Home Uncategorized ಅಮೃತಸರದಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಪಡೆ

ಅಮೃತಸರದಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಪಡೆ

15
0

ಅಮೃತಸರ: ಗಡಿ ಭದ್ರತಾ ಪಡೆ (BSF) ಪಡೆಗಳು ಪಾಕಿಸ್ತಾನದಿಂದ (Pakistan Drone) ಪಂಜಾಬ್‌ನ ಅಮೃತಸರ (Amritsar) ಜಿಲ್ಲೆಗೆ ಪ್ರವೇಶಿಸಿದ ಡ್ರೋನ್​​ನ್ನು ಹೊಡೆದುರುಳಿಸಿದೆ. ಮಂಗಳವಾರ ಸಂಜೆ 7:20 ರ ಸುಮಾರಿಗೆ ಡ್ರೋನ್ ಭಾರತದ ಭೂಪ್ರದೇಶವನ್ನು ಪ್ರವೇಶಿಸಿತ್ತು ಮತ್ತು ಬುಧವಾರ ಬೆಳಿಗ್ಗೆ, ಭರೋಪಾಲ್‌ನ ಗಡಿ ಹೊರಠಾಣೆಯಿಂದ ಸುಮಾರು 20 ಮೀಟರ್ ದೂರದಲ್ಲಿ ಪಾಕಿಸ್ತಾನದ ಭಾಗದಲ್ಲಿ ಬಿದ್ದ ಡ್ರೋನ್ ಅನ್ನು ಸೈನಿಕರು ನೋಡಿದ್ದಾರೆ. ಈ ಹಿಂದೆಯು ಪಾಕಿಸ್ತಾನದಲ್ಲಿ ಇಂತಹ ಡ್ರೋನ್ ದಾಳಿಗಳು ನಡೆದಿತ್ತು.

ಕೌಂಟರ್ ಡ್ರೋನ್ ಕ್ರಮಗಳನ್ನು ತೆಗೆದುಕೊಂಡಾಗ ಡ್ರೋನ್ ಕೆಲವು ನಿಮಿಷಗಳ ಕಾಲ ಆಕಾಶದಲ್ಲಿ ಸುಳಿದಾಡಿದೆ ನಂತರ ಡ್ರೋನ್ ಬಂದ ಜಾಗಕ್ಕೆ ಹಿಂತಿರುಗುವಾಗ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಈ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ಚಲನವಲನದ ಬಗ್ಗೆ ಶೋಧ ನಡೆಸಲಾಗುತ್ತಿದೆ. ಇದುವೆರೆಗೂ ಭಾರತ-ಪಾಕಿಸ್ತಾನ ಗಡಿಯಲ್ಲಿ 220 ಡ್ರೋನ್‌ ವೀಕ್ಷಣೆಯಾಗಿದೆ.

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಪಡೆ

ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಭಾರತದ ಕಡೆಗೆ ನುಸುಳಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿತ್ತು, ಈ ಘಟನೆ ನವೆಂಬರ್ 29 ನಡೆದಿತ್ತು. ಅಮೃತಸರ ನಗರದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ ಚಹರ್‌ಪುರ್ ಗ್ರಾಮದ ಬಳಿ ಭಾರತದ ಭೂಪ್ರದೇಶವನ್ನು ಪ್ರವೇಶಿಸುವುದನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ.

ಇದನ್ನು ಓದಿ:ಪಂಜಾಬ್​ನ ಅಮೃತಸರದಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್ ಪಡೆ

ಡ್ರೋನ್​ ಅನ್ನು ಹೊಡೆದುರುಳಿಸಿದ ನಂತರ ನಡೆದ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಬಿಎಸ್​ಎಫ್ ಭಾಗಶಃ ಹಾನಿಗೊಳಗಾದ ಹೆಕ್ಸಾಕಾಪ್ಟರ್ ಅನ್ನು ವಶಪಡಿಸಿಕೊಂಡಿದೆ. ಬಿಳಿ ಪಾಲಿಥಿನ್‌ನಲ್ಲಿ ಶಂಕಿತ ವಸ್ತುವನ್ನು ಸಹ ಅದರ ಕೆಳಗೆ ಅಂಟಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮತ್ತೊಂದು ಡ್ರೋನ್ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here