Home Uncategorized ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು: ಶಕ್ತಿ ಯೋಜನೆ ಅರಿವು...

ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು: ಶಕ್ತಿ ಯೋಜನೆ ಅರಿವು ಮೂಡಿಸುತ್ತಿರುವ ಕಂಡಕ್ಟರ್, ವಿಡಿಯೋ ವೈರಲ್

8
0
Advertisement
bengaluru

ಯಾರಿಗುಂಟು ಯಾರಿಗಿಲ್ಲ, ಇದು ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆ, ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸ್ಸಿನಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು.., ಅಕ್ಕಾ ನೀ, ತಂಗೀ.. ನೀ ಆಧಾರ್‌ ತೋರಿಸಿದ್ರೆ ಮಾತ್ರ ಉಚಿತ ಟಿಕೆಟ್‌ ಕೊಡ್ತೀನಿ ನಾನು… ರಾಯಚೂರು: ಯಾರಿಗುಂಟು ಯಾರಿಗಿಲ್ಲ, ಇದು ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆ, ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸ್ಸಿನಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು.., ಅಕ್ಕಾ ನೀ, ತಂಗೀ.. ನೀ ಆಧಾರ್‌ ತೋರಿಸಿದ್ರೆ ಮಾತ್ರ ಉಚಿತ ಟಿಕೆಟ್‌ ಕೊಡ್ತೀನಿ ನಾನು, ಇದು ಪಕ್ಕಾ ಅಕ್ಕಾ, ನಿಜ ತಾನೆ, ಹೇಳಕ್ಕ…ʼ ಇದು ಆಕಾಶವಾಣಿಯಲ್ಲಿ ಕೇಳಿಬಂದ ಗೀತೆಯಲ್ಲ… ರಾಯಚೂರಿನ ಬಸ್‌ ಕಂಡಕ್ಟರ್‌ ಒಬ್ಬರು ಶಕ್ತಿ ಯೋಜನೆ ಬಗ್ಗೆ ಅರಿವು  ಮೂಡಿಸುತ್ತಿದ್ದ ಪರಿ.

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಎಫೆಕ್ಟ್ ನಿಂದ ರಾಯಚೂರಿನ ಬಸ್ ಕಂಡಕ್ಟರ್ ಒಬ್ಬರು ಸಿಂಗರ್ ಆಗಿದ್ದಾರೆ. ನೂಕು ನುಗ್ಗಲು ಇದ್ದರೂ ಬಸ್‌ನಲ್ಲೂ ಕೂಲ್ ಆಗಿ ಡಾ.ರಾಜಕುಮಾರ್ ಸಿನಿಮಾಗಳ ಹಾಡು ಹೇಳುತ್ತಾ‌ ಟೆನ್ಷನ್ ರಿಲೀಫ್ ಮಾಡಿಕೊಂಡು ಪ್ರಯಾಣಿಕರಿಗೆ ಟಿಕೆಟ್ ಕೊಡುತ್ತಿದ್ದಾರೆ.

ರಾಯಚೂರು ಡಿಪೋ ಬಸ್ ಕಂಡಕ್ಟರ್ ಗುರು ದೇವರಮಣಿ ಅವರಿಂದ ಪ್ರಯಾಣಿಕರಿಗೂ ಮನರಂಜನೆ ಸಿಗುವಂತಾಗಿದೆ. ಡಾ.ರಾಜ್ ಅಪ್ಪಟ ಅಭಿಮಾನಿಯಾಗಿರುವ ದೇವರಮಣಿ ಅವರು, ಒತ್ತಡದಿಂದ ಮುಕ್ತಿ ಪಡೆಯಲು ಅಣ್ಣಾವ್ರ ಹಾಡುಗಳ ಮೊರೆ ಹೋಗಿದ್ದಾರೆ. ಹಾಡು ಹೇಳಿಕೊಂಡೇ ಶಕ್ತಿ ಯೋಜನೆ ಬಗ್ಗೆಯೂ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Conductor of KKRTCbbus of Arakera village belonging toDevadurga taluk ( Raichur district) popularising Shakti Scheme by his songs while distributing tickets in bus.@XpressBengaluru .@ramupatil_TNIE @Amitsen_TNIE .@CMofKarnataka .@RLR_BTM pic.twitter.com/18Tb1tzH4H
— Ramkrishna Badseshi (@Ramkrishna_TNIE) June 26, 2023

bengaluru bengaluru

ಹಾಡು ಹೇಳಿಕೊಂಡು ಮಹಿಳೆಯರಿಗೆ ದೇವರಮಣಿಯವರು ಟಿಕೆಟ್ ನೀಡುತ್ತಿರುವುದು, ಶಕ್ತಿ ಯೋಜನೆ ಬಗ್ಗೆ ಅರಿವು ಮೂಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಈ ಪ್ರದೇಶದ ಖ್ಯಾತ ಬರಹಗಾರರೂ ಆಗಿರುವ ಡಾ.ಶರದ್ ತಂಗಾ ಅವರೂ ಟ್ವೀಟ್ ಮಾಡಿದ್ದು, ಜನರನ್ನು ಸಂಪರ್ಕಿಸಲು, ಸಂದೇಶ ನೀಡಲು ಮನರಂಜನೆ ಎಂದಿಗೂ ವಿಫಲವಾಗುವುದಿಲ್ಲ. ಕೆಕೆಆರ್’ಟಿಸಿಯಿಂದ ಮೆಚ್ಚುಗೆ ಪಡೆಯಲು ಈ ವ್ಯಕ್ತಿ ಅರ್ಹರಾಗಿದ್ದಾರೆಂದು ಹೇಳಿಕೊಂಡಿದ್ದಾರೆ.


bengaluru

LEAVE A REPLY

Please enter your comment!
Please enter your name here