ಬೆಂಗಳೂರು:
ಬಾಲಿವುಡ್ ನ ಖ್ಯಾತ ನಟ ಫರಾಜ್ ಖಾನ್ ನಿಧನರಾಗಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಫರಾಜ್ ಖಾನ್ ಕಳೆದ ಒಂದು ವರ್ಷದಿಂದ ವಿಪರೀತ ಕೆಮ್ಮು ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ಒಂದು ತಿಂಗಳ ಹಿಂದೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ ಬಳಿಕ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಈ ಕುರಿತು ಬಾಲಿವುಡ್ ನಟಿ ಪೂಜಾ ಭಟ್ ಟ್ವೀಟ್ ಮಾಡಿದ್ದು, ‘ಹೃದಯ ಭಾರವಾಗಿದೆ. ಫರಾಜ್ ಖಾನ್ ನಮ್ಮನ್ನು ಅಗಲಿದ್ದಾರೆ. ಅವರಿಗೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆಗಳು. ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸಂತಾಪ ಸೂಚಿಸಿದ್ದಾರೆ.
ತೊಂಬತ್ತರ ದಶಕದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದ ಫರಾಜ್ ಖಾನ್ ‘ಮೆಹಂದಿ’, ‘ಫರೇಬ್’, ‘ದುಲ್ಹಾನ್ ಬನೂ ಮೈನ್ ತೇರಿ’ ಮತ್ತು ‘ಚಂದ್ ಬುಜ್ ಗಯಾ’ ಸಿನಿಮಾಗಳ ಮೂಲಕ ಖ್ಯಾತಿಗಳಿಸಿದ್ದರು.
ಕಳೆದ ಕೆಲವು ದಿನಗಳ ಹಿಂದೆ ಫರಾಜ್ ಖಾನ್ ಸಹೋದರ ಫರಾಜ್ ಖಾನ್ ಆರೋಗ್ಯ ಸ್ಥಿತಿ ಬಗ್ಗೆ ಬಹಿರಂಗ ಪಡಿಸಿ, ಮೆದುಳಿನಲ್ಲಿ ಹರ್ಪಿಸ್ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ’ ಎಂದು ತಿಳಿಸಿದ್ದರು. ಅವರ ಚಿಕಿತ್ಸೆಗಾಗಿ ಪೂಜಾ ಭಟ್, ನಟ ಸಲ್ಮಾನ್ ಖಾನ್ ಆರ್ಥಿಕ ನೆರವು ನೀಡಿದ್ದರು.