Home Uncategorized ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಳ್ಳತನ; ಕಡತ, ಕಂಪ್ಯೂಟರ್​ಗಳ ಕಳವು

ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಳ್ಳತನ; ಕಡತ, ಕಂಪ್ಯೂಟರ್​ಗಳ ಕಳವು

1
0
bengaluru

ಬೆಂಗಳೂರು: ನಗರದ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಳ್ಳತನವಾಗಿದೆ. ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿ ಮೂರು ಕಬೋರ್ಡ್​​ಗಳಲ್ಲಿದ್ದ ಕಡತ, 3 ಕಂಪ್ಯೂಟರ್​ಗಳನ್ನು ಕಳ್ಳತನ ಮಾಡಲಾಗಿದೆ. ರಜೆ ಹಿನ್ನೆಲೆ ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಖದೀಮರು ಕಚೇರಿಗೆ ನುಗ್ಗಿ ತಮ್ಮ ಕೈ ಚಳಕ ತೋರಿಸಿದ್ದಾರೆ. ಇತ್ತೀಚೆಗೆ PWD ಕಚೇರಿಯಲ್ಲಿ ‌ಹೊಸ ಕಂಪ್ಯೂಟರ್​ ಅಳವಡಿಸಲಾಗಿತ್ತು. ಕಳ್ಳರು ಕಂಪ್ಯೂಟರ್ ‌ಹಾಗೂ ದಾಖಲೆಗಳನ್ನು ಕದ್ದಿದ್ದಾರೆ. ಸದ್ಯ ಈ ಬಗ್ಗೆ ಸಹಾಯಕ‌ ಕಾರ್ಯಪಾಲಕ ಅನಂತ್ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗ್ರಾಮ‌ ಆಡಳಿತ ಅಧಿಕಾರಿಗಳ ಅನಧಿಕೃತ ಕಚೇರಿಗಳ ಮೇಲೆ ದಾಳಿ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ತಹಶೀಲ್ದಾರ್​​ ದಿಢೀರ್ ದಾಳಿ ನಡೆಸಿದ್ದಾರೆ. ಗ್ರಾಮ‌ ಆಡಳಿತ ಕಂದಾಯ ನಿರೀಕ್ಷಕರ ಅನಧಿಕೃತ ಕಚೇರಿಗಳ ಮೇಲೆ ರೇಡ್ ಮಾಡಲಾಗಿದ್ದು ಮಂಡ್ಯದ ನಾಗಮಂಗಲ ಟೌನ್ ನಲ್ಲಿ ಅನಧಿಕೃತ ಕಚೇರಿ ಹೊಂದಿದ್ದ 10ಕ್ಕೂ ಹೆಚ್ಚು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಕೇಂದ್ರಸ್ಥಾನದಲ್ಲಿ ಕರ್ತವ್ಯ ನಿರ್ವಹಿಸದೆ ಅನಧಿಕೃತವಾಗಿ ಕಚೇರಿ ಮಾಡಿಕೊಂಡಿದ್ದ ಅಧಿಕಾರಿಗಳಿಗೆ ತಹಶೀಲ್ದಾರ್ ನಂದೀಶ್ ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರಸ್ಥಾನದಲ್ಲಿ ಕೆಲಸ ಮಾಡದೇ ಸಾರ್ವಜನಿಕರನ್ನ ಅಲೆಸುತ್ತಿದ್ದ ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕ ಅಧಿಕಾರಿಗಳ ಮೈಗಳ್ಳತನದ ಬಗ್ಗೆ ಮಾಹಿತಿ ಪಡೆದ ನಾಗಮಂಗಲ ತಹಸಿಲ್ದಾರ್ ನಂದೀಶ್ ದಿಢೀರ್ ದಾಳಿ ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಓದನ್ನ ಅರ್ಧಕ್ಕೆ ನಿಲ್ಲಿಸಿ ಲವ್ವಲ್ಲಿ ಬಿದ್ದಿದ್ದ ಸುಂದರಿ, ಎರಡನೆಯವನ ಸಂಗದಲ್ಲಿದ್ದಳು! ಪ್ರೀತಿಯ ಅರಸಿ ಬಂದವಳು ನಿಗೂಢವಾಗಿ ಹೆಣವಾದಳು!

bengaluru

ದಾಳಿ ವೇಳೆ ಅಧಿಕಾರಿಗಳಿಗಾಗಿ ಕಾಯುತ್ತಿದ್ದ ಸಾರ್ವಜನಿಕರ ಅಹವಾಲು ಆಲಿಸಿದ್ದಾರೆ. ಬಳಿಕ ಅನಧಿಕೃತ ಕಚೇರಿಯಲ್ಲಿದ್ದ ಗ್ರಾಮಲೆಕ್ಕಿಗ ಹಾಗೂ ಗ್ರಾಮ‌ ಸಹಾಯಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಚೇರಿ ಏನಕ್ಕೆ ಮಾಡಿಕೊಂಡಿದ್ದೀರಿ? ಎಷ್ಟು ದಿನದಿಂದ ಕಚೇರಿ ಇದೆ. ನೀವು ಹಳ್ಳಿಯಲ್ಲಿರಬೇಕು, ಇಲ್ಲ ನಾಡ ಕಚೇರಿಯಲ್ಲಿರಬೇಕು. ಇಲ್ಲಿ ಏನ್ ಮಾಡ್ತಿದ್ದೀರಾ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿಯಾಗಿ ವೃದ್ಧ, 9 ತಿಂಗಳ ಮಗು ಸಾವು

ತುಮಕೂರು: ತುರುವೇಕೆರೆ ತಾಲೂಕಿನ ಆನೆಮಳೆ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಕೂಟರ್​ನಲ್ಲಿದ್ದ ಸವಾರ ನಿಂಗಪ್ಪ(65) ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಹಾಗೂ 9 ತಿಂಗಳ ಹೆಣ್ಣುಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಗಾಯಾಳು ಮಹಿಳೆಗೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 9 ತಿಂಗಳ ಮಗು ಸೇರಿ ಒಟ್ಟು ಮೂವರು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

bengaluru

LEAVE A REPLY

Please enter your comment!
Please enter your name here