Home Uncategorized ಕೇಸರಿ ಬಿಕಿನಿ ವಿವಾದ: ದೀಪಿಕಾ ಪಡುಕೋಣೆ ಸ್ಥಾನದಲ್ಲಿ ಬಿಂದು ಗೌಡ ಫೋಟೋ ಎಡಿಟ್ ಮಾಡಿ ವೈರಲ್...

ಕೇಸರಿ ಬಿಕಿನಿ ವಿವಾದ: ದೀಪಿಕಾ ಪಡುಕೋಣೆ ಸ್ಥಾನದಲ್ಲಿ ಬಿಂದು ಗೌಡ ಫೋಟೋ ಎಡಿಟ್ ಮಾಡಿ ವೈರಲ್ ಮಾಡಿದ ಕಿಡಿಗೇಡಿಗಳು

10
0
bengaluru

ಶಾರುಖ್​ ಖಾನ್ (Shah Rukh Khan)​ ಅಭಿನಯದ ‘ಪಠಾಣ್​’ (Pathaan) ಸಿನಿಮಾದ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone) ಅವರು ಕೇಸರಿ ಬಣ್ಣ ಬಿಕಿನಿ ಧರಿಸಿರುವುದು ಕಟ್ಟಾರ್ ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂಬುದು ಕೆಲವರ ವಾದ. ಅಲ್ಲದೇ ಕೇಸರಿ ಬಣ್ಣದ ಬಿಕಿಸಿ ಧರಿಸಿ ‘ಬೇಷರಂ ರಂಗ್​’ (ನಾಚಿಕೆ ಇಲ್ಲದ ಬಣ್ಣ) ಎಂದು ಹಾಡಿರುವುದನ್ನು ಹಲವರು ಖಂಡಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕಿ ಬಿಂದು ಗೌಡ ಅವರು ಇದನ್ನು ಸಮರ್ಥಿಸಿಕೊಂಡಿದ್ದರು. ಇದರ ಬೆನ್ನಲ್ಲೆ ಕಿಡಿಗೇಡಿಗಳು ದೀಪಿಕಾ ಪಡುಕೋಣೆ ಸ್ಥಾನದಲ್ಲಿ ಬಿಂದು ಗೌಡ ಫೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಕಾಂಗ್ರೆಸ್ ಮಹಿಳಾ ನಾಯಕಿಯರಿಂದ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: Boycott Pathaan: ‘ಪಠಾಣ್​’ ಸಿನಿಮಾ ಬಹಿಷ್ಕಾರಕ್ಕೆ ಅಭಿಯಾನ ಶುರು; ಶಾರುಖ್​ ಚಿತ್ರಕ್ಕೆ ಸೋಲಿನ ಭಯ

ಈ ಹಿಂದೆ ಸಿ.ಟಿ ರವಿ ಫ್ಲೆಕ್ಸ್ ಹರಿದು ಸದ್ದು ಮಾಡಿದ್ದ ಕಾಂಗ್ರೆಸ್ ಮಾನವ ಹಕ್ಕು ವಿಭಾಗದ ಪದಾಧಿಕಾರಿ ಬಿಂದು ಗೌಡ ಅವರು ಕೇಸರಿ ಬಿಕಿನಿಯನ್ನು ಸಮರ್ಥಿಸಿಕೊಂಡಿದ್ದರು. ಇದರ ಬೆನ್ನಲ್ಲೆ ಕಿಡಿಗೇಡಿಗಳು ದೀಪಿಕಾ ಪಡುಕೋಣೆ ಸ್ಥಾನದಲ್ಲಿ ಬಿಂದು ಗೌಡ ಫೋಟೊ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇದರ ವಿರುದ್ದ ಮಹಿಳಾ ಕಾಂಗ್ರೆಸ್ ನಾಯಕಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: Prakash Raj: ‘ಬೇಷರಂ ರಂಗ್​’ ವಿವಾದ; ‘ಇದನ್ನೆಲ್ಲ ಎಲ್ಲಿಯವರೆಗೆ ಸಹಿಸಬೇಕು’ ಅಂತ ಪ್ರಶ್ನೆ ಮಾಡಿದ ಪ್ರಕಾಶ್​ ರಾಜ್​

bengaluru

‘ಪಠಾಣ್​’ ಚಿತ್ರದ ಮೂಲಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಲು ಶಾರುಖ್​ ಖಾನ್​ ಸಜ್ಜಾಗಿದ್ದಾರೆ. ಈ ಸಿನಿಮಾ 2023ರ ಜನವರಿ 25ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮುನ್ನವೇ ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಲಾಗಿದೆ. ಟ್ವಿಟರ್​​ನಲ್ಲಿ #BoycottPathan ಹ್ಯಾಶ್​ಟ್ಯಾಗ್​ ಟ್ರೆಂಡ್​ ಆಗಿದೆ.

ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್​ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಜಾನ್​ ಅಬ್ರಾಹಂ ಅಭಿನಯಿಸಿದ್ದಾರೆ. ಟೀಸರ್​ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದರು. ಆದರೆ ‘ಬೇಷರಂ ರಂಗ್​..’ ಹಾಡು ರಿಲೀಸ್​ ಆದಾಗಿನಿಂದ ವಿವಾದ ತಲೆ ಎತ್ತಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here