Home ಕ್ರೀಡೆ ಆರ್ ಸಿಬಿಗೆ ‘ವಿರಾಟ’ ಜಯ; ಬೆಂಗಳೂರು ಎರಡನೇ ಸ್ಥಾನಕ್ಕೆ ಬಡ್ತಿ

ಆರ್ ಸಿಬಿಗೆ ‘ವಿರಾಟ’ ಜಯ; ಬೆಂಗಳೂರು ಎರಡನೇ ಸ್ಥಾನಕ್ಕೆ ಬಡ್ತಿ

24
0

ಅಬುದಾಬಿ:

ಇಂಡಿಯನ್ ಪ್ರಿಮಿಯರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಷ್ಟು ದಿನ ತನ್ನ ಬ್ಯಾಟಿಂಗ್ ವೈಭವದಿಂದಲೇ ಸುದ್ದಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು 39ನೇ ಪಂದ್ಯದಲ್ಲಿ ತನ್ನ ಬಿಗುವಿನ ದಾಳಿಯಿಂದ ಸದ್ದು ಮಾಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಪಡೆ ಎಂಟು ವಿಕೆಟ್ ಗಳ ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ವಿರಾಟ್ ಪಡೆ ಆಡಿದ 10 ಪಂದ್ಯಗಳಲ್ಲಿ 7 ಜಯ, 3 ಸೋಲುಗಳೊಂದಿಗೆ 14 ಅಂಕ ಕಲೆ ಹಾಕಿದೆ.

Mohammed Siraj

ಸೊಗಸಾದ ಬೌಲಿಂಗ್ ದಾಳಿ ನಡೆಸಿ, ಅಬ್ಬರಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಇಯಾನ್ ಮಾರ್ಗನ್ ನಿರ್ಧಾರಕ್ಕೆ ಆರಂಭದಲ್ಲೇ ಪೆಟ್ಟು ನೀಡಿದ್ದ ಆರ್.ಸಿ.ಬಿ ಹಿಂತಿರುಗಿ ನೋಡಲೇ ಇಲ್ಲ. ಭರ್ಜರಿ ಲೈನ್ ಹಾಗೂ ಲೆಂಥ್ ನಲ್ಲಿ ಬೌಲಿಂಗ್ ನಡೆಸಿದ ವಿರಾಟ್ ಪಡೆ, ಕೋಲ್ಕತ್ತಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು.

LEAVE A REPLY

Please enter your comment!
Please enter your name here