Home Uncategorized ಫಿಫಾ ವಿಶ್ವಕಪ್​ ಫೈನಲ್​ ವೇಳೆ ರವಿ ಶಾಸ್ತ್ರಿಗೆ ಕಿಸ್ ಮಾಡಿದ ರಣವೀರ್ ಸಿಂಗ್; ಇಲ್ಲಿದೆ ವೈರಲ್...

ಫಿಫಾ ವಿಶ್ವಕಪ್​ ಫೈನಲ್​ ವೇಳೆ ರವಿ ಶಾಸ್ತ್ರಿಗೆ ಕಿಸ್ ಮಾಡಿದ ರಣವೀರ್ ಸಿಂಗ್; ಇಲ್ಲಿದೆ ವೈರಲ್ ವಿಡಿಯೋ

2
0
bengaluru

ರಣವೀರ್ ಸಿಂಗ್ (Ranvir Singh) ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಅವರು ಸದಾ ಕ್ರೇಜಿ ಆಗಿ ನಡೆದುಕೊಳ್ಳುತ್ತಾರೆ. ಈ ಕಾರಣಕ್ಕೂ ಅವರು ಆಗಾಗ ಸುದ್ದಿ ಆಗುತ್ತಾರೆ. ಈಗ ರಣವೀರ್ ಸಿಂಗ್ ಅವರ ಜತೆ ಕಳೆದ ಕ್ಷಣದ ವಿಡಿಯೋ ಅನ್ನು ಟೀಂ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ಖುಷಿಯಿಂದ ರವಿ ಶಾಸ್ತ್ರಿ ಕೆನ್ನೆಗೆ ರಣವೀರ್ ಕಿಸ್ ಮಾಡಿದ್ದಾರೆ.

ಕತಾರ್‌ನ ಲುಸೇಲ್ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ 2022ನ ಅಂತಿಮ ಪಂದ್ಯ ನಡೆಯಿತು. ಎರಡೂ ತಂಡಗಳು ತಲಾ ಮೂರು ಗೋಲ್ ಬಾರಿಸಿದರಿಂದ ಪೆನಾಲ್ಟಿ ಶೂಟ್-ಔಟ್‌ ನಡೆಸಲಾಯಿತು. ಈ ವೇಳೆ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಅರ್ಜೆಂಟೀನಾ ಸೋಲಿಸಿದೆ. ಈ ಮೂಲಕ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ. ಈ ಮ್ಯಾಚ್​ನಲ್ಲಿ ಟ್ರೋಫಿಯನ್ನು ಅನಾವರಣ ಮಾಡಿದ್ದು ದೀಪಿಕಾ ಪಡುಕೋಣೆ. ರಣವೀರ್ ಸಿಂಗ್ ಕೂಡ ಸ್ಟೇಡಿಯಂನಲ್ಲೇ ಇದ್ದರು. ಈ ಸಂದರ್ಭದಲ್ಲಿ ರವಿ ಶಾಸ್ತ್ರಿ ಹಾಗೂ ರಣವೀರ್ ಪರಸ್ಪರ ಭೇಟಿ ಆಗಿದ್ದಾರೆ.

ರಣವೀರ್ ಸಿಂಗ್ ಅವರು ಫಿಫಾ ವರ್ಡ್​​ಕಪ್ ನೋಡುವಾಗ ಸಖತ್ ಎಗ್ಸೈಟ್ ಆಗಿದ್ದರು. ಇದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ವಿಡಿಯೋವನ್ನು ರವಿ ಶಾಸ್ತ್ರಿ ಅವರು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ರಣವೀರ್ ಸಿಂಗ್ ಕಮೆಂಟ್ ಮಾಡಿದ್ದಾರೆ. ‘ರವಿ ಅವರೇ ಎಂತಹ ಕ್ರೇಜಿ ಅನುಭವ. ಇದನ್ನು ಮರೆಯಲು ಸಾಧ್ಯವಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.

ರಣವೀರ್ ಸಿಂಗ್ ಅವರನ್ನು ಫಿಫಾ ವರ್ಡ್​ಕಪ್​ನಲ್ಲಿ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅವರು ಶನಿವಾರ (ಡಿಸೆಂಬರ್ 17) ನಡೆದ ಪ್ರೋ ಕಬ್ಬಡ್ಡಿ ಫೈನಲ್ ಆಟದಲ್ಲಿ ಭಾಗಿ ಆಗಿದ್ದರು. ಇದರ ಬೆನ್ನಲ್ಲೇ ಅವರು ಫಿಫಾ ವರ್ಡ್​​ಕಪ್​ನಲ್ಲಿ ಭಾಗಿ ಆಗಿರುವ ವಿಚಾರ ಕೆಲವರಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ‘ಹಿಂದಿನ ದಿನ ಪಿಕೆಎಲ್​ ಫೈನಲ್​ ಈಗ ವಿಶ್ವ ಕಪ್​ ಫೈನಲ್​. ನೀವು ಗ್ರೇಟ್​’ ಎಂದು ಕೆಲವರು ಬರೆದುಕೊಂಡಿದ್ದಾರೆ.

bengaluru

 

View this post on Instagram

 

A post shared by Ravi Shastri (@ravishastriofficial)

ಇದನ್ನೂ ಓದಿ: ವಿಚಿತ್ರ ವೇಷದಲ್ಲಿ ವಿದೇಶಿ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ ರಣವೀರ್ ಸಿಂಗ್; ವೈರಲ್ ಆಯ್ತು ಫೋಟೋ

ಸಿನಿಮಾ ವಿಚಾರಕ್ಕೆ ಬರೋದಾದರೆ ರಣವೀರ್ ಸಿಂಗ್ ಅವರು ‘ಸರ್ಕಸ್​’ ಚಿತ್ರವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡಬಲ್ ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 19690ರಲ್ಲಿ ಸಿನಿಮಾದ ಕಥೆ ಸಾಗಲಿದೆ. ವರುಣ್ ಶರ್ಮಾ ಕೂಡ ಸಿನಿಮಾದಲ್ಲಿ ಡ್ಯುಯಲ್ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

bengaluru

LEAVE A REPLY

Please enter your comment!
Please enter your name here