ನಗರ ಆಸ್ಪತ್ರೆಗೆ ರವಾನಿಸಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here