Home Uncategorized ಗರ್ಭದಲ್ಲಿದ್ದ ಮಗುವಿನ ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ: ಧಾರವಾಡದ ಸ್ತ್ರೀರೋಗ ತಜ್ಞೆಗೆ 11...

ಗರ್ಭದಲ್ಲಿದ್ದ ಮಗುವಿನ ಅಂಗವೈಕಲ್ಯತೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡದ ವೈದ್ಯೆ: ಧಾರವಾಡದ ಸ್ತ್ರೀರೋಗ ತಜ್ಞೆಗೆ 11 ಲಕ್ಷ ರು. ದಂಡ!

14
0
bengaluru

ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಧಾರವಾಡದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಪ್ರಶಾಂತ್ ನರ್ಸಿಂಗ್ ಹೋಮ್‌ನ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕ ಆಯೋಗವು `11.1 ಲಕ್ಷ ದಂಡ ವಿಧಿಸಿದೆ. ಧಾರವಾಡ: ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಧಾರವಾಡದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಪ್ರಶಾಂತ್ ನರ್ಸಿಂಗ್ ಹೋಮ್‌ನ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಅವರಿಗೆ ಜಿಲ್ಲಾ ಗ್ರಾಹಕ ಆಯೋಗವು `11.1 ಲಕ್ಷ ದಂಡ ವಿಧಿಸಿದೆ.

ಭಾವಿಕಟ್ಟಿ ಲೇಔಟ್ ನಿವಾಸಿ ಪರಶುರಾಮ ಘಾಟಗೆ ಎಂಬುವರು 2018ರಲ್ಲಿ ತಮ್ಮ ಪತ್ನಿ ಪ್ರೀತಿಯನ್ನು ಗರ್ಭಾವಸ್ಥೆಯಲ್ಲಿ ಪ್ರಶಾಂತ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಮಗುವಿನ ಬೆಳವಣಿಗೆಯಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದ್ದು, ಕೊನೆಗೆ ಪ್ರೀತಿ ಅಂಗವೈಕಲ್ಯವುಳ್ಳ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮಗು ಜನಿಸಿದ ನಂತರ, ದಂಪತಿ ನ್ಯಾಯಾಲಯದ ಮೆಟ್ಟಿಲೇರಿದರು,  ತಮ್ಮ  ಸಮಸ್ಯೆಗಳನ್ನು ವಿವರಿಸಿದರು.  ಮಗುವಿನ ಸ್ಥಿತಿಯನ್ನು ವೈದ್ಯರು ಬಹಿರಂಗಪಡಿಸಬೇಕಿತ್ತು ಎಂದು ಮೂವರು ನ್ಯಾಯಾಧೀಶರ ಪೀಠವು ಹೇಳಿದೆ. ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರಿಗೆ ತಿಳಿಯುತ್ತದೆ, ಸಮಸ್ಯೆ ಇದ್ದರೆ ಅದನ್ನು ತಿಳಿಸಬೇಕಿತ್ತು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.

ಪ್ರೀತಿ 2018 ರಲ್ಲಿ ಪ್ರಶಾಂತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆದರು ಮತ್ತು ಜನವರಿ 31, 2019 ರಂದು ಮಗು ಜನಿಸಿತ್ತು.  ಒಟ್ಟು 5 ಬಾರಿ ಸ್ಕ್ಯಾನ್ ಮಾಡಿದ್ದರೂ ಗರ್ಭದಲ್ಲಿನ ಮಗುವಿನ  ಬೆಳವಣಿಗೆ ಚೆನ್ನಾಗಿದೆ ಎಂದು ವೈದ್ಯೆ ಹೇಳಿದ್ದರು. ಹೆರಿಗೆ ನೋವು ಆರಂಭವಾಗಿ, ಆಸ್ಪತ್ರೆಗೆ ಹೋದಾಗ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲು ಡಾ. ಸೌಭಾಗ್ಯ ಕುಲಕರ್ಣಿ ಸಲಹೆ ನೀಡಿದ್ದರು.

LEAVE A REPLY

Please enter your comment!
Please enter your name here